More

    ನಗರಕ್ಕೆ ಗುಡ್​ಬೈ ಹಳ್ಳಿಕಡೆಗೆ ಜೈ: ಗಗನಮುಖಿಯಾಗಿದ್ದ ಮನೆ ಬಾಡಿಗೆಯಲ್ಲಿ ಇಳಿಕೆ

    ಬೆಂಗಳೂರು: ರಾಜಧಾನಿಯಲ್ಲೀಗ ಉದ್ಯೋಗ ಕಳೆದುಕೊಂಡವರದ್ದೇ ಮಾತು. ಕೈಯಲ್ಲಿ ಕೆಲಸವೂ ಇಲ್ಲದೆ ಮನೆ ಖಾಲಿ ಮಾಡಿಕೊಂಡು ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದೆಡೆ, ಗಗನಮುಖಿಯಾಗಿದ್ದ ಮನೆ ಬಾಡಿಗೆ ಈಗ ಇಳಿಮುಖವಾಗುತ್ತಿದೆ.

    ಕರೊನಾ ಲಾಕ್​ಡೌನ್ ಘೋಷಣೆ ಸಂದರ್ಭದಲ್ಲಿಯೇ ಬಹಳಷ್ಟು ರೂಂಗಳು ಖಾಲಿಯಾಗಿದ್ದ ವರದಿಗಳು ಬಂದಿದ್ದವು. ಆದರೆ, ಮನೆಗಳು ದೊಡ್ಡ ಪ್ರಮಾಣದಲ್ಲಿ ಖಾಲಿಯಾಗಿರುವುದು ಅಚ್ಚರಿ ತಂದಿದೆ.

    ಇದನ್ನೂ ಓದಿ: ರೇಪಿಸ್ಟ್​ ತಂದೆಯನ್ನು ಬರ್ಬರ ಹತ್ಯೆಗೈದಿದ್ದ ಮೂವರು ಸಹೋದರಿಯರ ಬೆನ್ನಿಗೆ ನಿಂತ ಕೋರ್ಟ್​, ತನಿಖಾ ಸಮಿತಿ!

    ಪಾಸ್ ಪಡೆದು ತಮ್ಮ ಊರುಗಳಿಗೆ ತೆರಳಬಹುದು ಎನ್ನುವ ಅನುಮತಿ ಸಿಕ್ಕ ಮೇಲೆ ಹೆಚ್ಚು ಮನೆಗಳು ಖಾಲಿ ಯಾಗಿವೆ. ವಿಶೇಷವಾಗಿ ಉತ್ತರ ಭಾರತದ ಕಾರ್ವಿುಕರು, ತಮ್ಮ ಲಗೇಜ್ ಜತೆಯಲ್ಲಿಯೇ ತೆರಳಿದ್ದಾರೆ. ಇನ್ನು ಕೆಲವರು ಮನೆಯನ್ನು ಖಾಲಿ ಮಾಡಿ ವಸ್ತುಗಳನ್ನು ಬೇರೆ ಕಡೆ ಇರಿಸಿ ಊರುಗಳಿಗೆ ತೆರಳಿದ್ದಾರೆ.

    ಗುಂಪಾಗಿ ಬೆಂಗಳೂರಿಗೆ ಬಂದಿದ್ದ ಕಾರ್ವಿುಕರು, ತಮ್ಮ ಮನೆ ಮತ್ತು ರೂಂಗಳನ್ನು ಖಾಲಿ ಮಾಡಿ, ತಮ್ಮನ್ನು ಕರೆದುಕೊಂಡು ಬಂದಿದ್ದ ಪ್ರಮುಖ ವ್ಯಕ್ತಿ ತೋರಿಸುವ ಕಡೆಯಲ್ಲಿ ಲಗೇಜ್ ಇಟ್ಟು ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ಹೋಗುವಾಗಲೇ ಯಾವುದಕ್ಕೂ ಇರಲಿ ಎಂದು ಒಂದಷ್ಟು ಲಗೇಜ್ ಕೊಂಡೊಯ್ದಿದ್ದಾರೆ.

    ಇದನ್ನೂ ಓದಿ: ಈಜುಕೊಳದಲ್ಲಿ ಮೋಜು ಮಾಡುತ್ತಿದ್ದ ಬ್ಯೂಟಿ ಕ್ವೀನ್-​ ಸ್ನೇಹಿತ ಸಮೇತ ಸೀದಾ ಕ್ವಾರಂಟೈನ್​ಗೆ ಒಯ್ದ ಪೊಲೀಸರು!

    ನಿತ್ಯವೂ ಮನೆ ಖಾಲಿ ಮಾಡಿಕೊಂಡು ಲಗೇಜ್ ಆಟೋ ಮತ್ತು ಮಿನಿ ಲಾರಿಗಳಲ್ಲಿ ಸಾಮಾನು ತುಂಬಿಕೊಂಡು ಊರುಗಳತ್ತ ಮುಖ ಮಾಡಿರುವ ದೃಶ್ಯಗಳು ಎಲ್ಲೆಡೆ ಕಂಡು ಬರುತ್ತಿವೆ. ಈಗಾಗಲೆ ಉದ್ಯೋಗ ಕಳೆದುಕೊಂಡಿರುವ ಉದ್ಯೋಗಿಗಳು ಕೂಡ ಊರಿನತ್ತ ಮುಖ ಮಾಡಿದ್ದಾರೆ. ಸಣ್ಣ ಪುಟ್ಟ ಕೆಲಸಗಳನ್ನು ಅವಲಂಬಿಸಿ ಬೆಂಗಳೂರಿನಲ್ಲಿ ಉಸಿರು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಶ್ರಮಿಕ ವರ್ಗದ ಬಹಳಷ್ಟು ಜನರು ಗ್ರಾಮಾಂತರ ಪ್ರದೇಶ ದಲ್ಲಿಯೇ ಉದ್ಯೋಗ ಹುಡುಕಿಕೊಳ್ಳುವ ತೀರ್ವನದೊಂದಿಗೆ ಮನೆ ಖಾಲಿ ಮಾಡುತ್ತಿದ್ದಾರೆ.

    ಲಾಕ್​ಡೌನ್ ಆಗಿದ್ದಾಗ ಬೀಗ ಹಾಕಿಕೊಂಡು ಊರುಗಳಿಗೆ ತೆರಳಿದ್ದವರು ಈಗ ಬೆಂಗಳೂರಿಗೆ ವಾಪಸಾಗಿ ಮನೆ ಖಾಲಿ ಮಾಡಿ, ವಾಹನಗಳಲ್ಲಿ ಊರುಗಳಿಗೆ ತೆರಳುತ್ತಿದ್ದಾರೆ.

    ಕರೊನಾ ಸಮಸ್ಯೆ ಸದ್ಯಕ್ಕೆ ಮುಗಿಯು ವುದಿಲ್ಲ. ವರ್ಷದ ತನಕ ಪರಿಸ್ಥಿತಿ ಹೀಗೆಯೇ ಇರಬಹುದು ಎನ್ನುವ ವರದಿಗಳೇ ಬರುತ್ತಿರುವ ಹಿನ್ನೆಲೆಯಲ್ಲಿ, ಇನ್ನು ಇಲ್ಲಿದ್ದರೆ, ಭವಿಷ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿರುವ ಬಹಳಷ್ಟು ಜನ, ಬೆಂಗಳೂರಿಗೆ ಗುಡ್ ಬೈ ಹೇಳಿ, ಹಳ್ಳಿಗಳಿಗೆ ಜೈ ಅನ್ನುತ್ತಿದ್ದಾರೆ. ಅಚ್ಚರಿ ಅಂದರೆ, ಯುವ ಜನರು ಬೆಂಗಳೂರು ತೊರೆದು ತಮ್ಮ ಗ್ರಾಮಗಳತ್ತ ಮುಖ ಮಾಡಿ, ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ.

    ಇದನ್ನೂ ಓದಿ: ಶಾಪಿಂಗ್​ನಿಂದ ಪತ್ನಿ ತಂದ ವಸ್ತುವನ್ನು ನೋಡಿ ತಬ್ಬಿಬ್ಬಾದ ಪತಿ…ಆತನೀಗ ಅಸಂತೃಪ್ತ…!

    | ಶಿವಾನಂದ ತಗಡೂರು

    ಸ್ತ್ರೀಯರ ನೋವಿಗೆ ಕಿವಿಯಾಗಿದ್ದ ಸಾಂತ್ವನ ಕೇಂದ್ರಗಳಿಗೆ ಬೀಗ: ಮಾತೃಶ್ರೀ ಯೋಜನೆ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts