More

    VIDEO: ದಿಗ್ಗಜ ಸಚಿನ್ ತೆಂಡುಲ್ಕರ್ ಚೊಚ್ಚಲ ಏಕದಿನ ಶತಕಕ್ಕೆ 26 ವರ್ಷ…!

    ಬೆಂಗಳೂರು: ವಿಶ್ವ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಬಾರಿಸಿದ ಏಕೈಕ ಆಟಗಾರ ಸಚಿನ್ ತೆಂಡುಲ್ಕರ್. ಏಕದಿನ ಕ್ರಿಕೆಟ್‌ನಲ್ಲಿ 49 ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 51 ಶತಕ ಸಿಡಿಸಿರುವ ಸಚಿನ್, ಸೆಂಚುರಿ ಸ್ಟಾರ್ ಆಟಗಾರನಾಗಿದ್ದರು. ಆದರೆ, ಸಚಿನ್ ಅವರ ಮೊದಲ ಶತಕದ ಸಂಭ್ರಮ ಅಷ್ಟು ಸುಲಭವಾಗಿರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 5 ವರ್ಷಗಳ ಬಳಿಕ, ತಮ್ಮ 78ನೇ ಏಕದಿನ ಪಂದ್ಯದಲ್ಲಿ ದಿಗ್ಗಜ ಮೊದಲ ಬಾರಿಗೆ ಮೂರಂಕಿ ಮೊತ್ತ ಸಿಡಿಸಿದರು. 1994ರ ಸೆಪ್ಟೆಂಬರ್ 9 ರಂದು ಆಸ್ಟ್ರೇಲಿಯಾ ಎದುರು ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ 110 ರನ್ ಸಿಡಿಸುವ ಮೂಲಕ ಈ ಸಾಧನೆ ಮಾಡಿದರು.

    ಇದನ್ನೂ ಓದಿ: VIDEO | ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಕ್ರಿಶ್ಚಿಯಾನೊ ರೊನಾಲ್ಡೊ ಗೋಲುಗಳ ಶತಕ!

    1989ರಲ್ಲಿ 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್, ಮುಂದೊದು ದಿನ ಶತಕಗಳ ಸರದಾರನಾಗುತ್ತಾನೆ ಎಂದು ಯಾರು ನಿರೀಕ್ಷಿಸಿರಲಿಲ್ಲ. ಆರಂಭಿಕ ಹಂತದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಚಿನ್ ಪಾಲಿಗೆ ಶತಕ ಎಂಬುದು ಮರೀಚಿಕೆಯಾಗಿತ್ತು. 90ರ ದಶಕದಲ್ಲಿ ತಂಡದ ಒಟ್ಟಾರೆ ಮೊತ್ತವನ್ನೇ ಸರಾಸರಿ 230, 250 ಗಳಿಸುವುದೇ ದುಸ್ತರವಾಗಿತ್ತು. ಇಂತಹ ವೇಳೆ ಬ್ಯಾಟ್ಸ್‌ಮನ್‌ವೊಬ್ಬನಿಗೆ ಶತಕಗಳಿಸುವುದು ಅಷ್ಟು ಸುಲಭವೂ ಆಗಿರಲಿಲ್ಲ. 1994ರಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ವೇಳೆ ಸಿಂಗರ್ ವರ್ಲ್ಡ್ ಸಿರೀಸ್ ಏಕದಿನ ಸರಣಿ ಸಚಿನ್ ಪಾಲಿಗೆ ಅವಿಸ್ಮರಣೀಯವಾಗಿತ್ತು. ಆತಿಥೇಯ ಶ್ರೀಲಂಕಾ ಅಲ್ಲದೆ, ಭಾರತ, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳು ಪಾಲ್ಗೊಂಡಿದ್ದವು. ಸೆ.9 ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನಾಯಕ ಮೊಹಮದ್ ಅಜರುದ್ದೀನ್, ಬ್ಯಾಟಿಂಗ್ ಆಯ್ದುಕೊಂಡರು. 21 ವರ್ಷದ ಸಚಿನ್ ಆರಂಭಿನಾಗಿ ಮನೋಜ್ ಪ್ರಭಾಕರ್ ಜತೆಗೆ ಇನಿಂಗ್ಸ್ ಆರಂಬಿಸಿದರು. 130 ಎದುರಿಸಿದ ಸಚಿನ್ 110 ರನ್ ಪೇರಿಸಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಬಳಿಕ ಉಳಿದಿದೆಲ್ಲವೂ ಇತಿಹಾಸ.

    ಇದನ್ನೂ ಓದಿ: VIDEO | ಸ್ಟೀವನ್ ಸ್ಮಿತ್ ವಿವಾದಾತ್ಮಕ ಕ್ಯಾಚ್; ಔಟ್ ಅಥವಾ ಸಿಕ್ಸರ್?

    24 ವರ್ಷಗಳ ಸುದೀರ್ಘವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳ ಒಡೆಯನಾದರು. ಸಚಿನ್ ಶತಕದ 26ನೇ ವರ್ಷದ ಸಂಭ್ರಮವನ್ನು ಬಿಸಿಸಿಐ, ಐಪಿಎಲ್ ಮುಂಬೈ ಇಂಡಿಯನ್ಸ್ ತಂಡ ತನ್ನ ಟ್ವಿಟರ್‌ನಲ್ಲಿ ವಿಡಿಯೋ ಸಮೇತ ಪ್ರಕಟಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts