ಮನೆಯಲ್ಲಿ ಯುವತಿ ಅನುಮಾನಾಸ್ಪದ ಸಾವು! ಉಸಿರುಗಟ್ಟಿಸಿ ಕೊಂದರೇ ದುಷ್ಕರ್ಮಿಗಳು?

death
Published on

ಕೋಲಾರ: ದ್ವಿತೀಯ ಪಿಯುಸಿ ವಿದ್ಯಾರ್ಥಿಯನ್ನು ಮನೆಗೆ ನುಗ್ಗಿದ ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಮುಳಬಾಗಿಲು ನಗರದ ಹೊಸಪಾಳ್ಯದಲ್ಲಿ ಸಂಭವಿಸಿದೆ.

18 ವರ್ಷದ ಪ್ರಿಯಾಂಕ ಮೃತ ದುರ್ದೈವಿ. ಶ್ರೀನಿವಾಸಪುರ ಮೂಲದ ಯುವತಿ ಕುಟುಂಬ ಮುಳಬಾಗಿಲು ನಗರದಲ್ಲಿ ಬಾಡಿಗೆ ಮನೆಗೆ ವಾಸಕ್ಕೆಂದು ಇತ್ತೀಚಿಗೆ ಬಂದಿದ್ದರು. ಪ್ರಿಯಾಂಕ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿದ್ದಳು. ಇದನ್ನೂ ಓದಿರಿ ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!

ಸೋಮವಾರ ಸಂಜೆ ಯುವತಿ ಮನೆ ಬಳಿ ಓಡಾಡಿಕೊಂಡಿದ್ದಳು. ಬಳಿಕ ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಎಸ್ಪಿ ಕಾರ್ತಿಕ್ ರೆಡ್ಡಿ, ಎಎಸ್ಪಿ ಜಾಹ್ನವಿ, ಡಿವೈಎಸ್ಪಿ ಕೆ.ಸಿ.ರವಿ ಸ್ಥಳ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಯಿತು. ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಬಳಿಕ ಯುವತಿ ಸಾವಿಗೆ ಕಾರಣ ಏನೆಂದು ಹೊರಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net