More

    ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ಇರಲಿ


    ಯಾದಗಿರಿ: ಸಾರ್ವಜನಿಕರು ಕೋವಿಡ್ ಉಪತಳಿ ಜೆಎನ್ 1 ವೈರಸ್ ಕುರಿತು ಆತಂಕ ಪಡಬಾರದು. ಸರಕಾರದಿಂದ ನೀಡಲಾಗುವ ಮಾರ್ಗಸೂಚಿ ಪಾಲಿಸುವ ಜತೆಗೆ ವೈಯಕ್ತಿಕ ಸ್ವಚ್ಚತೆ ಕುರಿತಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಸಲಹೆ ನೀಡಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ವೈರಸ್ ತಡೆಗಟ್ಟುವ ಕುರಿತು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಆರೋಗ್ಯ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕೆ ಸಿದ್ದತಾ ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರು ಅನಗತ್ಯವಾಗಿ ಭಯಪಡಬಾರದು. ಪ್ರತಿನಿತ್ಯ ಕೋವಿಡ್ ಮಾದರಿ ಸಂಗ್ರಹಣೆಯನ್ನು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಇನ್ನಿತರ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಲು ಗುರಿ ನಿಗದಿಪಡಿಸಲಾಗಿದೆ. ಹಾಗೂ ಹೊರ ರಾಜ್ಯದಿಂದ ಬರುವವರ ಬಗ್ಗೆ ನಿಗಾವಹಿಸಿ ಮಾರ್ಗಸೂಚಿಗಳ ಅನ್ವಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಶಹಾಪುರ ತಾಲೂಕಿನಲ್ಲಿ ಶನಿವಾರ ಮೊದಲ ಪ್ರಕರಣ ವರದಿಯಾಗಿದೆ. ಕೋವಿಡ್ ಮುಂಜಾಗ್ರತೆಗಾಗಿ ಜಿಲ್ಲೆಯಲ್ಲಿ ಈಗಾಗಲೇ ಸರಕಾರಿ ಆಸ್ಪತ್ರೆಗಳಳ್ಲಿ ಐಸಿಯು ಘಟಕಗಳ ಉಪಕರಣ ಮತ್ತು ಅಕ್ಸಿಜನ್, ಸಿಲಿಂಡರ, ಪಿಎಸ್ಎ ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜನ್ ಘಟಕ ಸುಸ್ಥಿತಿಯಲ್ಲಿ ಇಡಲಾಲಾಗಿದೆ. ಪ್ರಸ್ತುತ ಜಿಲ್ಲೆಯ ಒಟ್ಟು ಸರಕಾರ ಆಸ್ಪತ್ರೆಗಳಲ್ಲಿ 862 ಬೆಡ್ ಸಿದ್ಧಪಡಿಸಿಕೊಂಡಿದ್ದು, ಅವುಗಳಲ್ಲಿ ಆಕ್ಸಿಜನ್ ಇಲ್ಲದ 429 ಬೆಡ್ಗಳು, ಆಕ್ಸಿಜನ್ ಇರುವ 365 ಬೆಡ್ಗಳು ಇವೆ ಎಂದು ಅಧಿಕಾರಿಗಳು ಸಭೆ ಗಮನಕ್ಕೆ ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts