More

    ತಾಯಿಯನ್ನೇ ಅವಮಾನಿಸಿದ ಮೋದಿಯನ್ನು ಹಿಮಾಲಯಕ್ಕೆ ಕಳುಹಿಸಿ! ನಟಿ ಗಾಯತ್ರಿ ರಘುರಾಮ್​ ಕಿಡಿ

    ಚೆನ್ನೈ: ಮನಸೆಲ್ಲಾ ನೀನೆ ಸಿನಿಮಾ ಖ್ಯಾತಿಯ ನಟಿ ಗಾಯತ್ರಿ ರಘುರಾಮ್ ಅವರು ತಮಿಳುನಾಡು ಬಿಜೆಪಿ ಪಕ್ಷಕ್ಕೆ ಗುಡ್​ ಬೈ ಹೇಳಿ, ಐಐಎಡಿಎಂಕೆಗೆ ಸೇರ್ಪಡೆಗೊಂಡಿರುವುದು ಗೊತ್ತೇ ಇದೆ. ಇದೀಗ ಪ್ರಧಾನಿ ಮೋದಿ ವಿರುದ್ಧ ಮಾತನಾಡುವ ಮೂಲಕ ಗಾಯತ್ರಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡುವ 18ನೇ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ದೇಶಾದ್ಯಂತ ನಡೆಯುತ್ತಿದೆ. ಇದುವರೆಗೆ ಐದು ಹಂತದ ಚುನಾವಣೆ ಪೂರ್ಣಗೊಂಡಿದ್ದು, ಇನ್ನೆರಡು ಹಂತದ ಮತದಾನ ನಡೆಯಬೇಕಿದೆ.

    ಇನ್ನೂ ಲೋಕಸಭಾ ಚುನಾವಣೆ ಜತೆಗೆ ಒಡಿಶಾ ವಿಧಾನಸಭಾ ಚುನಾವಣೆ ಸಹ ನಡೆಯುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ಸಕ್ರಿಯ ಪ್ರಚಾರದಲ್ಲಿ ತೊಡಗಿದ್ದು, ಖಾಸಗಿ ಟಿವಿ ಚಾನೆಲ್‌ಗಳಿಗೆ ನೇರ ಸಂದರ್ಶನ ನೀಡುತ್ತಿದ್ದಾರೆ. ಒಡಿಶಾದಲ್ಲಿ ಚುನಾವಣಾ ಪ್ರಚಾರದ ವೇಳೆ ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ನಾನು ಜೈವಿಕವಾಗಿ ಅಥವಾ ಮನುಷ್ಯನಾಗಿ ಹುಟ್ಟಿರುವ ಸಾಧ್ಯತೆಯಿಲ್ಲ, ಆ ದೇವರೇ ನನ್ನನ್ನು ಭೂಮಿಗೆ ಕಳುಹಿಸಿದ್ದಾನೆ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದರು.

    ಏನಾದರೂ ಮಾಡಲು ದೇವರು ನನ್ನನ್ನು ಭೂಮಿಗೆ ಕಳುಹಿಸಿದ್ದಾನೆ. ನನಗಿರುವ ಶಕ್ತಿ ಸಾಮಾನ್ಯ ಜನರಿಗಿಲ್ಲ. ಇದನ್ನು ದೇವರು ಮಾತ್ರ ನೀಡಬಲ್ಲ ಎಂದು ಪ್ರಧಾನಿ ಮಾತನಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೇ ವೇಳೆಗೆ ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷಗಳು ಪ್ರಧಾನಿ ಮೋದಿಯವರು ಧರ್ಮ ರಾಜಕಾರಣವನ್ನು ಕೈಗೆ ತೆಗೆದುಕೊಂಡಿದ್ದಾರೆ ಎಂದು ಟೀಕಿಸುತ್ತಿವೆ.

    ಪ್ರಸ್ತುತ ಎಐಎಡಿಎಂಕೆಯ ರಾಜ್ಯ ಮಹಿಳಾ ತಂಡದ ಉಪ ಕಾರ್ಯದರ್ಶಿಯಾಗಿರುವ ಗಾಯತ್ರಿ ರಘುರಾಮ್, ಪ್ರಧಾನಿ ಮೋದಿ ಮಾತನಾಡಿರುವ ವಿಡಿಯೋ ತುಣುಕನ್ನು ಶೇರ್​ ಮಾಡಿಕೊಂಡು ತೀವ್ರವಾಗಿ ಟೀಕಿಸಿದ್ದಾರೆ. ನಾನು ಜೈವಿಕವಾಗಿ ಹುಟ್ಟಿಲ್ಲ, ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಮತ್ತು ತನ್ನನ್ನು ತಾನು ‘ದೇವರ ಅವತಾರ’ ಎಂದು ಪ್ರಧಾನಿ ಮೋದಿ ಕರೆದುಕೊಳ್ಳುತ್ತಾರೆ. ಈ ಮೂಲಕ ತಮ್ಮ ತಾಯಿಯನ್ನು 30 ಸೆಕೆಂಡುಗಳ ವಿಡಿಯೋದಲ್ಲಿ ಅವಮಾನಿಸಿದ್ದಾರೆ. ಇದೆಲ್ಲವೂ ಅಧಿಕಾರಕ್ಕಾಗಿ ಎಂದು ಗಾಯತ್ರಿ ಟೀಕಿಸಿದ್ದಾರೆ.

    ಪ್ರಧಾನಿ ಮೋದಿ ಅವರು ತಾನು ಕಾಶಿ ವಿಶ್ವನಾಥನಿಗಿಂತ ದೊಡ್ಡವರು ಎಂದು ಭಾವಿಸುತ್ತಾರೆ. ಇಂತಹ ಮನೋಭಾವದಿಂದ ವಾರಣಾಸಿಯಲ್ಲಿ ಗೆಲ್ಲಬಾರದು. ಬದಲಾಗಿ ಹಿಮಾಲಯದಲ್ಲಿ ಕುಳಿತು ತನ್ನನ್ನು ತಾನು ದೇವರಂತೆ ಬಿಂಬಿಸಿ ಧ್ಯಾನ ಮಾಡುವಂತೆ ಮಾಡಬೇಕು ಎಂದು ಗಾಯತ್ರಿ ಹೇಳಿದ್ದಾರೆ. ಇದೀಗ ಗಾಯತ್ರಿ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)

    1 ವಾರಕ್ಕೂ ಮುಂಚೆಯೇ ಮ್ಯಾಚ್​ ರಿಸಲ್ಟ್​ ಪ್ರಕಟ: ಆರ್​ಸಿಬಿ ಗೆಲುವು ಮೊದಲೇ ಫಿಕ್ಸ್​ ಆಗಿತ್ತಂತೆ​!

    RCB ಬೆಂಬಲಿಸಿದ ಧೋನಿ! ಕಿಂಗ್​ ಕೊಹ್ಲಿಗೆ ಕೂಲ್​ ಕ್ಯಾಪ್ಟನ್​ ಹೇಳಿದ್ದನ್ನು ಕೇಳಿದ್ರೆ ಖುಷಿಯಾಗೋದು ಖಂಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts