More

    ಸಿಪಿಎಲ್‌ನತ್ತ ಮುಖ ಮಾಡಿದ ಪ್ರವೀಣ್ ತಂಬೆ

    ಮುಂಬೈ: ಮುಂಬೈನ ಹಿರಿಯ ಕ್ರಿಕೆಟಿಗ ಪ್ರವೀಣ್ ತಂಬೆ, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಆಡುವ ಸಲುವಾಗಿ ಆಟಗಾರ ಡ್ರ್‌ಟಾನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರಷ್ಟೇ ತಂಬೆಗೆ ಬಿಸಿಸಿಐ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲಿದೆ. ಬಿಸಿಸಿಐ ನಿಯಮದಂತೆ ಭಾರತೀಯ ಕ್ರಿಕೆಟಿಗ ಐಪಿಎಲ್ ಸೇರಿದಂತೆ ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರಷ್ಟೇ ವಿದೇಶಿ ಲೀಗ್‌ಗಳಲ್ಲಿ ಆಡಲು ಅನುಮತಿ ನೀಡಲಿದೆ. ಪ್ರವೀಣ್ ತಂಬೆ ಅಬುಧಾಬಿಯಲ್ಲಿ ಟಿ10 ಲೀಗ್‌ನಲ್ಲಿ ಆಡಿದ್ದ ಪರಿಣಾಮ ತಂಬೆಗೆ ಐಪಿಎಲ್‌ನಲ್ಲೂ ಕೆಕೆಆರ್ ಪರ ಅವಕಾಶ ನಿರಾಕರಿಸಲಾಗಿದೆ. ಸದ್ಯ 13ನೇ ಆವೃತ್ತಿಯ ಐಪಿಎಲ್ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ. ಇದಕ್ಕೂ ಮೊದಲು ಕೆನಡದ ಗ್ಲೋಬಲ್ ಟಿ20 ಲೀಗ್‌ನಲ್ಲಿ ಆಡುವುದಕ್ಕೆ ಯುವರಾಜ್ ಸಿಂಗ್ ನಿವೃತ್ತಿ ೋಷಿಸಿದ್ದರು.

    ಇದನ್ನೂ ಓದಿ: ರಾಸ್ ಟೇಲರ್‌ಗೆ ಬೆಂಬಿಡದೆ ಇನ್ನೂ ಕಾಡುತ್ತಿದೆ ವಿಶ್ವಕಪ್ ಫೈನಲ್ ಸೋಲು

    ‘ವಿದೇಶಿ ಲೀಗ್‌ಗಳಲ್ಲಿ ಆಡಬೇಕೆಂದರೆ ತಂಬೆ ನಿವೃತ್ತಿ ಹೊಂದಬೇಕು, ದೇಶೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದರೂ ಈಗಾಗಲೇ ಅಬುಧಾಬಿಯಲ್ಲಿ ಟಿ20 ಲೀಗ್ ಆಡಿದ್ದಾರೆ. ಈ ಕುರಿತು ಐಪಿಎಲ್ ಆಡಳಿತ ಮಂಡಳಿ ತಂಬೆ ವಿರುದ್ಧ ಮುಂದಿನ ಸಭೆಯಲ್ಲಿ ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಪಿಎಲ್‌ನ ಆಟಗಾರರ ಡ್ರ್‌ಟಾ ಪಟ್ಟಿಯಲ್ಲಿ ತಂಬೆ ಹೆಸರಿದ್ದು, ಶಾರೂಕ್ ಖಾನ್ ಒಡೆತನದ ಟ್ರಿನ್‌ಬಾಗೊ ನೈಟ್ ರೈಡರ್ಸ್‌ ಕೊಂಡುಕೊಳ್ಳಲು ಸಾಧ್ಯತೆಗಳಿವೆ. 41ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ತಂಬೆ, ಐಪಿಎಲ್ ಆಡಿದ ಅತಿಹಿರಿಯ ಆಟಗಾರ ಎನಿಸಿಕೊಂಡಿದ್ದರು.

    ಇದನ್ನೂ ಓದಿ:ವೇಗಿ ಭುವನೇಶ್ವರ್ ಕುಮಾರ್‌ಗೆ ಮಾದರಿ ಯಾರು ಗೊತ್ತ….

    ಇದುವರೆಗೂ 33 ಐಪಿಎಲ್ ಪಂದ್ಯಗಳನ್ನಾಡಿ ತಂಬೆ, 28 ವಿಕೆಟ್ ಕಬಳಿಸಿದ್ದಾರೆ. ಆದರೆ, ಆಟಗಾರರು ಡ್ರ್‌ಟಾ ಕುರಿತಂತೆ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಿಪಿಎಲ್ ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಆಡಳಿತ ಅನುಮತಿ ನೀಡಿದರೆ ಆಗಸ್ಟ್ 18 ರಿಂದ ಸೆಪ್ಟೆಂಬರ್ 10 ರವರಗೆ ಖಾಲಿ ಸ್ಟೇಡಿಯಂನಲ್ಲಿ ಟ್ರಿನಿಡಾಡ್ ಹಾಗೂ ಟೊಬ್ಯಾಗೊದಲ್ಲಿ ಲೀಗ್ ನಡೆಯಲಿದೆ.

    ಬಾಬರ್ ಅಜಮ್‌ಗೆ ಸಾನಿಯಾ ಮಿರ್ಜಾ ಕೊಲೆ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts