More

    ಪಂಜಾಬ್ ತಂಡದಲ್ಲಿ ಕ್ರಿಸ್ ಗೇಲ್‌ಗೆ ಹೊಸ ಜವಾಬ್ದಾರಿ ನೀಡಿದ ಕೋಚ್ ಅನಿಲ್ ಕುಂಬ್ಳೆ

    ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಐಪಿಎಲ್‌ನಲ್ಲಿ ಹೊಸ ಸವಾಲು ಎದುರಿಸಲು ಸಜ್ಜಾಗಿರುವ ಕನ್ನಡಿಗ ಅನಿಲ್ ಕುಂಬ್ಳೆ, ತಂಡದ ಪ್ರಮುಖ ಆಟಗಾರ ಹಾಗೂ ಅನುಭವಿ ಬ್ಯಾಟ್ಸ್‌ಮನ್ ಆಗಿರುವ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್‌ಗೆ ಹೊಸ ಜವಾಬ್ದಾರಿಯೊಂದನ್ನು ವಹಿಸಿದ್ದಾರೆ.

    ‘ಕ್ರಿಸ್ ಗೇಲ್‌ಗೆ ತಂಡದಲ್ಲಿ ಪ್ರಮುಖ ಪಾತ್ರವಿದೆ. ಅವರ ಅನುಭವ ಯುವ ಆಟಗಾರರಿಗೆ ಸಾಕಷ್ಟು ನೆರವಾಗಬಹುದು. ಹೀಗಾಗಿ ನಾವು ಈ ಬಾರಿ ಅವರನ್ನು ತಂಡದಲ್ಲಿ ಕೇವಲ ಬ್ಯಾಟ್ಸ್‌ಮನ್ ಆಗಿ ಪರಿಗಣಿಸುತ್ತಿಲ್ಲ. ಅವರು ಯುವ ಆಟಗಾರರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ತಂಡದ ಮೆಂಟರ್ ಆಗಿಯೂ ಕಾರ್ಯನಿರ್ವಹಿಸಬೇಕಾಗಿದೆ. ನಾನು ಅವರಿಂದ ತಂಡಕ್ಕೆ ಈ ರೀತಿಯ ಕೊಡುಗೆಯನ್ನೂ ನಿರೀಕ್ಷಿಸುತ್ತಿದ್ದೇನೆ’ ಎಂದು ಸ್ಪಿನ್ ಬೌಲಿಂಗ್ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ನಾಯಕ-ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

    40 ವರ್ಷದ ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ ಅಪಾರವಾದ ಅನುಭವ ಮತ್ತು ಹಲವು ದಾಖಲೆಗಳನ್ನು ಹೊಂದಿದ್ದಾರೆ. 2018ರಲ್ಲಿ 2 ಕೋಟಿ ರೂ. ಮೊತ್ತಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೇರಿದ್ದ ಗೇಲ್, ಆರಂಭಿಕರಾಗಿ ತಂಡಕ್ಕೆ ಉತ್ತಮ ಕೊಡುಗೆಯನ್ನೇ ಸಲ್ಲಿಸಿದ್ದಾರೆ.

    ಇದನ್ನೂ ಓದಿ: VIDEO: ದಿಗ್ಗಜ ಸಚಿನ್ ತೆಂಡುಲ್ಕರ್ ಚೊಚ್ಚಲ ಏಕದಿನ ಶತಕಕ್ಕೆ 26 ವರ್ಷ…

    ಅನಿಲ್ ಕುಂಬ್ಳೆ ಅವರು ಐಪಿಎಲ್‌ನ 8 ತಂಡಗಳ ಪೈಕಿ ಏಕೈಕ ಭಾರತೀಯ ಕೋಚ್ ಆಗಿದ್ದಾರೆ. ‘ಮುಂದಿನ ಐಪಿಎಲ್‌ಗಳಲ್ಲಿ ನಾನು ಇನ್ನಷ್ಟು ಭಾರತೀಯ ಕೋಚ್‌ಗಳನ್ನು ನೋಡಲು ಬಯಸುತ್ತೇನೆ. ಭಾರತದಲ್ಲಿನ ಗುಣಮಟ್ಟದ ಕೋಚ್‌ಗಳ ಲಭ್ಯತೆಯನ್ನು ಇದು ಪ್ರತಿಬಿಂಬಿಸುತ್ತಿಲ್ಲ. ಹೆಚ್ಚಿನ ಐಪಿಎಲ್ ತಂಡಗಳಿಗೆ ಭಾರತೀಯ ಮುಖ್ಯ ಕೋಚ್ ಆಗಿರಬೇಕೆಂದು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಈ ಕನಸು ನನಸಾಗಬಹುದು’ ಎಂದು ಕುಂಬ್ಳೆ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts