ಗಂಡ ಸ್ಕ್ಯಾನಿಂಗ್​ಗೆ ಕರೆದುಕೊಂಡು ಹೋಗಲಿಲ್ಲವೆಂದು ನೇಣಿಗೆ ಕೊರಳೊಡ್ಡಿದ 7 ತಿಂಗಳ ಗರ್ಭಿಣಿ!

blank

ಹೈದರಾಬಾದ್: ಗರ್ಭಿಣಿಯರಿಗೆ ಬಯಕೆ ಹೆಚ್ಚಿರುತ್ತದೆಯಂತೆ. ಗರ್ಭವತಿ ಆಗಿರುವ ಸಮಯದಲ್ಲಿ ಗಂಡನ ಪ್ರೀತಿ ಎಷ್ಟಿದ್ದರೂ ಕಡಿಮೆ ಎನಿಸುತ್ತದೆಯಂತೆ. ಅದೇ ರೀತಿ ಗಂಡನಿಂದ ಪ್ರೀತಿಯನ್ನೇ ಬಯಸುತ್ತಿದ್ದ ಗರ್ಭಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

blank

ನಗರದ ಸುರರಾಮ್​ ಕಾಲೋನಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸಿರಿಷಾ ಹೆಸರಿನ ಗರ್ಭಿಣಿ ನೇಣಿಗೆ ಶರಣಾದ ದುರ್ದೈವಿ. ಸಿರಿಷಾ ಹಾಗೂ ನಾಗಾರ್ಜುನ ದಂಪತಿಗೆ 2 ವರ್ಷದ ಒಬ್ಬಳು ಮಗಳಿದ್ದಾಳೆ. ಎರಡನೇ ಮಗುವನ್ನು ಸಿರಿಷಾ ಹೊಟ್ಟೆಯಲ್ಲಿ ಹೊತ್ತಿದ್ದು, ಏಳು ತಿಂಗಳ ಗರ್ಭವತಿಯಾಗಿದ್ದಳು. ತಿಂಗಳ ಸ್ಕ್ಯಾನಿಂಗ್​ಗಾಗಿ ಆಸ್ಪತ್ರೆಗೆ ಹೋಗಿಬರುತ್ತಿದ್ದ ಆಕೆ ಕಳೆದ ಕೆಲ ದಿನಗಳಿಂದ ಗಂಡನಿಗೆ ಆಸ್ಪತ್ರೆಗೆ ಹೋಗೋಣ ಎಂದು ಕೇಳುತ್ತಿದ್ದಳಂತೆ. ಆದರೆ ಆತ ಯಾವುದಾದರೂ ಕಾರಣ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದ. ಸತತ ಮೂರು ದಿನಗಳ ಕಾಲ ಗಂಡನನ್ನು ಪೀಡಿಸಿದ ಸಿರಿಷಾ ಮಂಗಳವಾರದಂದು ಮನನೊಂದು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ.

ಮನೆಯ ಕೋಣೆಯಲ್ಲಿದ್ದ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಪ್ರಕರಣ ಹತ್ತಿರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. (ಏಜೆನ್ಸೀಸ್)

ಎಂಎಸ್​ಡಿ ಬರ್ತ್​ಡೇ ಸ್ಪೆಷಲ್: ಈ ಫೋಟೋದಲ್ಲಿ ಧೋನಿ ಎಲ್ಲಿದ್ದಾರೆ ಹುಡುಕಿ

ಇಂದು ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿ ಬಿಡುಗಡೆ; ಕರ್ನಾಟಕದ ನಾಲ್ವರಿಗೆ ಮಂತ್ರಿಗಿರಿ

ಅಣ್ಣನ ಪ್ರೀತಿಗೆ ಬಲಿಯಾದ ತಂಗಿ! ಅಪ್ಪ ಅಮ್ಮನ ಎದುರೇ ಮಗಳ ಗ್ಯಾಂಗ್​ರೇಪ್!

Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…