More

    ಕುಡಿಯುವ ನೀರು, ರಸ್ತೆ, ಶಿಕ್ಷಣಕ್ಕೆ ಆದ್ಯತೆ: ಶಾಸಕ ಬೇಳೂರು

    ತ್ಯಾಗರ್ತಿ: ಕ್ಷೇತ್ರದ ಜನತೆಗೆ ಕುಡಿಯುವ ನೀರು, ರಸ್ತೆ, ಶಿಕ್ಷಣಕ್ಕೆ ಆದ್ಯತೆ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

    ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ಸ್ವಚ್ಛ ಸಂಕೀರ್ಣ ಘಟಕ, ಹಳ್ಳಿ ಸಂತೆ, ಶೌಚಗೃಹ, ಕ್ಯಾಂಟೀನ್, ನೂತನ ಶಾಲಾ ಕಟ್ಟಡ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ, 3 ಕೋಟಿ ರೂ. ಮೊತ್ತದ ಮುಖ್ಯರಸ್ತೆ ಅಭಿವೃದ್ಧಿ ಹಾಗೂ ಜಲಜೀವನ್ ಮಿಶನ್ ಯೋಜನೆಯಡಿ ಮನೆ ಮನೆಗೆ ನೀರಿನ ಸಂಪರ್ಕಗೊಳಿಸುವ 2.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
    ಈ ಹಿಂದೆ ಶಾಸಕನಾಗಿದ್ದಾಗ ಶರಾವತಿ ನದಿಯಿಂದ ತಾಲೂಕಿಗೆ ನೀರು ತರುವ ಪ್ರಯತ್ನ ಮಾಡಲಾಗಿತ್ತು. ಈ ಭಾಗದ ಜನತೆಗೆ ಅಂಬ್ಲಿಗೊಳ ಜಲಾಶಯದಿಂದ ನೀರು ತಂದು, ನಿರಂತರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಕಳೆದ 10 ವರ್ಷಗಳಿಂದ ಯಾವುದೇ ಅಧಿಕಾರ ಇಲ್ಲದಿದ್ದರೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಕಾರಣ ಜನತೆ ಆಶೀರ್ವಾದ ಮಾಡಿದ್ದಾರೆ. ಜನರ ಋಣ ತೀರಿಸಲು ಅಭಿವೃದ್ಧಿ ಕಾರ್ಯಗಳು ಸಹಕಾರಿ ಆಗಲಿದೆ ಎಂದು ಹೇಳಿದರು.
    ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್‌ರಾಜ್ ಕಣ್ಣೂರು ಮಾತನಾಡಿ, ಹೊಸ ಸರ್ಕಾರ ಬಂದು 3 ತಿಂಗಳೊಳಗೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿರುವುದು ಶಾಸಕರ ಅಭಿವೃದ್ಧಿ ಪರ ಚಿಂತನೆಗೆ ಸಾಕ್ಷಿಯಾಗಿದೆ. ಅಡಕೆ ತೋಟದ ಎಲೆಚುಕ್ಕೆ ರೋಗ ಹಾಗೂ ರೈತರ ಅರಣ್ಯ ಭೂಮಿ ಸಮಸ್ಯೆ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳು, ಕಂದಾಯ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗಿದೆ ಎಂದರು.
    ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಲೋಕೇಶ್, ಉಪಾಧ್ಯಕ್ಷೆ ರೇಣುಕಾ ಸುರೇಶ್, ಮುಖಂಡರಾದ ಸೋಮಶೇಖರ್ ಲಾವಿಗ್ಗೆರೆ, ಟಿ.ಕೆ.ಹನುಮಂತಪ್ಪ, ಅನಿತಾ ಕುಮಾರಿ, ಗ್ರಾಪಂ ಸದಸ್ಯರಾದ ಗೀತಾ, ಉಷಾ, ಗಿರೀಶ್, ಸುಭಾಶ್ಚಂದ್ರ, ಮರಾಠಿ ಪರಶುರಾಮ್, ಇಸಾಕ್, ರೇವಪ್ಪ, ಪ್ರಮುಖರಾದ ಶಿವಮೂರ್ತಿ ಗುತ್ತನಹಳ್ಳಿ, ಶರತ್ ನಾಗಪ್ಪ, ಕಿರಣ್ ದೊಡ್ಡಮನೆ, ಎಚ್.ಆರ್.ಪ್ರಶಾಂತ್, ಪ್ರತಾಪ್, ಪಿಡಿಒ ಮೋಹನ್, ಇಂಜಿನಿಯರ್‌ಗಳಾದ ಗುರುಕೃಷ್ಣ ಶೆಣೈ, ತಿಪ್ಪೇಸ್ವಾಮಿ, ಭರತ್ ಇತರರಿದ್ದರು.

    ಲಿಂಗಾಯತ ವಿರೋಧಿಯಾಗಿ ಮಾತನಾಡಿಲ್ಲ
    ಲಿಂಗಾಯತ ಅಧಿಕಾರಿಗಳ ನಿರ್ಲಕ್ಷೃ ಮಾಡಿದ್ದಾರೆ ಎಂಬ ಶಾಮನೂರು ಶಿವಶಂಕರಪ್ಪ ಅವರ ಅಭಿಪ್ರಾಯಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮರ್ಥನಾ ಹೇಳಿಕೆಗೆ ಮಾತ್ರ ವಿರೋಧ ವ್ಯಕ್ತಪಡಿಸಿದ್ದೆ. ಲಿಂಗಾಯತ ಸಮಾಜದ ವಿರೋಧಿಯಾಗಿ ಯಾವುದೇ ಹೇಳಿಕೆ ನೀಡಿಲ್ಲ. ಎಲ್ಲ ಸಮಾಜದೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದು ಅನಾವಶ್ಯಕ ಗೊಂದಲ ಸೃಷ್ಟಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಗೋಪಾಲಕೃಷ್ಣ ಬೇಳೂರು ಸ್ಪಷ್ಟನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts