More

    ಬಸ್​ನಿಲ್ದಾಣದಲ್ಲಿ ಸಿಕ್ಕಿದ್ದ ನಾಲ್ಕು ವಾರಸ್ದಾರರಿಲ್ಲದ ಬ್ಯಾಗ್​ಗಳನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಪರಿಶೀಲಿಸಿದ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ?

    ಚಿಕ್ಕಬಳ್ಳಾಪುರ: ಇಂದು ನಗರದ ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ವಾರಸ್ದಾರರಿಲ್ಲದ ನಾಲ್ಕು ಬ್ಯಾಗ್​ಗಳು ಪತ್ತೆಯಾಗಿದ್ದವು. ಪ್ರಯಾಣಿಕರು ಕುಳಿತುಕೊಳ್ಳುವ ಕಲ್ಲುಬೆಂಚಿನ ಕೆಳಗೆ ಬ್ಯಾಗ್​ಗಳನ್ನು ಇಡಲಾಗಿತ್ತು. ಒಂದೊಂದು ಬ್ಯಾಗ್​ಗಳೂ ಒಂದೊಂದು ಬಣ್ಣದಲ್ಲಿ ಇದ್ದವು.

    ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಅಷ್ಟೇ ಅಲ್ಲದೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ ಬ್ಯಾಗ್​ಗಳನ್ನು ಸುತ್ತುವರಿದು ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕದಳದವರೂ ಆಗಮಿಸಿದ್ದರು. ಪರಿಶೀಲನೆ ನಡೆಸುವಷ್ಟು ಹೊತ್ತು ಬಸ್​ಗಳನ್ನೂ ನಿಲ್ದಾಣಕ್ಕೆ ಬಾರದಂತೆ ಪೊಲೀಸರು ತಡೆದಿದ್ದರು.

    ಸುಮಾರು ಒಂದು ತಾಸುಗಳ ಕಾಲ ತಪಾಸಣೆ ನಡೆಸಿದ ಪೊಲೀಸರು ಬ್ಯಾಗ್​ಗಳನ್ನು ಬಸ್​ ನಿಲ್ದಾಣದಿಂದ ದೂರದಲ್ಲಿರುವ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದರು. ಅಲ್ಲಿ ಬ್ಯಾಗ್​ ತೆರೆದು ನೋಡಿದಾಗ ನಾಲ್ಕೂ ಬ್ಯಾಗ್​ಗಳಲ್ಲೂ ಗುಟ್ಕಾ ಪ್ಯಾಕೇಟ್​ಗಳೇ ತುಂಬಿದ್ದವು.

    ಮಂಗಳೂರು ಬಾಂಬ್​ ಪತ್ತೆ ಹಿನ್ನೆಲೆಯಲ್ಲೇ ಹೀಗೆ ನಾಲ್ಕು ಬ್ಯಾಗ್​ಗಳು ಸಿಕ್ಕಿದ್ದಕ್ಕೆ ಸಹಜವಾಗಿ ಆತಂಕ ಮೂಡಿತ್ತು. ಆದರೆ ಗುಟ್ಕಾ ಪ್ಯಾಕೇಟ್​ಗಳನ್ನು ನೋಡಿ ನಿಟ್ಟುಸಿರು ಬಿಡುವಂತಾಯಿತು. ಆದರೆ ಹೀಗೆ ಬ್ಯಾಗ್​ಗಳಲ್ಲಿ ಗುಟ್ಕಾ ಪ್ಯಾಕೇಟ್​ ತಂದು ಬಿಟ್ಟು ಹೋದವರು ಯಾರು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ಬಳಿಕವಷ್ಟೇ ಬ್ಯಾಗ್​ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts