More

    ‘ಪ್ರಧಾನಿ ನರೇಂದ್ರ ಮೋದಿ ವಿಷ್ಣುವಿನ 11ನೇ ಅವತಾರ’!..ಖರ್ಗೆ ಹೀಗಂದಿದ್ಯಾಕೆ?

    ಡೆಹ್ರಾಡೂನ್(ಉತ್ತರಾಖಂಡ): ಪ್ರಧಾನಿ ನರೇಂದ್ರ ಮೋದಿ ಅವರು ವಿಷ್ಣುವಿನ 11ನೇ ಅವತಾರವಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ತಂಗಿ ಮದುವೆಗೆ ಗ್ರೀನ್​ ಸಿಗ್ನಲ್​ ಕೊಟ್ಟ ಸಾಯಿಪಲ್ಲವಿ ಇನ್ನೂ ಸಿಂಗಲ್‌ ಆಗಿರೋದ್ಯಾಕೆ ಗೊತ್ತಾ?

    ಡೆಹ್ರಾಡೂನ್‌ನ ಬನ್ನು ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಮೋದಿ ಅವರು ವಿಷ್ಣುವಿನ 11ನೇ ಅವತಾರವಾಗಲು ಪ್ರಯತ್ನಿಸುತ್ತಿದ್ದಾರೆ. ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿ ಕೊಡುಗೆ ಏನು ಎಂದು ಹೇಳಲಿ, ಬಿಜೆಪಿಯವರು ಕಾಂಗ್ರೆಸ್‌ಗೆ ದೇಶಭಕ್ತಿ ಕಲಿಸಬಾರದು. ದೇಶದಲ್ಲಿ ಕಾಂಗ್ರೆಸ್ ಸಂಸ್ಥೆಗಳನ್ನು ನಿರ್ಮಿಸಿದೆ, ಬಿಜೆಪಿ ಅವುಗಳನ್ನು ಮಾರಾಟ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬಿಜೆಪಿ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ. ಬಿಜೆಪಿ ಸರ್ಕಾರ ಇರುವುದರಿಂದ ನನ್ನ ಹೆಲಿಕಾಪ್ಟರ್ ಇಳಿಸಲು ಸಹ ಅನುಮತಿಸಿಲ್ಲ. ಅವರು ಬರೀ ಸುಳ್ಳು ಹೇಳಿ ಅದರದೇ ಜಾಲ ಸೃಷ್ಟಿಸುತ್ತಿದ್ದಾರೆ. ಸರ್ವಾಧಿಕಾರ ಧೋರಣೆಗೆ ಕಾಂಗ್ರೆಸ್‌ ಹೆದರುವುದಿಲ್ಲ ಎಂದು ಗುಡುಗಿದರು.

    ಮೋದಿಯವರ ಸರ್ಕಾರ ಮತ್ತು ಬಿಜೆಪಿ ರಾಜ್ಯ ಸರ್ಕಾರಗಳು ಕಾಂಗ್ರೆಸ್ ಯಾತ್ರೆ ಸಮಾವೇಶಗಳಿಗೆ ಅಡ್ಡಿಪಡಿಸುತ್ತಿವೆ, ಇದರಿಂದ ಜನರು ದೂರ ಉಳಿದಿದ್ದಾರೆ. ಅಸ್ಸಾಂನ ಬಿಜೆಪಿ ಸರ್ಕಾರವು ರಾಹುಲ್ ಗಾಂಧಿ ಅವರ ಭೇಟಿಗೆ ಅಡೆತಡೆಗಳನ್ನು ಸೃಷ್ಟಿಸಿತ್ತು. ಕೆಲವು ಸ್ಥಳಗಳಲ್ಲಿ ಕಲ್ಲು ತೂರಾಟವನ್ನೂ ಮಾಡಲಾಗಿತ್ತು ಎಂದು ಹೇಳಿದರು.

    ಅಂಕಿತಾ ಭಂಡಾರಿ ಪ್ರಕರಣದಲ್ಲಿ ಸರ್ಕಾರ ವಿಐಪಿಗಳನ್ನು ಏಕೆ ರಕ್ಷಿಸುತ್ತಿದೆ? ಅಂಕಿತಾ ಭಂಡಾರಿ ಹಂತಕರನ್ನು ಹಿಡಿಯಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದರು.

    ಇದಕ್ಕೂ ಮುನ್ನ ಡೆಹ್ರಾಡೂನ್‌ಗೆ ಆಗಮಿಸಿದ ಖರ್ಗೆಗೆ ಕಾಂಗ್ರೆಸ್ಸಿಗರು ಭವ್ಯ ಸ್ವಾಗತ ಕೋರಿದರು. ಸಮಾವೇಶದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

    ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಕರಣ್ ಮಹಾರಾ, ವಿರೋಧ ಪಕ್ಷದ ನಾಯಕ ಯಶಪಾಲ್ ಆರ್ಯ, ಮಾಜಿ ಪಿಸಿಸಿ ಅಧ್ಯಕ್ಷ ಪ್ರೀತಮ್ ಸಿಂಗ್ ಉಪಸ್ಥಿತರಿದ್ದರು.

    ಚಿತ್ರವೊಂದಕ್ಕೆ 8 ಕೋಟಿ ರೂ.ಸಂಭಾವನೆ ಪಡೆಯುವ ಕಮಲ್‌ ಪುತ್ರಿ ಆಸ್ತಿ ಮೌಲ್ಯವೆಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts