More

    ಈ ಕಳ್ಳರಿಗೆ ಅಂಡರ್​ವೇರ್​ ಮಾತ್ರ ಯೂನಿಫಾರಂ!

    ಕೊಯಮತ್ತೂರು : ಮನೆ ಒಡೆಯುವ ಕಳ್ಳರು ಮತ್ತು ಅವರು ತಪ್ಪಿಸಿಕೊಳ್ಳುವ ಕಾರ್ಯಾಚರಣೆ ವಿಧಾನ ಪತ್ತೆಹಚ್ಚಲು ಮತ್ತು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವರದಿಯಾಗಿರುವ ಕಳ್ಳತನ ಪ್ರಕರಣಗಳಿಗೂ ಒಳ ಉಡುಪು ಧರಿಸಿದ ಕಳ್ಳರ ಗುಂಪಿಗೂ ಇರುವ ಸಂಬಂಧ ಪತ್ತೆಹಚ್ಚಲು ಸಿಂಗಾನಲ್ಲೂರು ಪೊಲೀಸರು ಭಾನುವಾರ ಅಧ್ಯಯನ ನಡೆಸಿದ್ದಾರೆ.

    ಇದನ್ನೂ ಓದಿ:  ಕೊಲೆಯ ಹಿಂದಿತ್ತು ಸೇಡಿನ ಹೊಗೆ: ರಾಖಿ ಕಟ್ಟಿದ ಮರುಕ್ಷಣವೇ ಆಭರಣ ಕದ್ದ ದುರುಳರು ಆಕೆಯನ್ನೂ ಬಿಡಲಿಲ್ಲ

    “ಕಳ್ಳರು ತಪ್ಪಿಸಿಕೊಳ್ಳುವ ಮಾರ್ಗ ಹಾಗೂ ವಿಧಾನ ಕಂಡುಹಿಡಿಯಲು ಅಪರಾಧದ ಸ್ಥಳಗಳಲ್ಲಿ ಡ್ರೋನ್ ಬಳಸಿ ಅಧ್ಯಯನವನ್ನು ನಡೆಸಿತು. ಅವರು 10 ಕ್ಕೂ ಹೆಚ್ಚು ಮನೆಗಳನ್ನು ಒಡೆಯಲು ಪ್ರಯತ್ನಿಸಿದ್ದರು ಮತ್ತು ಎಂಟು ಮನೆಗಳ ಬಾಗಿಲು ಮುರಿದರು. ಅವರು ರೈಲ್ವೆ ಹಳಿ ಬಳಸಿದ್ದರಿಂದ ಅವರು ಸುಲಭವಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದ್ದರಿಂದ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ನಾವು ಅವರ ತಪ್ಪಿಸಿಕೊಳ್ಳುವ ಕೌಶಲವನ್ನು ವಿಧಾನವನ್ನು ಅಧ್ಯಯನ ಮಾಡಬೇಕಾಗಿದೆ ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಇ.ಎಸ್. ಉಮಾ ಹೇಳಿದರು.

    ಇದನ್ನೂ ಓದಿ : ಅತ್ಯಂತ ಕ್ರೂರವಾಗಿ ಲಾಕಪ್‌ ಡೆತ್‌ ಮಾಡಿದ್ದ ಆರೋಪಿ ಪೊಲೀಸ್‌ ಕರೊನಾಕ್ಕೆ ಬಲಿ

    ಈ ಅಧ್ಯಯನದ ಫಲಿತಾಂಶದಿಂದ ಪೊಲೀಸರಿಗೆ ಗಸ್ತು ವ್ಯವಸ್ಥೆಯನ್ನು ಬಲಪಡಿಸಲು ಸಹಾಯವಾಗುತ್ತದೆ ಮತ್ತು ರೈಲ್ವೆ ಹಳಿಗಳಿಗೆ ಸಂಪರ್ಕ ಹೊಂದಿರುವ ವಸತಿ ಸ್ಥಳಗಳಲ್ಲಿ ರಾತ್ರಿ ಗಸ್ತು ತಿರುಗುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

    ಏತನ್ಮಧ್ಯೆ, ನೀಲಗಿರಿ ಜಿಲ್ಲೆಯ ಪಂಥಲೂರು ಬಳಿಯ ಎರುಮಾಡ್​​​ನ ಶಂಕಿತ ಬಿ ವೀರಮಣಿ ಎಂಬಾತನನ್ನು ವಿಚಾರಣೆಗೊಳಪಡಿಸಲು ನಗರ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದರು. ಆ ಶಂಕಿತ ನಿಗೂಢ ಗುಂಪಿನವನಾಗಿದ್ದಾನೆ ಎನ್ನಲಾಗಿದೆ. ಆತನನ್ನು ಶುಕ್ರವಾರ ರಾತ್ರಿ ಸಿಂಗನಲ್ಲೂರ್ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ:  ಸ್ವಾವಲಂಬಿ ಭಾರತಕ್ಕೆ ಮಹತ್ಸಾಧನೆ; ದಾಖಲೆ ಅವಧಿಯಲ್ಲಿ ಸಾಗರದಾಳದಲ್ಲಿ ಇಂಟರ್​ನೆಟ್​ ಕೇಬಲ್​ ಅಳವಡಿಸಿದ ಬಿಎಸ್ಸೆನೆಲ್​

    ಆತನಿಂದ ಆಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಶಂಕಿತ ವೀರಮಣಿ ಮತ್ತು ಇತರ ಆರು ಮಂದಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

    ಕೊಲೆಯ ಹಿಂದಿತ್ತು ಸೇಡಿನ ಹೊಗೆ: ರಾಖಿ ಕಟ್ಟಿದ ಮರುಕ್ಷಣವೇ ಆಭರಣ ಕದ್ದ ದುರುಳರು ಆಕೆಯನ್ನೂ ಬಿಡಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts