More

    ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕರ್ನಾಟಕ ಸಿದ್ಧಪಡಿಸಿದ ಬಲಶಾಲಿ ಅಸ್ತ್ರಗಳಿವು

    ಬೆಂಗಳೂರು: ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸಲು ಹೆಚ್ಚು ಸಮರ್ಥವಾಗಿದೆ.
    ತಂತ್ರಜ್ಞಾನದ ಸೂಕ್ತ ಬಳಕೆಯಿಂದ ಇದೆಲ್ಲ ಸಾಧ್ಯವಾಗಿದೆ ಎನ್ನಬಹುದು.
    ಕರೊನಾ ರೋಗಿಗಳನ್ನು ಪತ್ತೆಹಚ್ಚಲು ಮತ್ತು ಕ್ವಾರಂಟೈನ್ ನಿರ್ವಹಿಸುವಲ್ಲಿ ಮೇಲ್ವಿಚಾರಣೆ ಮಾಡುವಲ್ಲಿ ತಂತ್ರಜ್ಞಾನ ಒಂದು ಪ್ರಮುಖ ಅಂಶವಾಗಿದೆ. ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಮತ್ತು ಅವರ ತಂಡದ ಕರ್ನಾಟಕ ಕೋವಿಡ್ ವಾರ್ ರೂಮ್ ಈ ಕೆಳಗಿನ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದೆ.

    ಇದನ್ನೂ ಓದಿ: ಕ್ರಿಕೆಟ್ ದಿಗ್ಗಜರನ್ನೂ ಕಾಡುತ್ತಿರುವ ಕರೊನಾ; ಈಗ ಶಾಹಿದ್ ಅಫ್ರಿದಿ ಸರದಿ

    ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್: ಈ ಮೊಬೈಲ್ ಅಪ್ಲಿಕೇಶನ್ ಕೋವಿಡ್ ರೋಗಿಯ ಎಲ್ಲ ಸಂಪರ್ಕಗಳನ್ನು ದಾಖಲಿಸುತ್ತದೆ ಮತ್ತು ಅವರನ್ನು ಗುರುತಿಸಲು, ಕ್ವಾರಂಟೈನ್​​​ಗೆ ಒಳಪಡಿಸಲು ಸರ್ಕಾರವನ್ನು ಶಕ್ತಗೊಳಿಸುತ್ತದೆ. ಇದು ವೆಬ್ ಆವೃತ್ತಿಯನ್ನು ಸಹ ಹೊಂದಿದೆ. ದೇಶದ ಏಕೈಕ ಆಪ್ ಆಗಿರುವ ಇದನ್ನು ಈಗ ಹರಿಯಾಣ ಸರ್ಕಾರದಿಂದ ಅನುಸರಿಸುತ್ತಿದೆ.

    ಕ್ವಾರಂಟೈನ್ ವಾಚ್ ಆ್ಯಪ್ : ಎಲ್ಲ ಸಂಪರ್ಕಿತರು, ಅಂತಾರಾಜ್ಯ ಪ್ರಯಾಣಿಕರನ್ನು 14 ದಿನ ಕ್ವಾರಂಟೈನ್​​ನಲ್ಲಿಡಲಾಗುತ್ತದೆ. ಈ ಮೊಬೈಲ್ ಅಪ್ಲಿಕೇಶನ್ ಕ್ವಾರಂಟೈನ್ ಜಾರಿಗೊಳಿಸಲು ಸಹಾಯ ಮಾಡುತ್ತದೆ ಮತ್ತು ಅದನ್ನೆಲ್ಲ ವೀಕ್ಷಿಸುತ್ತದೆ.

    ಇದನ್ನೂ ಓದಿ: ಆಸ್ಪತ್ರೆಗೆ ಸೇರಿಸಿಕೊಳ್ಳದ ವೈದ್ಯರು; ಚಿಕಿತ್ಸೆ ಸಿಗದೆ ಯುವತಿ ಸಾವು

    ಯಾತ್ರಿ ವೆಬ್ ಆ್ಯಪ್ : ಬೇರೆ ದೇಶಗಳಿಂದ ಬಂದ ಎಲ್ಲ ಪ್ರಯಾಣಿಕರ ದಾಖಲೆಯನ್ನಿಡುತ್ತದೆ ಮತ್ತು ಅವರ ಮೇಲೆ ನಿಗಾ ಇಡಲು ಕ್ವಾರಂಟೈನ್ ವಾಚ್ ಆ್ಯಪ್​​ಗೆ ಎಲ್ಲ ಮಾಹಿತಿಯನ್ನು ಕಳುಹಿಸುತ್ತದೆ.
    ಹೆಲ್ತ್ ವಾಚ್ ಆ್ಯಪ್: ಇದು 1.6 ಕೋಟಿ ಕುಟುಂಬಗಳ ಮನೆ ಆರೋಗ್ಯ ಸಮೀಕ್ಷೆಯನ್ನು ದಾಖಲಿಸಿದೆ. ಇದನ್ನು ಕೆಎಸ್​ಆರ್​ಎಸ್​ಎಸಿ ಅಭಿವೃದ್ಧಿಪಡಿಸಿದೆ. ಸೋಂಕಿಗೆ ಒಳಗಾಗುವ ಸಂಭಾವ್ಯ ಹೆಚ್ಚಾಗಿರುವ ಕುಟುಂಬಗಳನ್ನು ಗುರುತಿಸಲಾಗಿದೆ ಮತ್ತು ಆ ಕುರಿತು ಹೆಚ್ಚಿನ ಕ್ರಮ ಕೈಗೊಳ್ಳಲು ಮಾಹಿತಿಯನ್ನು ಆಪ್ತಮಿತ್ರ ಮತ್ತು ಆರೋಗ್ಯ ಇಲಾಖೆಗೆ ರವಾನಿಸುತ್ತದೆ.
    ಕ್ರಿಟಿಕಲ್ ಪೇಷಂಟ್ ಟ್ರ್ಯಾಕಿಂಗ್ ಸಿಸ್ಟಮ್: ಕರ್ನಾಟಕದಾದ್ಯಂತ ಪ್ರತಿನಿತ್ಯವೂ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಪತ್ತೆಹಚ್ಚಲು ಕರ್ನಾಟಕ ಆರೋಗ್ಯ ಇಲಾಖೆಗೆ ಸಹಾಯವಾಗುವ ವೆಬ್ ಅಪ್ಲಿಕೇಷನ್ ಇದಾಗಿದೆ.

    ಇದನ್ನೂ ಓದಿ: ‘ನೆಟ್ಟಿ’ಗರ ದೃಷ್ಟಿಯಲ್ಲಿ ಇವರು ‘ಸೂಪರ್​​ ದಾದಿ’; 84ರ ಹರೆಯದಲ್ಲೂ ಈ ಅಜ್ಜಿ ಮಾಡಿದ್ದೇನು ಗೊತ್ತಾ?

    ಡೈಲಿ ಅನಾಲಿಟಿಕ್ಸ್ ಆ್ಯಂಡ್ ರಿಪೋರ್ಟ್ಸ್ : ಮುಂದಿನ ಕ್ರಮ ಕೈಗೊಳ್ಳಲು ಪ್ರತಿ ದಿನದ ಸಮೀಕ್ಷೆ, ವರದಿ ಮತ್ತು ಸ್ಥಿತಿಗತಯನ್ನು ಒದಗಿಸುವ ಆ್ಯಪ್ ಇದಾಗಿದೆ.

    ಡೈಲಿ ರೈಲ್ ಆ್ಯಂಡ್ ಏರ್ ಪ್ಯಾಸೆಂಜರ್ ಅರೈವಲ್ ಟ್ರ್ಯಾಕಿಂಗ್: ಸರ್ಕಾರದ ಸೇವಾಸಿಂಧು ಸಾಫ್ಟ್‌ವೇರ್ ಜೊತೆಗೆ, ಸ್ಟೇಟ್ ವಾರ್​​ ರೂಮ್ ಪ್ರತಿಯೊಂದು ರೈಲು ಹಾಗೂ ಪ್ರಯಾಣಿಕರ ಆಗಮನವನ್ನು ಪತ್ತೆ ಮಾಡುತ್ತದೆ ಮತ್ತು ಮಾಹಿತಿಯನ್ನು ಕ್ವಾರಂಟೈನ್ ವಾಚ್ ಅಪ್ಲಿಕೇಶನ್‌ಗೆ ಕಳುಹಿಸುತ್ತದೆ ಮತ್ತು ಅವರ ಕ್ವಾರಂಟೈನ್ ಪತ್ತೆ ಮಾಡುತ್ತದೆ. ಕರೋನಾ ವಾಚ್ ಅಪ್ಲಿಕೇಶನ್: ಮಾಹಿತಿ ನೀಡುವ ಅಪ್ಲಿಕೇಶನ್ ಇದಾಗಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಸೇತು ಅಪ್ಲಿಕೇಶನ್‌ನ ಪೂರಕ ಆ್ಯಪ್ ಇದಾಗಿದೆ. ಕರ್ನಾಟಕ ಈ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ ಏಕೈಕ ರಾಜ್ಯವಾಗಿದೆ.

    ರೈತರು ಬೇಕಾಗಿದ್ದಾರಂತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts