More

    ನಂ. 1 ಪಟ್ಟಕ್ಕೆ ಇಂಗ್ಲೆಂಡ್-ಆಸೀಸ್ ಫೈಟ್, ಟಿ20 ಸರಣಿಯ ಫಲಿತಾಂಶ ಭಾರತಕ್ಕೂ ಲಾಭ ತರಬಹುದು!

    ಸೌಥಾಂಪ್ಟನ್: ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿ ಶುಕ್ರವಾರದಿಂದ ನಡೆಯಲಿದೆ. ಈ ಸರಣಿಯಲ್ಲಿ ಐಸಿಸಿ ಟಿ20 ರ‌್ಯಾಂಕಿಂಗ್‌ನ ನಂ. 1 ಪಟ್ಟಕ್ಕೂ ಪೈಪೋಟಿ ನಡೆಯಲಿದೆ. ಅಲ್ಲದೆ ಈ ಸರಣಿಯ ಫಲಿತಾಂಶ ಭಾರತಕ್ಕೂ ಲಾಭ ತರುವ ನಿರೀಕ್ಷೆ ಇದೆ. ಹೇಗಂತೀರಾ? ಈ ಸ್ಟೋರಿ ಓದಿ…

    ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಪ್ರಸಕ್ತ ಆಸ್ಟ್ರೇಲಿಯಾ ತಂಡ 278 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಂಡ 268 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. 266 ಅಂಕ ಹೊಂದಿರುವ ಭಾರತ ತಂಡ 3ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಸರಣಿಯನ್ನು ಜಯಿಸಿದರೆ ಇನ್ನೊಂದು ಅಂಕ ಸಂಪಾದಿಸುವ ಮೂಲಕ ನಂ. 1 ಪಟ್ಟವನ್ನೂ ಕಾಯ್ದುಕೊಳ್ಳುವ ಅವಕಾಶ ಹೊಂದಿದೆ. ಒಂದು ವೇಳೆ ಆಸೀಸ್ 1-2ರಿಂದ ಸರಣಿ ಸೋತರೆ, 8 ಅಂಕ ಕಳೆದುಕೊಳ್ಳಲಿದೆ. ಆದರೆ ಆಗಲೂ ನಂ. 1 ಪಟ್ಟವನ್ನು ಕಾಯ್ದುಕೊಳ್ಳಲಿದೆ.

    ಮತ್ತೊಂದೆಡೆ ಇಂಗ್ಲೆಂಡ್ ತಂಡ ಸರಣಿಯನ್ನು 3-0 ಕ್ಲೀನ್‌ಸ್ವೀಪ್ ಸಾಧಿಸಿದರೆ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ನಂ. 1 ಪಟ್ಟಕ್ಕೇರಲಿದೆ. ಆಗ ಇಂಗ್ಲೆಂಡ್ ಅಂಕ ಗಳಿಕೆ 275ಕ್ಕೇರಿದರೆ, ಆಸೀಸ್ ಅಂಕ 270ಕ್ಕೆ ಕುಸಿಯಲಿದೆ. 2-1ರಿಂದ ಸರಣಿ ಜಯಿಸಿದರೆ ಇಂಗ್ಲೆಂಡ್‌ಗೆ 3 ಅಂಕ ಲಭಿಸಿದರೂ, 2ನೇ ಸ್ಥಾನದಲ್ಲೇ ಉಳಿದುಕೊಳ್ಳಲಿದೆ.

    ಇದನ್ನೂ ಓದಿ:  ಸತತ 8ನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸಿದ ನೈಟ್‌ರೈಡರ್ಸ್‌

    ಇನ್ನು 3 ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ ಲಾಭ ಆಗಬೇಕಾದರೆ, ಆಸ್ಟ್ರೇಲಿಯಾ ಕ್ಲೀನ್‌ಸ್ವೀಪ್ ಸಾಧಿಸಬೇಕು. ಆಗ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರಲಿದೆ. ಇಂಗ್ಲೆಂಡ್ ಆಗ 6 ಅಂಕ ಕಳೆದುಕೊಂಡು 262 ಅಂಕಗಳಿಗೆ ಕುಸಿಯಲಿರುವುದು ಇದಕ್ಕೆ ಕಾರಣ. ಒಂದು ವೇಳೆ ಆಸೀಸ್ 2-1ರಿಂದ ಸರಣಿ ಜಯಿಸಿದರೆ, ಭಾರತ 3ನೇ ಸ್ಥಾನದಲ್ಲೇ ಉಳಿಯಲಿದೆ. ಅಲ್ಲದೆ ಇಂಗ್ಲೆಂಡ್ ತಂಡ 3-0 ಅಥವಾ 2-1ರಿಂದ ಸರಣಿ ಜಯಿಸಿದರೂ, ಭಾರತ ತಂಡ 3ನೇ ಸ್ಥಾನದಲ್ಲೇ ಉಳಿದುಕೊಳ್ಳಲಿದೆ.

    ಕ್ರೀಡಾ ಪ್ರಶಸ್ತಿಗೆ ರಾಜೀವ್ ಗಾಂಧಿ ಹೆಸರೇಕೆ? ಬದಲಾಯಿಸಿ ಎಂದ ಕುಸ್ತಿಪಟು ಬಬಿತಾ ಪೋಗಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts