More

    ಮಾಲ್ಡೀವ್ಸ್ ಸರ್ಕಾರದ ವಿರುದ್ಧ ವಿಪಕ್ಷ ಪ್ರತಿಭಟನೆ: ಸಂಸತ್​ನಲ್ಲೇ ಮಾರಾಮಾರಿ!

    ಮಾಲೇ(ಮಾಲ್ಡೀವ್ಸ್): ಭಾರತ ವಿರೋಧ ನಿಲುವು ತಳೆದಿರುವ ಅಧ್ಯಕ್ಷ ಮುಯಿಝಿ ನೇತೃತ್ವದ ಮಾಲ್ಡೀವ್ಸ್ ಸರ್ಕಾರ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಪ್ರತಿಪಕ್ಷಗಳು ಪ್ರತಿಭಟನೆ ತೀವ್ರಗೊಳಿಸಿದ್ದು, ಸೋಮವಾರ ಸಂಸತ್​ನಲ್ಲಿ ವಿಪಕ್ಷ ನಾಯಕರು ಹಾಗೂ ಆಡಳಿತದ ಪಕ್ಷದ ಸಚಿವರ ನಡುವೆ ತಳ್ಳಾಟ – ನೂಕಾಟ ನಡೆದಿದೆ. ಇದರೊಂದಿಗೆ ಆ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಏಕವಚನದಲ್ಲಿ ಸಂಬೋಧಿಸಿದಕ್ಕೆ ಸಿಎಂ ಸಿದ್ದರಾಮಯ್ಯ ವಿಷಾದ!

    ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿಯ ಸಂಸದೀಯ ಸಭೆಯಲ್ಲಿ ನಾಲ್ಕು ಕ್ಯಾಬಿನೆಟ್ ಸದಸ್ಯರಿಗೆ ಅನುಮೋದನೆ ತಡೆಯಲು ವಿಪಕ್ಷಗಳು ಸಜ್ಜಾಗಿದ್ದವು. 22 ಸದಸ್ಯರ ಅನುಮೋದನೆ ಪಡೆಯಲು ತಯಾರಿ ನಡೆದಿತ್ತು. ಆದರೆ ಈ ಪ್ರಕ್ರಿಯೆ ಜಟಾಪಟಿಯಲ್ಲಿ ಅಂತ್ಯಗೊಂಡಿದೆ. ವಿರೋಧ ಪಕ್ಷದ ಸಂಸದರನ್ನು ಸಂಸತ್​ಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು. ಇದು ತೀವ್ರ ಜಟಾಪಟಿಗೆ ಕಾರಣವಾಗಿದೆ.

    ಆಡಳಿತದ ಪಕ್ಷದ ಸದಸ್ಯರು ಸ್ಪೀಕರ್ ಚೇಂಬರ್‌ಗೆ ಮುಗ್ಗಿ ಅಧಿವೇಶನ ನಡೆಯದಂತೆ ತಡೆದಿದ್ದಾರೆ. ಇತ್ತ ವಿಪಕ್ಷ ಸದಸ್ಯರನ್ನು ಪ್ರವೇಶಿಸದಂತೆ ತಡೆಯಲಾಗಿತ್ತು. ಇದರಿಂದ ತಳ್ಳಾಟ ಸಂಭವಿಸಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಾಕರ ನಡುವೆ ಸಂಘರ್ಷ ಏರ್ಪಟ್ಟಿರುವುದು ದ್ವೀಪರಾಷ್ಟ್ರದಲ್ಲಿ ಮತ್ತೊಮ್ಮೆ ರಾಜಕೀಯ ಬಿಕ್ಕಟ್ಟು ಎದುರಾಗುವಂತೆ ಮಾಡಿದೆ. .

    ಭಾರತ ವಿರೋಧಿ ನಡೆಯಿಂದ ಭಾರಿ ಟೀಕೆಗೆ ಒಳಗಾಗಿದ್ದ ಮಾಲ್ಡೀವ್ಸ್ ಸರ್ಕಾರ ಪ್ರಧಾನಿ ಮೋದಿ ಹಾಗೂ ಭಾರತೀಯರ ವಿರುದ್ಧ ಮಾಡಿದ ಟ್ವೀಟ್‌ನಿಂದ ನಾಲ್ವರು ಮಾಲ್ಡೀವ್ಸ್ ಸಚಿವರು ಅಮಾನತ್ತಾಗಿದ್ದರು. ಇದೀಗ ಈ ನಾಲ್ವರು ಸಚಿವರನ್ನು ಮತ್ತೆ ಕ್ಯಾಬಿನೆಟ್‌ಗೆ ಸೇರಿಸಲು ಸಂಸರದ ಅನುಮೋದನೆ ಪಡೆಯಲು ಮುಯಿಝಿ ಸರ್ಕಾರ ಕಸರತ್ತು ನಡೆಸಿತ್ತು. ಆದರೆ ಇದು ಜಟಾಪಟಿ ಕಾರಣ ಯಶಸ್ವಿಯಾಗಿಲ್ಲ.

    ಆಡಳಿತರೂಡ ಪ್ರೊಗ್ರೆಸ್ಸೀವ್ ಪಾರ್ಟಿ ಆಫ್ ಮಾಲ್ಡೀವ್ಸ್ ಹಾಗೂ ಪೀಪಲ್ ನ್ಯಾಶನಲ್ ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರ್ಕಾರ ಇದೀಗ ಇಕ್ಕಟ್ಟಿಗೆ ಸಿಲುಕಿದೆ. ನಾಲ್ವರು ಸಚಿವರನ್ನು ಮತ್ತೆ ಕ್ಯಾಬಿನೆಟ್‌ಗೆ ಸೇರ್ಪಡೆಗೊಳಿಸಲು ಅಡ್ಡಿಮಾಡುತ್ತಿರವ ವಿಪಕ್ಷಗಳು ಸರ್ಕಾರದ ಆಡಳಿತವನ್ನೇ ತಡೆ ಹಿಡಿಯುತ್ತಿವೆ ಎಂಬ ಆರೋಪವನ್ನು ಆಡಳಿತ ಪಕ್ಷ ಮಾಡುತ್ತಿದೆ.

    ‘ಪ್ರಧಾನಿ ನರೇಂದ್ರ ಮೋದಿ ವಿಷ್ಣುವಿನ 11ನೇ ಅವತಾರ’!..ಖರ್ಗೆ ಹೀಗಂದಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts