More

    ‘ಪುಟಿನ್​ ವಿರುದ್ಧದ ವಾರಂಟ್​ ಟಾಯ್ಲೆಟ್​ ಪೇಪರ್​, ಅದನ್ನು ಎಲ್ಲಿ ಬಳಸುತ್ತಾರೆ ಎಂದು ಹೇಳಬೇಕಾಗಿಲ್ಲ’ ಎಂದ ರಷ್ಯನ್​ ರಾಜಕಾರಣಿ..!

    ನವದೆಹಲಿ: ವ್ಲಾಡಿಮಿರ್ ಪುಟಿನ್​ರನ್ನು ಬಂಧಿಸುವಂತೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್​ ಹೊರಡಿಸಿದ್ದ ವಾರಂಟ್‌ಗೆ ರಷ್ಯಾದ ಉನ್ನತ ರಾಜಕಾರಣಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಪುಟಿನ್​ ವಿರುದ್ಧದ ವಾರೆಂಟ್​ ಅನ್ನು ‘ಟಾಯ್ಲೆಟ್ ಪೇಪರ್’ಗೆ ಹೋಲಿಸಿದ್ದಾರೆ.

    ಪುಟಿನ್ ಅವರ ನಿಕಟ ಮಿತ್ರ ಮತ್ತು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಹೊರಡಿಸಿದ ವಾರೆಂಟ್​ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. 2008 ಮತ್ತು 2012 ರ ನಡುವೆ ಕ್ರೆಮ್ಲಿನ್‌ನಲ್ಲಿ ಉನ್ನತ ಹುದ್ದೆಯನ್ನು ಹೊಂದಿದ್ದ ಮೆಡ್ವೆಡೆವ್ “ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಈ ಕಾಗದವನ್ನು ಎಲ್ಲಿ ಬಳಸಬೇಕು ಎಂಬುದನ್ನು ವಿವರಿಸುವ ಅಗತ್ಯವಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಯೂಕ್ರೇನ್​-ರಷ್ಯಾ ಯುದ್ಧ: ವ್ಲಾಡಿಮಿರ್​ ಪುತಿನ್​ ವಿರುದ್ಧ ಬಂಧನ ವಾರೆಂಟ್​ ಜಾರಿ ಮಾಡಿದ ಐಸಿಸಿ

    ಯುಕ್ರೇನ್‌ನಲ್ಲಿ ಯುದ್ಧದ ಜತೆಗೆ ಪುಟಿನ್​ ಮಕ್ಕಳ ಅಪಹರಣದಲ್ಲಿ ತೊಡಗಿಸಿಕೊಂಡಿದ್ದು ಅದರೊಂದಿಗೆ ಇತರೆ ಯುದ್ಧ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರ ವಿರುದ್ಧ ಅಂತರಾಷ್ಟ್ರೀಯ ಕೋರ್ಟ್​ ವಾರೆಂಟ್​ ಜಾರಿ ಮಾಡಿದೆ.

    ರಷ್ಯಾದ ಆಕ್ರಮಣದ ಆರಂಭದಿಂದಲೂ, ಸುಮಾರು 14,000 ಉಕ್ರೇನಿಯನ್ ಮಕ್ಕಳನ್ನು ಅಪಹರಿಸಲಾಗಿದೆ ಎಂದು ಮಕ್ಕಳ ಹಕ್ಕುಗಳ ಉಕ್ರೇನ್ ಅಧ್ಯಕ್ಷೀಯ ಸಲಹೆಗಾರ ಡೇರಿಯಾ ಹೆರಾಸಿಮ್ಚುಕ್ ಕಳೆದ ತಿಂಗಳು ವರದಿ ಮಾಡಿದ್ದಾರೆ. ಪುಟಿನ್ ವೈಯಕ್ತಿಕ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಮೆಡ್ವೆಡೆವ್ ಪುಟಿನ್ ಅವರಿಗೆ ನಿಷ್ಠಾವಂತ ಸೇವಕ. ಅವರು ಪ್ರಸ್ತುತ ರಷ್ಯಾದ ಒಕ್ಕೂಟದ ಭದ್ರತಾ ಮಂಡಳಿಯ ಉಪ ಅಧ್ಯಕ್ಷರಾಗಿದ್ದಾರೆ. 2020 ರವರೆಗೆ ಪುಟಿನ್​ ಅಡಿಯಲ್ಲಿ ಪ್ರಧಾನ ಮಂತ್ರಿಯಾಗಿದ್ದರು. ಮೆಡ್ವೆಡೆವ್ ಪುಟಿನ್​ರ ನಿಷ್ಠಾವಂತ ಸೇವಕರಾಗಿದ್ದು ಪ್ರಸ್ತುತ ರಷ್ಯಾದ ಒಕ್ಕೂಟದ ಭದ್ರತಾ ಮಂಡಳಿಯ ಉಪ ಅಧ್ಯಕ್ಷರಾಗಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts