More

    ರಸ್ತೆ ಸಮೀಪ ವಿದ್ಯುತ್ ಪರಿವರ್ತಕ, ಭೀತಿಯಲ್ಲಿ ಜನತೆ

    ಮುಂಡರಗಿ: ಪಟ್ಟಣದ ಶ್ರೀ ಬಸವೇಶ್ವರ ನಗರದಲ್ಲಿರುವ ವಿದ್ಯುತ್ ಪರಿವರ್ತಕ (ಟಿಸಿ) ಅಪಾಯಕ್ಕೆ ಆಹ್ವಾನ ನೀಡುವ ಸ್ಥಿತಿಯಲ್ಲಿದ್ದು, ಸಾರ್ವಜನಿಕರು ಭೀತಿಯಲ್ಲೇ ಸಂಚರಿಸುತ್ತಿದ್ದಾರೆ.


    ಬಸವೇಶ್ವರ ನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಪರಿವರ್ತಕದಲ್ಲಿ ವಿದ್ಯುತ್ ಉಪಕರಣಗಳು ಮಕ್ಕಳು ಕೈಗೆ ನಿಲುಕುವಂತಿವೆ. ಹೀಗಾಗಿ ಪರಿವರ್ತಕವನ್ನು ಮೇಲ್ಮಟ್ಟದಲ್ಲಿ ಅಥವಾ ಸೂಕ್ತ ಸುವ್ಯವಸ್ಥೆಯ ರೀತಿಯಲ್ಲಿ ಅಪಾಯಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅವಶ್ಯವಿದೆ.


    ಈ ವಿದ್ಯುತ್ ಪರಿವರ್ತಕವಿರುವ ರಸ್ತೆಗೆ ಹೊಂದಿಕೊಂಡು ಅಂಗನವಾಡಿ ಕೇಂದ್ರವಿದ್ದು, ಸಣ್ಣ ಮಕ್ಕಳು, ಪಾಲಕರು ಭಯ ಪಡುವಂತ ವಾತಾವರಣವಿದೆ.

    ಹೆಸ್ಕಾಂ ಇಲಾಖೆಯು ತಕ್ಷಣ ಎಚ್ಚೆತ್ತುಕೊಂಡು ವಿದ್ಯುತ್ ಪರಿವರ್ತಕ ಸುತ್ತ ತಂತಿ ಬೇಲಿ ಅಳವಡಿಸುವುದು, ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸ್ಥಳೀಯರಾದ ವೀರಣ್ಣ ಮಡಿವಾಳರ, ಮಹಾಂತೇಶ ಕಲಾಲ, ಸುರೇಶ ನಾಯ್ಕರ, ನಾಗರಾಜ ಮುರಡಿ, ವಿಜಯ ಹಲ್ಯಾಳ, ಸಂತೋಷ ಶೀರಿ, ಅಡಿವೆಪ್ಪ ಚಲವಾದಿ ಮೊದಲಾದವರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts