More

    ಅಕ್ಷಯ್​ ಕುಮಾರ್ ಮಿಸ್ಟೇಕ್​… ಬೋಲ್ಡ್​​ ಡ್ರೆಸ್​ ಧರಿಸಿ ಬಂದು ವೇದಿಕೆ ಮೇಲೆ ಮುಜುಗರಕ್ಕೀಡಾದ ನಟಿ

    ಮುಂಬೈ: ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದು, ಅವರ ನಟನೆಯ ಬಡೆ ಮಿಯಾನ್​ ಛೋಟೆ ಮಿಯಾನ್​ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ನಟ ಟೈಗರ್​ ಶ್ರಾಪ್​ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ​

    ಇಂದು ಈ ಚಿತ್ರದ ಟ್ರೈಲರ್​ ರಿಲೀಸ್​ ಈವೆಂಟ್​ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಚಿತ್ರದ ನಟಿಯಲ್ಲಿ ಒಬ್ಬರಾದ ಅಲಯಾ ಎಫ್​ ತುಂಬಾ ಗ್ಲಾಮರಸ್​ ಆಗಿ ಈವೆಂಟ್​ ಆಗಮಿಸಿದ್ದರು. ಕಪ್ಪು ಬಣ್ಣದ ಪಾರದರ್ಶಕ ಉಡುಗೆ ಜತೆಗೆ ಹಸಿರು ಬಣ್ಣದ ಸ್ಕರ್ಟ್​ ಧರಿಸಿದ್ದರು.

    ಟ್ರೈಲರ್​ ಬಿಡುಗಡೆ ಬಳಿಕ ವೇದಿಕೆ ಮೇಲೆ ಕ್ಯಾಮೆರಾಗೆ ಪೋಸ್​ ನೀಡುವಾಗ ತನ್ನ ಪಕ್ಕದಲ್ಲೇ ನಿಂತಿದ್ದ ನಟಿ ಅಲಯಾ ಎಫ್​ ಅವರ ಡ್ರೆಸ್​ ಮೇಲೆ ತನಗೆ ಗೊತ್ತಿಲ್ಲದೆ ಅಕ್ಷಯ್ ಕಾಲಿಟ್ಟಿದ್ದರು. ಇದನ್ನು ಗಮನಿಸಿದ ಅಲಯಾ ಡ್ರೆಸ್​ ಬಿಡಿಸಿಕೊಳ್ಳಲು ಪರದಾಡಿದರು. ಎಲ್ಲಿ ಡ್ರೆಸ್​ ಜಾರಿ ಬಿಡುತ್ತದೆಯೋ ಎಂಬ ಭಯದಲ್ಲೇ ಅಲಯಾ ತನ್ನ ಡ್ರೆಸ್​ ಅನ್ನು ಬಿಗಿಯಾಗಿ ಹಿಡಿದುಕೊಂಡಿದ್ದರು. ಕೊನೆಗೆ ಹೇಗೋ ಅಕ್ಷಯ್​ ಕಾಲಿನಿಂದ ತನ್ನ ಡ್ರೆಸ್​ ಬಿಡಿಸಿಕೊಂಡು ಅಲಯಾ ನಿಟ್ಟುಸಿರು ಬಿಟ್ಟರು. ಆದರೆ, ಡ್ರೆಸ್​ ಕಾಲಿಗೆ ಸಿಕ್ಕಿಕೊಂಡಿರುವುದು ಅಕ್ಷಯ್​ ಗಮನಕ್ಕೆ ಬರಲೇ ಇಲ್ಲ. ಅವರು ತಮ್ಮ ಪಕ್ಕದಲ್ಲಿದ್ದ ಮತ್ತೊಬ್ಬ ನಟಿ ಹಾಗೂ 2017ರ ಭುವನ ಸುಂದರಿ ಮಾನುಸಿ ಚಿಲ್ಲರ್​ ಜತೆ ಮಾತಿನಲ್ಲಿ ಮುಳುಗಿದ್ದರು.

    ಈ ಪ್ರಸಂಗಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನಟಿ ಅಲಯಾ ಪರದಾಟವನ್ನು ನೋಡಿ ನೆಟ್ಟಿಗರು ನಕ್ಕಿದ್ದಾರೆ. ಅಯ್ಯೋ ನಟಿ ಇಂಥಾ ಗತಿ ಬರಬಾರದಿತ್ತು ಎಂದು ಕಾಲೆಳೆದಿದ್ದಾರೆ. ಸರಿಯಾಗಿ ಡ್ರೆಸ್​ ಮಾಡಿದ್ದರೆ ಇಂಥಾ ಸ್ಥಿತಿ ಬರುತ್ತಿರಲಿಲ್ಲ ಎಂದು ಕೆಲ ನೆಟ್ಟಿಗರು ನಟಿಗೆ ಸಲಹೆ ನೀಡಿದ್ದಾರೆ.

    ಸಿನಿಮಾ ವಿಚಾರಕ್ಕೆ ಬಂದರೆ, ಬಡೆ ಮಿಯಾನ್​ ಛೋಟೆ ಮಿಯಾನ್​ ಸಿನಿಮಾ ಏಪ್ರಿಲ್​ 10 ಕ್ಕೆ ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ. ಈ ಸಿನಿಮಾ ಅಜಯ್​ ದೇವಗನ್​ ಅವರ ಮೈದಾನ್​ ಸಿನಿಮಾ ಜತೆ ಬಾಕ್ಸ್​ಆಫೀಸ್​ನಲ್ಲಿ ಪೈಪೋಟಿಗೆ ಇಳಿಯಲಿದೆ. (ಏಜೆನ್ಸೀಸ್​)

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗಿಲ್​ ಪಾಂಡಿಯಮ್ಮ! ವಯಸ್ಸು ಕೇಳಿ ದಂಗಾದ ಅಭಿಮಾನಿಗಳು

    ಈ ಒಂದು ಕಾರಣಕ್ಕೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲ್ಲ! ಕೊನೆಗೂ ಮೌನ ಮುರಿದ ತ್ರಿಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts