More

    ಕ್ರೈಂ ಪ್ಯಾಟ್ರೋಲ್​ ನೋಡಿ ತಾಯಿಯ ದೇಹ ಕತ್ತರಿಸಿದ ಯುವತಿ! ಪ್ರಕರಣದ ಹಿಂದಿದೆ ಹೃದಯ ಹಿಂಡುವ ನೋವಿನ ಕಥೆ…

    ನವದೆಹಲಿ: ಕ್ರೈ ಪ್ಯಾಟ್ರೋಲ್​ ಎನ್ನುವ ಕಾರ್ಯಕ್ರಮದ ಬಗ್ಗೆ ಎಲ್ಲರೂ ಒಮ್ಮೆಯಾದರೂ ಕೇಳಿರುತ್ತೀರಿ. ಅದರ ಸಾರ್ವಕಾಲಿಕ ಪ್ರಖ್ಯಾತ ವಾಕ್ಯ ‘ಸಾವ್​ಧಾನ್​ ರಹೇ, ಸತರ್ಕ್​ ರಹೇ’ ಎಂದು. ಅಂದರೆ ಸದಾ ಜಾಗರೂಕರಾಗಿರಿ ಎನ್ನುವ ಅರ್ಥ ಬರುತ್ತದೆ. ಸಾಮಾಜಿಕ ಜಾಗೃತಿಗಾಗಿ ನಡೆಸುವ ಈ ಕಾರ್ಯಕ್ರಮದಿಂದ ಈ ಮಹಿಳೆ ಕೊಲೆ ಮಾಡಲು ಸ್ಪೂರ್ಥಿ ಪಡೆದಿದ್ದಳು ಎಂದರೆ ಹೇಗಾಗಬಹುದು? ಹೌದು, ಇದೇ ರೀತಿಯ ಪ್ರತಿಕ್ರಿಯೆ ವಿಚಾರಣೆ ನಡೆಸಿದ ಪೊಲೀಸರದ್ದೂ ಆಗಿದೆ.

    ಮಾರ್ಚ್ 15ರಂದು ಮುಂಬೈನ ಲಾಲ್‌ಬಾಗ್​ನಲ್ಲಿ ಬೆಳಕಿಗೆ ಬಂದಿದ್ದ ಕೊಲೆ ಪ್ರಕರಣದಲ್ಲಿ ಈ ಆಘಾತಕಾರಿ ವಿಚಾರ ಬಹಿರಂಗವಾಗಿದ್ದು, ಆರೋಪಿ ರಿಂಪಲ್ ಪ್ರಕಾಶ್ ಜೈನ್ (24) ತನ್ನ 55 ವರ್ಷದ ತಾಯಿಯ ಶವವನ್ನು ಕತ್ತರಿಸಲು ಕ್ರೈಂ ಪ್ಯಾಟ್ರೋಲ್​ ಕಾರ್ಯಕ್ರಮದಿಂದ ‘ಸ್ಫೂರ್ತಿ’ ಪಡೆದಿದ್ದಾಳೆ ಎಂದು ಪೊಲೀಸ್ ಮೂಲಗಳು ಸೂಚಿಸಿವೆ.

    ಪೊಲೀಸರು ಮೃತ ಮಹಿಳೆ ವೀಣಾ ಅವರ ಮೃತದೇಹವನ್ನು ಅವರ ನಿವಾಸದಲ್ಲಿ ಪತ್ತೆ ಮಾಡಿದ್ದು ಪತ್ತೆಯಾದಾಗ ತುಂಡುಗಳಾಗಿ ಕತ್ತರಿಸಿ, ಬೀರು ಮತ್ತು ಸ್ನಾನಗೃಹದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿ ಸಂಗ್ರಹಿಸಲಾಗಿತ್ತು. ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ ರಿಂಪಲ್, ಮೊದಲು ಪ್ರಕರಣದ ಬಗ್ಗೆ ಏನೂ ಗೊತ್ತಿಲ್ಲ ಎಂದೇ ಹೇಳುತ್ತಾ ಬಂದಿದ್ದರು. ಆದರೆ ವಿಚಾರಣೆಯ ಸಮಯದಲ್ಲಿ, ತನ್ನ ತಾಯಿಯ ಸಾವಿನ ಸುದ್ದಿಯನ್ನು ಮುಚ್ಚಿಡಲು ತಾನು ಹಾಗೆ ಮಾಡಿದ್ದೇನೆ ಎಂದು ಬಾಯ್ಬಿಟ್ಟಿದ್ದಾಳೆ.

    ಇದನ್ನೂ ಓದಿ: ತಾಯಿಯನ್ನು ಕೊಂದ ಮಗಳು; ಮೃತದೇಹವನ್ನು 3 ತಿಂಗಳು ಮನೆಯಲ್ಲೇ ಬಚ್ಚಿಟ್ಟಳು!

    ರಿಂಪಲ್ ತನ್ನ ತಾಯಿಯನ್ನು ಕೊಲೆ ಮಾಡಿಲ್ಲ. ಅದು ಅಪಘಾತ ಎಂದು ಪೊಲೀಸ್ ಮೂಲಗಳು ದೃಢಪಡಿಸಿತ್ತು. ಆದರೂ, ದೇಹವನ್ನು ಕತ್ತರಿಸುವ ಕೃತ್ಯವು ಇಡೀ ಕೃತ್ಯವನ್ನು ಮರೆಮಾಚುವ ಯೋಜಿತ ಪ್ರಯತ್ನವಾಗಿದೆ. ಕಟ್ಟಡದ ಮೆಟ್ಟಿಲುಗಳಿಂದ ಆಕಸ್ಮಿಕವಾಗಿ ಬಿದ್ದು ವೀಣಾ ಸಾವು ಡಿಸೆಂಬರ್ ಕೊನೆಯ ವಾರದಲ್ಲಿ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ನೆರೆಹೊರೆಯಲ್ಲಿ ಚೈನೀಸ್ ಚಾಟ್ಸ್​ ಸ್ಟಾಲ್ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳು ರಿಂಪಲ್ ಅವರ ದೇಹವನ್ನು ಜೈನ ನಿವಾಸಕ್ಕೆ ಹಿಂತಿರುಗಿಸಲು ಸಹಾಯ ಮಾಡಿದರು. ಮೆಟ್ಟಿಲುಗಳಿಂದ ಬಿದ್ದ ನಂತರ ವೀಣಾಗೆ ಆದ ಗಾಯಗಳ ದೃಷ್ಟಿಯಿಂದ ರಿಂಪಲ್ ಅವರ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಅವರು ಸೂಚಿಸಿದ್ದಾರೆ.

    ಆದರೂ, ತಾಯಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಬದಲು, ಹಣಕಾಸಿನ ಅಡಚಣೆಯಿಂದಾಗಿ ರಿಂಪಲ್ ತನ್ನ ತಾಯಿಯನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದಳು. ಗಾಯಗಳು ತೀವ್ರವಾಗಿದ್ದ ಕಾರಣ ವೀಣಾ ಅದೇ ದಿನ ಅಥವಾ ಮರುದಿನ ಸಾವನ್ನಪ್ಪಿರಬಹುದು ಎಂದು ಮೂಲಗಳು ಖಚಿತಪಡಿಸಿವೆ.

    “ಸಂತ್ರಸ್ತ ಮಹಿಳೆ ಸತ್ತ ನಂತರ, ಆರೋಪಿ ಮಗಳು ಗಾಬರಿಗೊಳ್ಳಲು ಪ್ರಾರಂಭಿಸಿದಳು. ಈಗಾಗಲೇ ಇವರಿಬ್ಬರು ಸಂಬಂಧಿಕರ ಮನೆಯಲ್ಲಿ ವಾಸವಿದ್ದು. ಅವರಿಗೆ ಯಾವುದೇ ಆದಾಯದ ಮೂಲವಿರಲಿಲ್ಲ. ತನ್ನ ತಾಯಿಯ ಸಾವಿನ ವಿಷಯ ಹೊರಬಂದರೆ, ತಾನು ಹೊರಹಾಕಲ್ಪಟ್ಟು ಹಣವಿಲ್ಲದೇ ನಿರಾಶ್ರಿತಳಾಗಿ ಬಿಡಬಹುದು ಎಂದು ಆತಂಕಗೊಂಡ ಆಕೆ ದೇಹವನ್ನು ತಾನೇ ಎಸೆಯಲು ನಿರ್ಧರಿಸಿದಳು”ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts