More

    ಪೊಲೀಸ್ ಅಧಿಕಾರಿ ತುಳಜಪ್ಪ ಸುಲ್ಫಿಗೆ ಸಿಬಿಐ ವಿಚಾರಣೆಯ ಬಿಸಿ

    ಧಾರವಾಡ: ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಅವರ ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಶುಕ್ರವಾರ ಮತ್ತೆ ಕೆಲವರನ್ನು ವಿಚಾರಣೆಗೊಳಪಡಿಸಿದರು. ಇತ್ತೀಚೆಗೆ ಮಧ್ಯಂತರ ಆರೋಪಪಟ್ಟಿ ಸಲ್ಲಿಸಿದ್ದ ಸಿಬಿಐ ಅಧಿಕಾರಿಗಳ ತಂಡ, ಕೆಲ ದಿನ ತನಿಖೆಗೆ ಬಿಡುವು ನೀಡಿದ್ದರಿಂದ ನಗರದಲ್ಲಿ ಕಾಣಿಸಿಕೊಂಡಿರಲಿಲ್ಲ.

    ಈ ಹಿಂದೆ ಪ್ರಕರಣದ ಪೊಲೀಸ್ ತನಿಖೆ ನಡೆದಿದ್ದಾಗ, ಬೆಳಗಾವಿ ಎಸ್‌ಪಿ ಕಾರ್ಯಾಲಯದಲ್ಲಿ ಡಿವೈಎಸ್‌ಪಿ ಆಗಿದ್ದ ತುಳಜಪ್ಪ ಸುಲ್ಫಿ, ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ರಾಜಿ ಸಂಧಾನಕ್ಕೆ ಯತ್ನಿಸಿದ್ದ ಆರೋಪ ಕೇಳಿಬಂದಿತ್ತು. ಯೋಗೀಶಗೌಡ ಸಹೋದರ ಗುರುನಾಥಗೌಡರ ಗೋವನಕೊಪ್ಪ ಗ್ರಾಮದ ಮನೆಗೆ ಸುಲ್ಫಿ ಭೇಟಿ ನೀಡಿ ಮಾತನಾಡಿದ್ದ ಸಂದರ್ಭ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

    ಇದನ್ನೂ ಓದಿ: ಕ್ರಿಕೆಟ್ ದಿಗ್ಗಜರನ್ನೂ ಕಾಡುತ್ತಿರುವ ಕರೊನಾ; ಈಗ ಶಾಹಿದ್ ಅಫ್ರಿದಿ ಸರದಿ

    ಡಿವೈಎಸ್‌ಪಿ ಸುಲ್ಫಿಗೆ ಸಿಬಿಐ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದರು. ಅದರಂತೆ ಶನಿವಾರ ಇಲ್ಲಿನ ಉಪನಗರ ಠಾಣೆಗೆ ಬಂದ ಸುಲ್ಫಿ, ವಿಚಾರಣೆಗೆ ಹಾಜರಾದರು. ಇದೇ ವೇಳೆ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಎನ್ನಲಾಗಿರುವ ಕಾಂಗ್ರೆಸ್ ಮುಖಂಡ ಮನೋಜ ಕರ್ಜಗಿ ಅವರನ್ನೂ ಸಿಬಿಐ ಅಧಿಕಾರಿಗಳು ಉಪನಗರ ಠಾಣೆಗೆ ಕರೆಸಿಕೊಂಡು ವಿಚಾರಣೆಗೊಳಪಡಿಸಿದರು.

    ನಿವೃತ್ತ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಇಬ್ಬರು ಡಿಸಿಪಿ, ಎಸಿಪಿ ವಾಸುದೇವ, ಡಿವೈಎಸ್‌ಪಿ ಚಂದ್ರಶೇಖರ ಹಾಗೂ ಉಪನಗರ ಠಾಣೆಯ ಪೊಲೀಸ್ ಸಿಬ್ಬಂದಿ, ಜಿ.ಪಂ. ಹಾಲಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿ ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ. ಸಿಬಿಐ ತಂಡವು ಇನ್ನೂ ಹಲವರಿಗೆ ನೋಟಿಸ್ ಕಳುಹಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ತನಿಖೆ ಮುಂದುವರಿಸಲಿದೆ.

    ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕರ್ನಾಟಕ ಸಿದ್ಧಪಡಿಸಿದ ಬಲಶಾಲಿ ಅಸ್ತ್ರಗಳಿವು

    ಬಸವಪ್ಪನ ಆಶೀರ್ವಾದ ಪಡೆದ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts