More

    ಭಾವಚಿತ್ರಕ್ಕೆ ಅವಮಾನಿಸಿ ಅಶಾಂತಿಗೆ ಯತ್ನ

    ಮಾನ್ವಿ: ಕಲಬುರಗಿ ಜಿಲ್ಲೆ ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣ ಅವರ ಭಾವಚಿತ್ರಕ್ಕೆ ಅವಮಾನಿಸಿರುವುದು ಖಂಡನೀಯ. ಕೂಡಲೇ ಕಿಡಿಗೇಡಿಗಳನ್ನ ಬಂಧಿಸಿ ಕಾನೂನು ಕ್ರಮ ವಹಿಸಬೇಕೆಂದು ಒತ್ತಾಯಿಸಿ ಉಪ ತಹಸೀಲ್ದಾರ್ ವಿರುಪಣ್ಣಗೆ ಬಸವಕೇಂದ್ರ, ಲಾಳಗೊಂಡ ಸಮಾಜದ ಜಿಲ್ಲಾಘಟಕ ಮತ್ತು ವೀರಶೈವ ಲಿಂಗಾಯತ ಸಮಾಜದ ತಾಲೂಕು ಘಟಕದಿಂದ ಗುರುವಾರ ಮನವಿ ಸಲ್ಲಿಸಲಾಯಿತು.

    ಹನ್ನೆರಡನೇ ಶತಮಾನದಲ್ಲಿ ಜಾತಿ-ಮತಗಳನ್ನು ದೂರ ಮಾಡಿ ಸಮಾನತೆ ತತ್ವಗಳನ್ನು ಬೋಧಿಸಿ ಎಲ್ಲರೂ ಒಂದೇ ಎಂದು ಸಾರಿದ ವಿಶ್ವಗುರು ಬಸವಣ್ಣ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅವಮಾನ ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಿರುವುದು ಸಲ್ಲ. ವಿಕೃತ ಮನಸ್ಸಿನ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಪ್ರಮುಖರಾದ ತಿಪ್ಪಣ್ಣ ಬಾಗಲವಾಡ, ಡಿ.ಜಿ.ಕರ್ಕಿಹಳ್ಳಿ, ಮಹ್ಮದ್ ಮುಜೀಬ್, ಮಲ್ಲಿಕಾರ್ಜುನಗೌಡ ಚಿಮ್ಲಾಪುರ, ನಾಗನಗೌಡ ನೀರಮಾನ್ವಿ, ದೇವೇಂದ್ರ ದುರ್ಗದ್, ಚನ್ನಬಸವ ಬೆಟ್ಟದೂರು, ವೀರನಗೌಡ ಗವಿಗಟ್ಟು, ಅಯ್ಯನಗೌಡ ನೀರಮಾನ್ವಿ, ಪಂಪಣ್ಣ ಕುಂಬಾರ, ಮಹಾದೇವಪ್ಪಗೌಡ ಹಿರೇಕೊಟ್ನೆಕಲ್, ಅಮರೇಶ ಗವಿಗಟ್ಟು, ಕುಮಾರಸ್ವಾಮಿ ಮೇದಾ, ಬಸನಗೌಡ ಮಲ್ಲಿಗೆಮಡುವು, ಶರಣಪ್ಪ ಮೇಟಿ ಮಾಡಗಿರಿ, ದೊಡ್ಡನಗೌಡ ಚಿಮ್ಲಾಪುರ, ವೀರಭದ್ರಗೌಡ ಗವಿಗಟ್ಟು, ಉದಯಶಂಕರಗೌಡ, ಚಂದ್ರಶೇಖರ ಚೀಕಲಪರ್ವಿ, ಅಮರೇಶ ಹಡಪದ್, ವಿರುಪಣ್ಣ ಕುಂಬಾರ, ಚಂದ್ರಶೇಖರಗೌಡ ಹರವಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts