ಧಾರವಾಡ: ‘ಕಾಂತಾರ’ ಸಿನಿಮಾ ಹಿನ್ನೆಲೆಯಲ್ಲಿ ಕರಾವಳಿಯ ಭೂತದ ಕೋಲದ ಆಚರಣೆ ಹಾಗೂ ಹಿಂದುತ್ವದ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಇದೀಗ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕೂಡ ಕಿಡಿಕಾರಿದ್ದು, ಹೇಳಿಕೆ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
‘ಕಾಂತಾರ’ ಸಿನಿಮಾ ಹಿನ್ನೆಲೆಯಲ್ಲಿ ನಟ ಚೇತನ್ ಅಪಸ್ವರ ಎತ್ತಿರುವ ವಿಚಾರವಾಗಿ ಪ್ರತಿಕ್ರಿಯಿರುವ ಪ್ರಮೋದ್ ಮುತಾಲಿಕ್, ಚೇತನ್‌ಗೆ ಯಾಕೆ ಉರಿ? ಎಂದು ಕಿಡಿಕಾರಿದ್ದಾರೆ. ಧಾರವಾಡದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಮುತಾಲಿಕ್, ಚೇತನ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಚೇತನ್‌ಗೆ ಇಲ್ಲಿನ ಮಣ್ಣಿನ ಗುಣ, ಸೊಗಡು ಗೊತ್ತಿಲ್ಲ. ಅವರು ಹುಟ್ಟಿದ್ದು ಎಲ್ಲಿಯೋ, ಬೆಳೆದಿದ್ದೂ ಎಲ್ಲಿಯೋ? ಈಗ ನಟ ಅಂತ ಇಲ್ಲಿ ಬಂದು ಪ್ರವೇಶ ಮಾಡಿದ್ದಾರೆ. ಅವರೊಬ್ಬ ನಾಸ್ತಿಕವಾದಿ, ಪಕ್ಕಾ ಕಮ್ಯೂನಿಸ್ಟ್‌ವಾದಿ ಬುದ್ಧಿಜೀವಿ. ಈ ದೇಶದ ಸಂಸ್ಕೃತಿ ಅವಹೇಳನ ಮಾಡುವುದೇ ಬುದ್ಧಿಜೀವಿಗಳ ಕುಕೃತ್ಯ. ಅದರಲ್ಲಿ ಚೇತನ್ ಸಹ ಒಬ್ಬರು. ಭೂತದಕೋಲ ಹಿಂದೂಗಳದ್ದಲ್ಲ ಅಂತ ಹೇಳಿದ್ದಾರೆ, ಅದು ಮೂರ್ಖತನದ ಹೇಳಿಕೆ, ಅದನ್ನು ವಾಪಸ್ ಪಡೆಯಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.
ಚೇತನ್‌ಗೆ ವೃತ್ತಿಮಾತ್ಸರ್ಯ; ಸಿನಿಮಾ ಹಿಟ್ ಮಾಡಿ ನಟನಾಗಿ ಉಳಿಯುವ ಸಾಮರ್ಥ್ಯವಿಲ್ಲ: ಚಕ್ರವರ್ತಿ ಸೂಲಿಬೆಲೆ
ಪತ್ನಿಯನ್ನು ಎತ್ತಿಕೊಂಡು ಬಂದು ಹಾಸನಾಂಬೆ ದರ್ಶನ ಪಡೆದ ಪತಿ; ಕಾರಣವಿದು…
‘ಕಾಂತಾರ’ ಭರ್ಜರಿ ಯಶಸ್ಸು; ಕುತೂಹಲ ಕೆರಳಿಸಿದೆ ಇವರಿಬ್ಬರ ಮೌನ!