More

    ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರತಿ ವಿಷಯದಲ್ಲಿ 35 ಅಂಕ! ಜಸ್ಟ್​ ಪಾಸ್​ ಆಗಿದ್ದಕ್ಕೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿ

    ಮುಂಬೈ: ಕೆಲವರು ಪರೀಕ್ಷೆಯಲ್ಲಿ ಶೇ. 90 ರಷ್ಟು ಅಂಕ ಗಳಿಸಿದರೂ ಅವರಿಗೆ ತೃಪ್ತಿಯೇ ಇರುವುದಿಲ್ಲ. ಹೆಚ್ಚಿನ ಅಂಕ ಬರಬೇಕಿತ್ತು ಅಂದುಕೊಳ್ಳುತ್ತಾರೆ. ಇನ್ನೂ ಕೆಲವರು ಪಾಸ್​ ಆಗಲು ಎಷ್ಟು ಅಂಕ ಬೇಕೋ ಅಷ್ಟಕ್ಕೆ ತೃಪ್ತಿಪಟ್ಟುಕೊಂಡು ಪಾಸ್​ ಆದನಲ್ಲ ಎಂದು ಸಂತೋಷಪಡುತ್ತಾರೆ. ಆದರೆ, ಪರೀಕ್ಷೆ ಪಾಸ್​ ಆಗಲು ಬೇಕಿರುವ ಕನಿಷ್ಠ ಅಂಕವನ್ನು ಸ್ವಲ್ಪವೂ ಹೆಚ್ಚು ಕಡಿಮೆ ಇಲ್ಲದೆ ಎಲ್ಲ ವಿಷಯಗಳಲ್ಲೂ ಒಂದೇ ಅಂಕಗಳನ್ನು ಪಡೆದರೆ ಅವರನ್ನು ಏನೆಂದು ಕರೆಯಬೇಕು? ಒಂದು ರೀತಿಯಲ್ಲಿ ಅವರು ಅದೃಷ್ಟವಂತರೇ ಸರಿ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನ ವೈಭವ್​ ಮೋರೆ ಕೂಡ ಆ ಅದೃಷ್ಟವಂತಲ್ಲಿ ಒಬ್ಬರಾಗಿದ್ದಾರೆ. ​

    ಶುಕ್ರವಾರ (ಜೂ.2) ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಜುನ್ನಾರ್​ ತಾಲೂಕಿನ ವೈಭವ್​ ಮೋರೆಯ ಮಾರ್ಕ್ಸ್​ ಕಾರ್ಡ್​ ನೋಡಿದವರು ಹುಬ್ಬೇರಿಸಿದ್ದಾರೆ. ಏಕೆಂದರೆ, ವೈಭವ್​ ಪ್ರತಿ ವಿಷಯಗಳಲ್ಲೂ ನಿಖರವಾಗಿ 35 ಅಂಕಗಳ ಕನಿಷ್ಠ ಅಂಕಗಳನ್ನು ಪಡೆದುಕೊಂಡು ಪಾಸ್​ ಆಗಿದ್ದಾನೆ. ಒಂದೇ ಒಂದು ಅಂಕ ಕಡಿಮೆಯಾಗಿದ್ದರೂ ವೈಭವ್​ನನ್ನು ಫೇಲ್​ ಎಂದು ಪರಿಗಣಿಸಲಾಗುತ್ತಿತ್ತು. ಆತನ ಅಂಕಪಟ್ಟಿಯ ಬಗ್ಗೆ ಕೇಳಿದವರು ಒಂದು ಕ್ಷಣ ನಂಬಲು ತಯಾರಿಲ್ಲ. ಸ್ವತಃ ವೈಭವ್​ಗೂ ಒಂದು ಕ್ಷಣ ನಂಬಲಾಗಲಿಲ್ಲ. ಇದನ್ನೂ ಓದಿ: ನಟಿಗೆ ಖಾಸಗಿ ಅಂಗ ಪ್ರದರ್ಶಿಸಿದ ಆರೋಪ: ಯುವಕನ ಪರ ನಿಂತ ಪುರುಷರ ಸಂಘ, ಕಳಚಿಬಿತ್ತಾ ನಟಿಯ ಮುಖವಾಡ?

    ಓದುವುದು ಇಷ್ಟವಿಲ್ಲ

    ವಿದ್ಯಾರ್ಥಿ ವೈಭವ್​, ಪುಣೆಯಿಂದ ಉತ್ತರಕ್ಕೆ 93 ಕಿಮೀ ದೂರದಲ್ಲಿರುವ ಪುಟ್ಟ ಬೋರಿ ಖುರ್ದ್ ಹಳ್ಳಿಯ ಕೃಷಿ ಕಾರ್ಮಿಕ ದಂಪತಿಯ ಮಗ. ಈತ ಓದುವುದನ್ನು ಇಷ್ಟಪಡುವುದಿಲ್ಲ. ಹೀಗಾಗಿ ಪರೀಕ್ಷೆಯಲ್ಲಿ ಫೇಲ್​ ಆಗುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದ. ಆದರೆ, ಪಾಸ್​ ಆಗಿರುವುದು ಸ್ವತಃ ವೈಭವ್​ಗೂ ಅಚ್ಚರಿ ಉಂಟುಮಾಡಿದೆ. ಇದೀಗ ಪಾಸ್​ ಆದ ಖುಷಿಯಲ್ಲಿ ವೈಭವ್​ ಕುಣಿದು ಕುಪ್ಪಳಿಸಿದ್ದಾನೆ.

    ನನಗೇ ಆಶ್ಚರ್ಯವಾಯಿತು

    ನಾನು ಪರೀಕ್ಷೆಗಾಗಿ ತಯಾರಿ ಮಾಡಿದ್ದೆ ಆದರೆ, ತುಂಬಾ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಪ್ರತಿ ವಿಷಯದಲ್ಲಿ ನನಗೆ 35 ಮಾರ್ಕ್ಸ್​ ಬಂದಿರುವುದನ್ನು ನೋಡಿ ನನಗೇ ಆಶ್ಚರ್ಯವಾಯಿತು. ಇಂತಹ ಅಂಕಪಟ್ಟಿಯನ್ನು ನಾನು ಇದುವರೆಗೂ ನೋಡಿರಲಿಲ್ಲ. ನನ್ನ ಸ್ನೇಹಿತರೂ ಕೂಡ ಅಚ್ಚರಿಗೊಂಡಿದ್ದಾರೆ ಎಂದು ವೈಭವ್​ ಮಾಧ್ಯಮದ ಮುಂದೆ ತಿಳಿಸಿದ್ದಾರೆ.

    16ರ ಹರೆಯದ ವೈಭವ್​, ತನ್ನ ಶಿಕ್ಷಕ ಮತ್ತು ತಾಯಿ ಇಬ್ಬರಿಗೂ ನನ್ನ ಮೇಲೆ ಹೆಚ್ಚಿನ ಭರವಸೆ ಇರಲಿಲ್ಲ. ಇದೀಗ ಆತ ಪಾಸ್​ ಆಗಿರುವುದನ್ನು ಅವರು ಸಹ ನಂಬುತ್ತಿಲ್ಲ. ಪಾಪಾ ಹೋಗಲಿ ಬಿಡು ಅಂತಾ ಮೌಲ್ಯಮಾಪನ ಮಾಡುವವರೇ ಮಾರ್ಕ್ಸ್​ ನೀಡಿದಂತಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತ: ಭಾರತ ಇತಿಹಾಸದಲ್ಲಿ ಸಂಭವಿಸಿರುವ ಭೀಕರ ರೈಲು ಅಪಘಾತಗಳ ಚಿತ್ರಣ ಇಲ್ಲಿದೆ…

    ಕೃಷಿ ಕೆಲಸದಲ್ಲಿ ಸಹಾಯ

    ತರಗತಿಯಲ್ಲಿ ಏನು ಕಲಿಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ವೈಭವ್​ ಹೆಣಗಾಡುತ್ತಿದ್ದನಂತೆ. ಆತನಿಗೆ ಶಿಕ್ಷಣದ ಬಗ್ಗೆ ಎಂದಿಗೂ ಹೆಚ್ಚಿನ ಒಲವು ಇಲ್ಲವಂತೆ. ಅದರಲ್ಲೂ ಗಣಿತ ಅಂದರೆ ಸ್ವಲ್ಪವೂ ಆಗುತ್ತಿರಲಿಲ್ಲ. ಹೆಚ್ಚು ಸಮಯ ಓದದಿದ್ದರೂ ತನ್ನ ಹೆತ್ತವರಿಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಾನೆ ಮತ್ತು ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಮತ್ತು ಕಬಡ್ಡಿ ಆಡುತ್ತಾನೆ. ಆತ ಎಲೆಕ್ಟ್ರಾನಿಕ್ ಉಪಕರಣಗಳಿಂದ ಆಕರ್ಷಿತನಾಗಿದ್ದು, ಆಗಾಗ ಅವುಗಳನ್ನು ಜೋಡಿಸುವುದು ಮತ್ತು ಬಿಚ್ಚುವುದನ್ನು ಮಾಡುತ್ತಾನೆ. ಈಗ ಹತ್ತಿರದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೆಲವು ವೃತ್ತಿಪರ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಸಾರ್ವಜನಿಕರಿಗೆ ಶುಭ ಸುದ್ದಿ: ಅಡುಗೆ ಎಣ್ಣೆ ಬೆಲೆ ಶೀಘ್ರವೇ 8 ರಿಂದ 12 ರೂ.ಇಳಿಕೆ

    ಅಣ್ಣನ ಪ್ರೀತಿಗೆ ತಮ್ಮ ಬಲಿ? “ಸಾವಿಗೆ ಕಾರಣರಾದವರು ಸಾಲ ತೀರಿಸಲಿ” ಎಂದು ಡೆತ್​ನೋಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts