More

    ಇನ್ನೂ ನಾಲ್ಕೇ ದಿನದಲ್ಲಿ ಹಸೆಮಣೆ ಏರಬೇಕಿದ್ದ ಕರೊನಾ ವಾರಿಯರ್ ದುರಂತ ಸಾವು

    ಚಿಕ್ಕೋಡಿ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಪೇದೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದ ಬಳಿ ನಿನ್ನೆ (ಗುರುವಾರ) ರಾತ್ರಿ ನಡೆದಿದೆ.

    ಇದನ್ನೂ ಓದಿ: ವಿದೇಶಿ ಪ್ರಜೆಗೆ ಮನೆ ಬಾಡಿಗೆ ನೀಡಿದ್ದ ಮಾಲೀಕನ ವಿರುದ್ಧ ಕೇಸ್

    ಚಿಕ್ಕೋಡಿ ಪೊಲೀಸ್ ಠಾಣೆಯ ಪೇದೆ ರಾಮು ನಾಯಕ್ ಮೃತ ದುರ್ದೈವಿ. ರಾಮು ಅವರಿಗೆ ಇದೇ ತಿಂಗಳ 19ಕ್ಕೆ ಮದುವೆ ನಿಶ್ಚಯವಾಗಿತ್ತು. ಆದರೆ, ವಿಧಿಯಾಟದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಕರ್ತವ್ಯದ ಮೇರೆಗೆ ಚಿಕ್ಕೋಡಿಯಿಂದ ಕಬ್ಬೂರು ಉಪಠಾಣೆಗೆ ಹೊರಟಿದ್ದ ವೇಳೆ ನಾಗರಮುನ್ನೋಳಿ ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.

    ಇದನ್ನೂ ಓದಿ: ನಗರಕ್ಕೆ ಗುಡ್​ಬೈ ಹಳ್ಳಿಕಡೆಗೆ ಜೈ: ಗಗನಮುಖಿಯಾಗಿದ್ದ ಮನೆ ಬಾಡಿಗೆಯಲ್ಲಿ ಇಳಿಕೆ

    ಸಾಕಷ್ಟು ರಕ್ತಸ್ರಾವವಾಗಿ ರಾಮು ಅವರು ಘಟನಾ ಸ್ಥಳದಲ್ಲೇ‌ ಉಸಿರು ಚೆಲ್ಲಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)

    ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ವಿಧಿವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts