ತ್ರಿಶೂರ್: ವೈಯಕ್ತಿಕ ಸಂರಕ್ಷಣಾ ಪರಿಕರಗಳ (ಪಿಪಿಇ) ಕಿಟ್ ಎಂದಾಗ ಮೊದಲು ನೆನಪಾಗುವುದೇ ಕೋವಿಡ್-19 ಮತ್ತು ಆರೋಗ್ಯ ಕಾರ್ಯಕರ್ತರು. ಈ ಕಿಟ್‌ಗಳನ್ನು ಕೇವಲ ಆರೋಗ್ಯ ಕಾರ್ಯಕರ್ತರು ಮಾತ್ರ ಬಳಸುತ್ತಾರೆ ನಾವು ಭಾವಿಸಬಹುದು. ಆದರೆ, ಹೈ ಟೆನ್ಷನ್ ವಿದ್ಯುತ್ ಲೈನ್ಗಳಲ್ಲಿ ಕೆಲಸ ಮಾಡುವವರು ವಿದ್ಯುತ್ ಆಘಾತಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪಿಪಿಇ ಕಿಟ್‌ಗಳನ್ನು ಸಹ ಬಳಸುತ್ತಾರೆಂಬುದು ಬಹುತೇಕ ಜನರಿಗೆ ತಿಳಿದಿರಲಿಕ್ಕಿಲ್ಲ. ಇದು ನಿಜ. ಆದರೆ ಇವರು ಬಳಸುತ್ತಿರುವುದು ಕೋವಿಡ್-19 ಪಿಪಿಇ ಕಿಟ್ ಅಲ್ಲ. ಬದಲಾಗಿ, ವಿದ್ಯುತ್ ಸಚಿವಾಲಯದಿಂದ ತರಬೇತಿ ಹೊಂದಿದವರಿಗೆ ಮಾತ್ರ ಪ್ರತ್ಯೇಕ ಕಿಟ್ ಕೊಡಲಾಗುತ್ತದೆ ಮತ್ತು ಅದರ ವೆಚ್ಚ 2 ಲಕ್ಷ ರೂ..!
ತಮಿಳುನಾಡಿನಲ್ಲಿ ಹೈ ಟೆನ್ಷನ್ ಕೇಬಲ್ ಕೆಲಸ ಮಾಡುವ ಅನುಭವಿಕರಿಂದ ಈ ಕಿಟ್ ನ ಬಳಕೆ ಆರಂಭಗೊಂಡಿದೆ.
ಈ ಪಿಪಿಇ ಕಿಟ್‌ಗಳನ್ನು ಧರಿಸಿದ ನಂತರ ನೌಕರರು ವಿದ್ಯುತ್ ಮಾರ್ಗಗಳು ಮತ್ತು ಉಪ ಕೇಂದ್ರಗಳನ್ನು ಸ್ವಿಚ್ ಆಫ್ ಮಾಡದೆ ಕೆಲಸ ಮಾಡಬಹುದು. ಕಿಟ್‌ಗಳು 400 ಕೆವಿ ಮಾರ್ಗಗಳಲ್ಲಿಯೂ ವಿದ್ಯುತ್ ಆಘಾತಗಳನ್ನು ನಿರೋಧಿಸುತ್ತವೆ. ಒಂದು ಕಿಟ್‌ನಲ್ಲಿ ಹೆಲ್ಮೆಟ್‌ಗಳು, ಕನ್ನಡಕ ಮತ್ತು ಬೂಟುಗಳಿರುತ್ತವೆ.
ಇದನ್ನೂ ಓದಿ: ಚೀನಾಕ್ಕೆ ಸೆಡ್ಡು- ಭಾರತದಲ್ಲಿ ತಯಾರಾಯ್ತು ಕೋಟಿಗೂ ಅಧಿಕ ಸ್ವದೇಶಿ ಪಿಪಿಇ ಕಿಟ್!
ಕೇಂದ್ರ ವಿದ್ಯುತ್ ಸಚಿವಾಲಯದ ಅಧೀನದ ಹಾಟ್ ಲೈನ್ ತರಬೇತಿ ಕೇಂದ್ರ (ಬೆಂಗಳೂರು) ದಲ್ಲಿ ತರಬೇತಿ ಪಡೆದವರಿಗೆ ಮಾತ್ರ ಈ ಕಿಟ್ ಧರಿಸಿ ಕೆಲಸ ಮಾಡಲು ಅನುಮತಿ ನೀಡಲಾಗುತ್ತದೆ. ಹೈ ಟೆನ್ಷನ್ ಮಾರ್ಗಗಳಲ್ಲಿ ಮತ್ತು ದೊಡ್ಡ ವಿದ್ಯುತ್ ಟವರ್ಗಳಲ್ಲಿ ಕೆಲಸ ಮಾಡಲು ದೈಹಿಕವಾಗಿ ಸದೃಢವಾಗಿರುವವರಿಗೆ ಮಾತ್ರ ಸಂಸ್ಥೆ ತರಬೇತಿ ನೀಡುತ್ತದೆ.
ಒಂದು ಕಿಟ್‌ನ ಬೆಲೆ 2 ಲಕ್ಷ ರೂ. ಆದರೆ, 400 ಕೆವಿ ಮಾರ್ಗದಲ್ಲಿ 4 ಗಂಟೆಗಳಿಗಿಂತ ಹೆಚ್ಚು ಕಾಲ ವಿದ್ಯುತ್ ಸ್ಥಗಿತಗೊಳಿಸುವುದರಿಂದ 16 ಲಕ್ಷ ರೂ. ಹಾನಿಯಾಗುತ್ತದೆ. ಕಿಟ್ ಧರಿಸದೆ ವಿದ್ಯುತ್ ಸ್ಥಗಿತಗೊಳಿಸಿ ಕೆಲಸ ಮಾಡಿ ಆರ್ಥಿಕ ಹಾನಿ ಅನುಭವಿಸುವದಕ್ಕಿಂತ 2 ಲಕ್ಷ ರೂ. ಬೆಲೆಯ ಕಿಟ್ ಧರಿಸಿ ನಿರಂತರ ವಿದ್ಯುತ್ ಹರಿವಿನ ಮಧ್ಯೆಯೂ ಕೆಲಸ ಮಾಡಿ, ಹಾನಿ ತಪ್ಪಿಸಬಹುದು ಎಂಬುದೂ ಇವರ ಒಂದು ಆಲೋಚನೆಯಾಗಿರಬಹುದು.