More

    ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ವಹಿಸಿ

    ಯಾದಗಿರಿ: ಗ್ರಾಮೀಣ ಭಾಗದಲ್ಲಿನ ಸರಕಾರಿ ಆಸ್ಪತ್ರೆಗಳಿಗೆ ಜನತೆ ಬಂದರೆ ವೈದ್ಯರು ಮೊದಲು ಮಾನವೀಯತೆಯಿಂದ ನಡೆದುಕೊಳ್ಳುವಂತೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಸೂಚನೆ ನೀಡಿದರು.
    ಶುಕ್ರವಾರ ನಗರದ ಶಾಸಕರ ಕಚೇರಿಯಲ್ಲಿ ಗುರುಮಠಕಲ್ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಮ್ಮ ಗಡಿಭಾಗವಾದ್ದರಿಂದ ಅಲ್ಲಿನ ಜನತೆ ಮುಗ್ಧರಾಗಿದ್ದಾರೆ. ಅವರೊಂದಿಗೆ ಅಧಿಕಾರಿಗಳು ಒರಟಾಗಿ ನಡೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದರು.
    ಗುರುಮಠಕಲ್ ತಾಲೂಕಾಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಸೌಲಭ್ಯದ ಅಭಾವವಿದ್ದರೆ ಹೇಳಿ. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಕ್ಷೇತ್ರದ ಜನರ ಆರೋಗ್ಯ ಕಾಳಜಿ ದೃಷ್ಠಿಯಿಂದ ಸೈದಾಪೂರ, ಗುರುಮಠಕಲ್, ಹತ್ತಿಕುಣಿ ಸೇರಿ 6 ಆರೋಗ್ಯ ಕೇಂದ್ರಗಳಿಗೆ ಸಕರ್ಾರ ಆಡಳಿತ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿದೆ. ಗುರುಮಠಕಲ್ ಪಟ್ಟಣದ 50 ಬೆಡ್ ಆಸ್ಪತ್ರೆಯಲ್ಲಿ ಆಕ್ಸಿಜನ್, ಸೈದಾಪೂರ ಮತ್ತು ಅರಕೇರಾ(ಬಿ) ಆಸ್ಪತ್ರೆಯಲ್ಲಿ 30 ಬೆಡ್ ಜಂಬೋ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಕೋವಿಡ್ ಹೊಸ ತಳಿಯ ಬಗ್ಗೆ ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸಬೇಕು. ಈ ಹಿಂದೆ ಮೂರು ಅವಧಿಯಲ್ಲಿ ಶ್ರಮಿಸಿದ ಹಲವರಿಗೆ ನಾನು ನನ್ನ ಜನರ ಪರವಾಗಿ ಅಬಾರಿಯಾಗಿದ್ದೇನೆ. ಈ ಬಾರಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಸಹಿಸುವುದಿಲ್ಲ. ಹಿಂದಿನ ಹಲವು ಕಹಿ ಘಟನೆಗಳಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ಕ್ಷೇತ್ರದಲ್ಲಿ ಎಲ್ಲಿಯಾದರೂ ಒಂದೇ ಒಂದು ಪ್ರಕರಣ ಕಂಡು ಬಂದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
    ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಮಾತನಾಡಿ, ಶಾಸಕರ ಸಲಹೆಯಂತೆ ಕೋವಿಡ್ ಮುಂಜಾಗ್ರತ ಕ್ರಮವಾಗಿ ಪ್ರತಿಯೊಂದು ಶಾಲೆಯಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಜಾಗೃತಿ ಮೂಡಿಸಲು ಇಲಾಖೆ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts