More

    ಸಲೂನ್​ ಶಾಪ್​ನಲ್ಲಿ ಪಿಪಿಇ ಕಿಟ್​ ಧರಿಸಿಯೇ ಹೇರ್​ ಕಟ್​!

    ಸಾಗರ: ಸಲೂನ್​ ಶಾಪ್​ನಲ್ಲಿ ಪಿಪಿಇ ಕಿಟ್​ ಧರಿಸಿಕೊಂಡು ಹೇರ್​ ಕಟ್ ಮಾಡಲಾಗುತ್ತಿದೆ​!

    ನಗರದ ನೆಹರುನಗರ ಉಪ್ಪಾರಕೇರಿಯ ‘ಫೇಸ್​ಲುಕ್​ ಸಲೂನ್​ ಶಾಪ್​’ ಪ್ರವೇಶ ಮಾಡುತ್ತಿದ್ದಂತೆ ಪಿಪಿಇ ಕಿಟ್​ ಧರಿಸಿದ ವ್ಯಕ್ತಿಯೊಬ್ಬರು ಕಾಣಿಸುತ್ತಾರೆ. ಅವರನ್ನು ನೋಡಿದ ಕೂಡಲೇ ಕಟಿಂಗ್​ ಸಲೂನ್​ ಬದಲಿಗೆ ಆಸ್ಪತ್ರೆಗೆ ಬಂದಿದ್ದೇವಾ? ಎಂದು ಅರೆಕ್ಷಣ ಶಾಕ್ ಆಗೋದು ಗ್ಯಾರಂಟಿ. ಹೌದು, ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಸಲೂನ್​ ಶಾಪ್​ ಮಾಲೀಕ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮ ಇದು.

    ಇದನ್ನೂ ಓದಿರಿ ಕರೊನಾ ಸೋಂಕಿಗೆ ಆಯುರ್ವೇದ ಔಷಧ ಪಡೆದ ಸಿ.ಟಿ.ರವಿ ಗುಣಮುಖ

    ‘ಫೇಸ್​ಲುಕ್​ ಸಲೂನ್​ ಶಾಪ್​’ ಮಾಲೀಕ ಪ್ರಶಾಂತ್​ ಕೆಳದಿ ಪಿಪಿಇ ಕಿಟ್​ ಹಾಕಿಕೊಂಡೇ ಗ್ರಾಹಕರ ಕೇಶ ವಿನ್ಯಾಸ ಮಾಡುತ್ತಿದ್ದಾರೆ. ಕಟಿಂಗ್​ ಮಾಡಿಸಲು ಬರುವ ಗ್ರಾಹಕರಿಗೆ ಥರ್ಮಲ್​ ಸ್ಕ್ರೀನಿಂಗ್​ ಮಾಡಿ ಜ್ವರ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಬಳಿಕವೇ ಅಂಗಡಿ ಒಳಗೆ ಬರಮಾಡಿಕೊಳ್ಳುತ್ತಾರೆ. ಗ್ರಾಹಕರ ಕೈಗೂ ಸ್ಯಾನಿಟೈಸರ್​ ಹಾಕಿ ನಂತರ ಕೇಶ ವಿನ್ಯಾಸ ಕೆಲಸ ಆರಂಭಿಸುತ್ತಾರೆ. ಸ್ವಚ್ಛತೆ, ಶುಭ್ರತೆ ಜತೆಯಲ್ಲಿ ಪ್ರತಿಯೊಬ್ಬರ ಕಟಿಂಗ್​ಗೂ ಒಂದೊಂದು ನ್ಯಾಪ್​ಕಿನ್​ ಬಳಸುತ್ತಿದ್ದಾರೆ.

    ಇಡೀ ಜಗತ್ತನೇ ತಲ್ಲಣಗೊಳಿಸಿರುವ ಕರೊನಾ ಸೋಂಕು, ಸಲೂನ್​ ಉದ್ಯಮದ ಮೇಲೂ ದುಷ್ಪರಿಣಾಮ ಬೀರಿದೆ. ಲಾಕ್​ಡೌನ್​ ವೇಳೆ ಸಂಪೂರ್ಣ ಬಂದ್​ ಆಗಿದ್ದ ಸಲೂನ್​ಗಳೀಗ ಕಾರ್ಯ ನಿರ್ವಹಿಸುತ್ತಿವೆಯಾದರೂ ಗ್ರಾಹಕರ ಸಂಖ್ಯೆ ಕ್ಷೀಣಿಸಿದೆ. ಇತ್ತ ಸೋಂಕಿನ ಭೀತಿ ನಡುವೆಯೂ ಹೊಟ್ಟೆಪಾಡಿಗಾಗಿ ಸಲೂನ್​ ಅಂಗಡಿಯವರು ಬಾಗಿಲು ತೆರೆದಿದ್ದಾರೆ. ಈ ನಡುವೆ ಪ್ರಶಾಂತ್​ ಕೆಳದಿ ಅವರ ಕಾಳಜಿ ಇತರರಿಗೂ ಮಾದರಿ.

    ತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts