More

    ಏಷ್ಯನ್ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಪೂಜಾ, ಬೆಳ್ಳಿಗೆ ತೃಪ್ತಿಪಟ್ಟ ಮೇರಿ ಕೋಮ್

    ದುಬೈ: ಭಾರತದ ಪೂಜಾ ರಾಣಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸತತ 2ನೇ ಬಾರಿ ಸ್ವರ್ಣ ಪದಕ ಜಯಿಸಿದ್ದಾರೆ. ಆರು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್, ಅನುಪಮಾ ಮತ್ತು ಲಾಲ್‌ಬೌತ್ಸಹಿ ರಜತ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

    ಏಷ್ಯನ್ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಪೂಜಾ, ಬೆಳ್ಳಿಗೆ ತೃಪ್ತಿಪಟ್ಟ ಮೇರಿ ಕೋಮ್

    ಭಾನುವಾರ ನಡೆದ ಮಹಿಳೆಯರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಪೂಜಾ ರಾಣಿ ಉಜ್ಬೇಕಿಸ್ತಾನದ ಮೊವ್ಲೊನೊವಾ ವಿರುದ್ಧ ಜಯಿಸಿದರು. 51 ಕೆಜಿ ವಿಭಾಗದ ಫೈನಲ್‌ನಲ್ಲಿ ಮೇರಿ ಕೋಮ್ ಕಜಾಕಿಸ್ತಾನದ ನಜಿಮ್ ಕೈಜೈಬೇ ವಿರುದ್ಧ 2-3ರಿಂದ ಪರಾಭವಗೊಂಡರು. 38 ವರ್ಷದ ಮೇರಿ ಇದು ಏಷ್ಯನ್ ಕೂಟದಲ್ಲಿ ಗೆದ್ದ 7ನೇ ಪದಕವಾಗಿದೆ. 38 ವರ್ಷದ ಮೇರಿ ತಮಗಿಂತ 11 ವರ್ಷ ಕಿರಿಯ ಬಾಕ್ಸರ್ ವಿರುದ್ಧದ ಸ್ವರ್ಣ ಪದಕ ಕಾದಾಟದಲ್ಲಿ ಉತ್ತಮ ಆರಂಭ ಕಂಡರೂ, ಬಳಿಕ ತಿರುಗೇಟು ಎದುರಿಸಿದರು. ಮಣಿಪುರಿ ಬಾಕ್ಸರ್ ಮೇರಿ ರಜತ ಪದಕದ ಜತೆಗೆ 3.61 ಲಕ್ಷ ರೂ. ಬಹುಮಾನ ಪಡೆದರು.

    ಇದನ್ನೂ ಓದಿ:  ಕ್ರಿಕೆಟ್​ ಜೀವನದ 2 ವಿಷಾದಗಳನ್ನು ಹೇಳಿಕೊಂಡ ಸಚಿನ್ ತೆಂಡುಲ್ಕರ್!

    81+ ಕೆಜಿ ವಿಭಾಗದಲ್ಲಿ ಅನುಪಮಾ ಮತ್ತು 64 ಕೆಜಿ ವಿಭಾಗದಲ್ಲಿ ಲಾಲ್‌ಬೌತ್ಸಹಿ ಕೂಡ ಫೈನಲ್‌ನಲ್ಲಿ ಎಡವಿದರು. ಭಾರತಕ್ಕೆ ಕೂಟದಲ್ಲಿ ಇದುವರೆಗೆ 15 ಪದಕ ಖಚಿತವಾಗಿದ್ದು, ಈ ಪೈಕಿ 8 ಬಾಕ್ಸರ್‌ಗಳು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಇನ್ನು ಮೂವರು ಪುರುಷ ಬಾಕ್ಸರ್‌ಗಳ ಫೈನಲ್ ಪಂದ್ಯ ಬಾಕಿ ಉಳಿದಿದೆ. ಪುರುಷರ ವಿಭಾಗದಲ್ಲಿ ಅಮಿತ್ ಪಾಂಗಲ್, ಶಿವ ಥಾಪಾ ಮತ್ತು ಸಂಜೀತ್ ಸೋಮವಾರ ಸ್ವರ್ಣ ಪದಕಕ್ಕೆ ಹೋರಾಡಲಿದ್ದಾರೆ. 2019ರ ಆವೃತ್ತಿಯಲ್ಲಿ 13 ಪದಕ ಜಯಿಸಿದ್ದು, ಕೂಟದಲ್ಲಿ ಭಾರತದ ಈ ಹಿಂದಿನ ಅತ್ಯುತ್ತಮ ನಿರ್ವಹಣೆಯಾಗಿತ್ತು.

    ಸೋಷಿಯಲ್ ಮೀಡಿಯಾದಲ್ಲಿ ಪುತ್ರಿಯ ಮುಖ ತೋರಿಸದ ಬಗ್ಗೆ ವಿರುಷ್ಕಾ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts