More

    ‘ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ’ ಎಂದು ಬಿಜೆಪಿ ನಿಯೋಗದಿಂದ ಪೊಲೀಸ್​ ಕಮೀಷನರ್​ಗೆ ದೂರು!

    ಬೆಂಗಳೂರು: ವಿಜಯನಗರದ ಬಿಜೆಪಿ ನಿಯೋಗ ಪೊಲೀಸ್ ಕಮಿಷನರ್​ರನ್ನು ಭೇಟಿ ಮಾಡಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದಿದೆ ಎನ್ನಲಾದ ಹಲ್ಲೆಯ ಬಗ್ಗೆ ದೂರು ನೀಡಿದ್ದಾರೆ. ಗಲಾಟೆ ನಡೆದ ಹಿನ್ನೆಲೆಯಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮವನ್ನು ಕೂಡಾ ರದ್ದು ಮಾಡಲಾಗಿದೆ ಎಂದು ಕಮಿಷನರ್ ಹೇಳಿದ್ದಾರೆ.

    ‘ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಅಧಿಕಾರಿಗಳು ಕೂಡಾ ನಮ್ಮ ಕಾರ್ಯಕರ್ತರನ್ನ ಟಾರ್ಗೆಟ್ ಮಾಡುವ ರೀತಿಯಲ್ಲಿ ಕಂಡು ಬಂದಿದೆ. ಅಧಿಕಾರಿಗಳ ನ್ಯೂನ್ಯತೆ ಕಂಡು ಬಂದ್ರೆ ಕ್ರಮ ಅಂತ ಕಮಿಷನರ್ ಹೇಳಿದ್ದಾರೆ.

    ನಿನ್ನೆ ಬೇಕಂತಲೇ ಪ್ಲೆಕ್ಸ್ ಕಟ್ಟಲು ಬಂದಿದ್ದಾರೆ. ಈ ಸಂದರ್ಭ ಕಲ್ಲು ಬೀಸಿದ್ದಾರೆ‌. ಇದರಿಂದಾಗಿ ಗಾಡಿಗಳು ಜಖಂ ಆಗಿದೆ. ಆಗ ಪೊಲೀಸರೂ ಲಾಠಿ ಚಾರ್ಜ್ ಮಾಡಿದ್ದಾರೆ. ಇದು ಕಾಂಗ್ರೆಸ್ ಗೂಂಡಗಳು ಮಾಡಿರೋದು. ಅಲ್ಲಿ ವೆಪನ್ಸ್ ಇರಲಿಲ್ಲ. ಸೋಮಣ್ಣ ಮಗ ಅಲ್ಲಿಗೆ ಬರಲಿಲ್ಲ. ಕೊನೆ ಸಂದರ್ಭದಲ್ಲಿ ಅವ್ರು ಬಂದಿದ್ದರು’ ಎಂದು ಘಟನೆಯ ಬಗ್ಗೆ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

    ದೂರಿನಲ್ಲಿ ”ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿ ಆಟದ ಮೈದಾನದಲ್ಲಿ ದಿನಾಂಕ: 17.03.2023 ಮತ್ತು 18.03.2023ರಂದು ಎರಡು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸಲು ಬಿಬಿಎಂಪಿ ವತಿಯಿಂದ ಅನುಮತಿಯನ್ನು ಪಡೆಯಲಾಗಿತ್ತು. ಈ ಸಂಬಂಧ ಪಂದ್ಯಾವಳಿಗಳ ಬಗ್ಗೆ ಚರ್ಚಿಸಲು ಆಯೋಜಕರು ಮತ್ತು ಅವರ ಸ್ನೇಹಿತರು ಮೈದಾನದಲ್ಲಿ ಸೇರಿದ್ದರು.

    ಈ ಸಂದರ್ಭದಲ್ಲಿ ಸಂಜೆ ಸುಮಾರು 04.15ರ ಸಮಯದಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಶಾಸಕರಾದ ಎಂ.ಕೃಷ್ಣಪ್ಪ ಮತ್ತು ಮಾಜಿ ಶಾಸಕರಾದ ಶ್ರೀ ಪ್ರಿಯಕೃಷ್ಣರವರ ಬೆಂಬಲಿಗರು ಕಾಂಗ್ರೆಸ್ ಮುಖಂಡರುಗಳಾದ ಶ್ರೀಮತಿ ಪ್ರಮೀಳಾ, ಶ್ರೀಮತಿ ಪ್ರೇಮಲತಾ, ಶ್ರೀಮತಿ ಜಲಜಾ, ಹೆಚ್ ಕುಮಾರ್, ಲಕ್ಕಪ್ಪ, ಉಮಾ ಶಂಕರ್, ಶ್ರೀನಾಥ್, ರಾಮಕೃಷ್ಣ, ಪುರುಷೋತ್ತಮ್, ಸಾಬುದ್ದೀನ್, ಮತ್ತು ಲಕ್ಕಣ್ಣ ಇವರುಗಳಿಂದ ಶ್ರೀಮತಿ ರಮ್ಯ, ಶ್ರೀಮತಿ ಮಂಗಳ, ಶ್ರೀಮತಿ ಅಶ್ವಿನಿ, ಶ್ರೀಮತಿ ಆಶಾ ಶೆಟ್ಟಿಯವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

    ನಂತರ ತಿಮ್ಮೇನಹಳ್ಳಿ ರಾಜಪ್ಪ, ಪ್ರಶಾಂತ್ ನರಸಿಂಹ, ಗಂಗೊಂಡನಹಳ್ಳಿ ಚೇತನ್, ಹಂದಿ ಚೇತನ್, ಗಿರಿ ಅಲಿಯಾಸ್ ಡ್ರಾಗರ್, ಹೋಟೆಲ್ ಪ್ರತಾಪ್‌, ಯೋಗೇಶ್ ಅಲಿಯಾಸ್ ತಿಮ್ಮೇನಹಳ್ಳಿ ಯೋಗಿ, ಆದಿತ್ಯ ಅಲಿಯಾಸ್ ಆದಿ, ಅಲಿಯಾಸ್ ರಾಬ್ರಿ ಮರಾಠಿ, ಅಭಿ ಅಲಿಯಾಸ್ ಬುಕ್ಕಿ, ಹೇಮಂತ್ ಅಲಿಯಾಸ್ ಜೋಗಿ, ಚಂದ್ರ ಅಲಿಯಾಸ್ ಮಲ್ಲಯ್ಯ, ಅನಿಲ್ ಗೌಡ ಅಲಿಯಾಸ್ ಪಿಂಪ್, ಕೇಶವ ಅಲಿಯಾಸ್ ಕೋತಿ ಕೇಶವ, ಮಧೂಸೂದನ್ ಅಲಿಯಾಸ್ ಪುಂಗ, ಲೋಕಿ ಅಲಿಯಾಸ್ ಪೇಪರ್ ಲೋಕಿ, ಗುರು ಅಲಿಯಾಸ್ ಗುರೂಜಿ, ಚಿಕ್ಕಣ್ಣ ಅಲಿಯಾಸ್ ಚಾನ್, ಮಾರೇನಹಳ್ಳಿ ಮಂಜು ಅಲಿಯಾಸ್ ಫ್ರಾಡ್ ಮಂಜು, ಕಿರಣ್ ಅಲಿಯಾಸ್ ಕೊರಮ, ಮದನ್, ಆನಂದ, ಮಾರೇನಹಳ್ಳಿ ಚೇತು ಅಲಿಯಾಸ್ ದೋಕಾ, ದೀಪಕ್ ಅಲಿಯಾಸ್ ಕುಡುಕ, ಕೃಷ್ಣಮೂರ್ತಿ ಮೈದಾನದ ಗೇಟ್ ಹಾರಿ ಒಳನುಗ್ಗಿ ಬಿಜೆಪಿ ಪಕ್ಷದ ಮುಖಂಡರ ಕಾರ್‌ಗಳನ್ನು ಜಖಂಗೊಳಿಸಿದರು.

    ಅದನ್ನು ಪ್ರಶ್ನಿಸಿದವರ ಮೇಲೆ ಕಲ್ಲು ತೂರಾಟ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅರುಣ್ ಕುಮಾರ್.ಡಿ.ಪಿ, ಕೆ.ಪಿ ಮಂಜುನಾಥ್, ಜಗದೀಶ್‌, ಮಧುಕರ್ ಹಾಗೂ ಮೈದಾನದ ಕಾವಲುಗಾರರಾದ ಅಮ‌ ಮೇಲೂ ಸಹ ಹಲ್ಲೆ ನಡೆಸಿದ್ದಾರೆ. ಎಂ.ಕೃಷ್ಣಪ್ಪ ಮತ್ತು ಪ್ರಿಯಕೃಷ್ಣರವರ ಬೆಂಬಲಿಗರಾದ ದಾಸ, ಸ್ವಾಮಿ ಅಲಿಯಾಸ್ ತೋಂಟ, ಕೃಷ್ಣ, ಬೆಟ್ಟ, ಶ್ರೀನಿವಾಸ್, ಪೋತ ಅಲಿಯಾಸ್ ಸ್ವಾಮಿ, ಶ್ರೀಧರ್ ಅಲಿಯಾಸ್ ಮುಳ್ಳ, ಪೂಜಪ್ಪ, ಶಿವರಾಜ್ ಯಾದವ್, ಬಿಜೆಎಸ್ ಆಟದ ಮೈದಾನದ ಮುಂದೆ ಕ್ರಿಕೆಟ್‌ ಪಂದ್ಯಾವಳಿಗೆ ಕಟ್ಟಿದ್ದ ಬ್ಯಾನರ್‌ಗಳನ್ನು ಹರಿದು ಹಾಕುತ್ತಿದ್ದಾಗ ಅದನ್ನು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಎಂ.ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಬೆಂಬಲಿಗರು ರೌಡಿಗಳಂತೆ ವರ್ತಿಸಿ, ಆಟೋರಿಕ್ಷಾಗಳಿಂದ ಕಲ್ಲು, ಇಟ್ಟಿಗೆ, ದೊಣ್ಣೆಗಳನ್ನು ತರಿಸಿಕೊಂಡು ಮಹಿಳೆಯರ ಮೇಲೂ ಸಹ ಹಲ್ಲೆ ಮಾಡಿರುತ್ತಾರೆ.

    ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳೊಂದಿಗೂ ವಾಗ್ವಾದ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರದ ರೀತಿಯಲ್ಲಿ ವರ್ತಿಸಿ ಕಾನೂನನ್ನು ಗೌರವಿಸದೆ ಉಲ್ಲಂಘಿಸಿದ್ದು ವಿಷಯ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿರುತ್ತಾರೆ. ಘಟನೆಯಲ್ಲಿ ಗಾಯಗೊಂಡ ಡಿ.ಪಿ ಅರುಣ್ ಕುಮಾರ್ ಎಂಬುವವರಿಗೆ ತೀವ್ರ ಗಾಯಗೊಂಡು ಗಾಯತ್ರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಇದುವರೆಗೂ ಪೊಲೀಸರು ಅವರ ಹೇಳಿಕೆಯನ್ನು ಆಧರಿಸಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಈ ಘಟನೆಗೆ ಕಾರಣಕರ್ತರಾದ ಎಂ.ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಅವರ ಬೆಂಬಲಿಗರುಗಳನ್ನು ಪತ್ತೆ ಮಾಡಿ ಕಾನೂನು ಮೂಲಕ ಕ್ರಮಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರಲಾಗಿದೆ” ಎಂದು ಬರೆಯಲಾಗಿದೆ.

     

     

    'ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ' ಎಂದು ಬಿಜೆಪಿ ನಿಯೋಗದಿಂದ ಪೊಲೀಸ್​ ಕಮೀಷನರ್​ಗೆ ದೂರು! 'ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ' ಎಂದು ಬಿಜೆಪಿ ನಿಯೋಗದಿಂದ ಪೊಲೀಸ್​ ಕಮೀಷನರ್​ಗೆ ದೂರು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts