More

    ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ ಪ್ರಕರಣ; ಪ್ರಚೋದನೆ ನೀಡಿದ 13 ಆರೋಪಿಗಳ ಬಂಧನ

    ಪುಣೆ: ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊಂದಿರುವ 25 ಜನರ ಪೈಕಿ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡ ಕುಟುಂಬವು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಆರೋಪಿಗಳಿಂದ ಹಣ ಸಾಲವಾಗಿ ಪಡೆದಿತ್ತು ಎಂದು ತಿಳಿದು ಬಂದಿದೆ. ಸಾಲ ಪಡೆದ ವನಮೋರೆ ಕುಟುಂಬದವರನ್ನು ಆರೋಪಿಗಳು ಸಾಲ ಮರುಪಾವತಿಸುವಂತೆ ವಿಪರೀತ ಕಿರುಕುಳ ನೀಡುತ್ತಿದ್ದರು.

    ಇವರ ಕಿರುಕುಳದ ಕಾರಣದಿಂದಲೇ ವನಮೋರೆ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಬಂಧಿತರಲ್ಲಿ ಕೆಲವರು ಈ ಮುನ್ನವೇ ಹಣಕಾಸು ಸಂಬಂಧಿತ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪ್ರಕರಣದ ಹಿನ್ನೆಲೆ: ಮಹಾರಾಷ್ಟ್ರದ ಮೀರಜ್ ತಾಲೂಕಿನ ಮ್ಹೈಸಲ್​ ಬಳಿಯ ನಾರ್ವಡ್​ ರಸ್ತೆಯ ಅಂಬಿಕಾನಗರ ಚೌಕ ಹತ್ತಿರದ ಮನೆಯೊಂದರಲ್ಲಿ ಈ ಪ್ರಕರಣ ನಡೆದಿತ್ತು.

    ವೈದ್ಯರಾಗಿರುವ ಪೋಪಟ್​ ಯಲ್ಲಪ್ಪ ವಾನ್ಮೋರ್​ (52), ಸಂಗೀತಾ ಪೋಪಟ್​ (48), ಅರ್ಚನಾ ಪೋಪಟ್ ವಾನ್ಮೋರ್ (30), ಶುಭಂ ಪೋಪಟ್​ ವಾನ್ಮೋರ್​ (28), ಮನಿಕ್​ ಯಲ್ಲಪ್ಪ ವಾನ್ಮೋರ್​ (49), ರೇಖಾ ಮನಿಕ್ ವಾನ್ಮೋರ್​ (45), ಆದಿತ್ಯ ಮನಿಕ್ ವಾನ್​ (15), ಅನಿತಾ ಮನಿಕ್ ವಾನ್ಮೋರ್ (28) ಮತ್ತು ಅಕ್ಕತಾಯ್ ವಾನ್ಮೋರ್​ (72) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.

    ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ; ಒಂದು ಮನೆಯಲ್ಲಿ 6, ಇನ್ನೊಂದು ಮನೆಯಲ್ಲಿ 3 ಶವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts