ಲಿಂಗಸುಗೂರು: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಗೈದ ಪಾತಕಿಗೆ ಗಲ್ಲುಶಿಕ್ಷೆ ವಿಧಿಸಲು ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಅವಿನಾಶ ಶಿಂಧೆಗೆ ಶನಿವಾರ ಮನವಿ ಸಲ್ಲಿಸಿದರು.
ನೇಹಾ ಹಿರೇಮಠಳನ್ನು ಲವ್ ಜಿಹಾದ್ ಕಾರಣಕ್ಕಾಗಿ ಭೀಕರವಾಗಿ ಹತ್ಯೆ ಗೈದಿರುವುದು ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಪ್ರೀತಿ, ಪ್ರೇಮ ನೆಪದಲ್ಲಿ ಫಯಾಜ್ ಎಂಬ ದುಷ್ಕರ್ಮಿ ಲವ್ ಜಿಹಾದ್ ಕೃತ್ಯಕ್ಕೆ ಮುಂದಾಗಿ ಕಾಲೇಜಿನಲ್ಲಿ ಚಾಕುವಿನಿಂದ ಒಂಬತ್ತು ಬಾರಿ ಇರಿದು ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಘಟನೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಆತಂಕ್ಕೀಡಾಗಿದ್ದು, ದೇಶದ ಕಾನೂನಿನ ಮೇಲೆ ಗೌರವ, ಭಯವಿಲ್ಲದಂತಗಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾಸಭಾ ತಾಲೂಕಾಧ್ಯಕ್ಷ ಶರಣಪ್ಪ ಮೇಟಿ, ಪ್ರಮುಖರಾದ ಭೂಪನಗೌಡ ಪಾಟೀಲ್, ಮಲ್ಲಣ್ಣ ವಾರದ, ಪಾಮಯ್ಯ ಮುರಾರಿ, ಗುಂಡಯ್ಯ ಸೊಪ್ಪಿಮಠ, ಬಸನಗೌಡ ಮೇಟಿ, ಪ್ರಭುಸ್ವಾಮಿ ಅತ್ತನೂರು, ಶಿವಾನಂದ ಐದನಾಳ, ಜಗದೀಶಯ್ಯ, ವಿರುಪಾಕ್ಷಪ್ಪ ದೇವದುರ್ಗ, ಶಿವರಡ್ಡಿ, ರಾಜಶೇಖರ ಪೇರಿ ಸೇರಿದಂತೆ ಇತರರು ಇದ್ದರು.