More

    ಯೋಧರೊಂದಿಗೆ ಮೋದಿಜೀ ದೀಪಾವಳಿ; ಗುಜರಾತ್​ ಸೈನಿಕರಿಗೆ ಸಿಹಿ ತಿನ್ನಿಸಲಿದ್ದಾರೆ ಪ್ರಧಾನಿ

    ನವದೆಹಲಿ: ಭಾರತೀಯ ಸೇನೆಯ ಬಗ್ಗೆ ಅಪಾರ ಪ್ರೇಮವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ದೀಪಾವಳಿಯನ್ನು ಯೋಧರೊಂದಿಗೇ ಆಚರಿಸುತ್ತಾರೆ ಎನ್ನಲಾಗಿದೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪ್ರತಿ ವರ್ಷ ಮೋದಿ ಅವರು ಯೋಧರೊಂದಿಗೇ ದೀಪಾವಳಿ ಆಚರಿಸಿಕೊಂಡು ಬಂದಿದ್ದಾರೆ.

    ಇದನ್ನೂ ಓದಿ: ಕಾನೂನು ಬಾಹಿರ ಟ್ಯಾಕ್ಸಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ: ಕರ್ನಾಟಕ ಟ್ಯಾಕ್ಷಿ ಡ್ರೈವರ್ಸ್ ಅಸೋಶಿಯೇಷನ್

    ಈ ವರ್ಷ ದೀಪಾವಳಿಯನ್ನು ಮೋದಿ ಅವರು ಶನಿವಾರದಂದು ಗುಜರಾತ್​ನ ಯೋಧರೊಂದಿಗೆ ಆಚರಿಸಲಿದ್ದಾರೆ ಎನ್ನಲಾಗಿದೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​ ಅವರು ಪ್ರಧಾನಿಯೊಂದಿಗೆ ಇರಲಿದ್ದಾರೆ. ಈ ವರ್ಷದ ಜೂನ್​ ತಿಂಗಳಲ್ಲಿ ಲಡಾಖ್​ ಭಾಗದಲ್ಲಿನ ಸೈನಿಕರನ್ನು ಭೇಟಿ ಮಾಡಿದ್ದ ಅವರು ವರ್ಷದಲ್ಲಿ ಎರಡನೇ ಬಾರಿಗೆ ಸೈನಿಕರೊಂದಿಗೆ ಕಾಲ ಕಳೆಯಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ಹಬ್ಬದ ಆಚರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಸಿಕ್ಕ ಪ್ರಕೃತಿ ವಿಕೋಪ ಪರಿಹಾರ ಎಷ್ಟು ಗೊತ್ತಾ?
    ಕಳೆದ ವರ್ಷ ದೀಪಾವಳಿಯನ್ನು ಪ್ರಧಾನಿಯವರು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಯೋಧರೊಂದಿಗೆ ಗಡಿ ನಿಯಂತ್ರಣ ರೇಖೆಯ ಬಳಿ ಆಚರಿಸಿದ್ದರು. 2018ರಲ್ಲಿ ಉತ್ತರಾಖಂಡದ ಸೈನಿಕರೊಂದಿಗೆ, 2017ರಲ್ಲಿ ಕಾಶ್ಮೀರದ ಗುರೆಜ್​ ಸೆಕ್ಟರ್​ನ ಸೈನಿಕರೊಂದಿಗೆ ಹಬ್ಬ ಮಾಡಿದ್ದರು. (ಏಜೆನ್ಸೀಸ್​)

    ಸ್ಯಾನಿಟರಿ ಪ್ಯಾಡ್​ನಲ್ಲಿತ್ತು 62 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪೇಸ್ಟ್​; ಇಬ್ಬರು ಮಹಿಳೆಯರ ಬಂಧನ

    3 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಕಸವೆಂದು ಎಸೆದ ಮಹಿಳೆ; ಹಬ್ಬ ಬಂದ್ರೆ ಹೀಗೆಲ್ಲಾ ಆಗತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts