More

    ಕಾಂಗ್ರೆಸ್ ಮೈತ್ರಿಕೂಟದ ಇಂಜಿನ್ ಟೇಕಾಫ್ ಆಗಿಲ್ಲ

    ಶಿವಮೊಗ್ಗ:ಇಂಡಿ ಮೈತ್ರಿಕೂಟದ ಇಂಜಿನ್ ಟೇಕಾಫ್ ಆಗಿಲ್ಲ. ಆಗುವುದೂ ಇಲ್ಲ. 2004ರಲ್ಲಿ ಫಲಿತಾಂಶ ಪ್ರಕಟವಾದ ಬಳಿಕ ಪ್ರಧಾನಿ ಅಭ್ಯರ್ಥಿಯನ್ನು ಕಾಂಗ್ರೆಸ್ ಹುಡುಕಿತ್ತು. ಈಗಲೂ ಅದೇ ಸ್ಥಿತಿ ಎದುರಾಗಲಿದೆ. ಯಾರು ಪ್ರಧಾನಿಯಾಗಬೇಕೆಂಬ ಸ್ಪಷ್ಟತೆ ಜನರಲ್ಲಿದೆ. ವಯನಾಡ್‌ನಲ್ಲಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಜಗಳ ಮಾಡುತ್ತಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಟೀಕಿಸಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಟೀಕೆ ಮಾಡುತ್ತಿದ್ದಾರೆ. ಇಂಡಿ ಮೈತ್ರಿಕೂಟದ ಎಲ್ಲ ನಾಯಕರಿಗೂ ಅಧಿಕಾರದ ವ್ಯಾಮೋಹ ಹೆಚ್ಚಿದೆ. ಕೆಲ ನಾಯಕರು ಮತದಾರರ ಬುದ್ಧಿವಂತಿಕೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.
    ಗೆದ್ದಿದ್ದು ಗ್ಯಾರಂಟಿಯಿಂದಲ್ಲ: ಕಳೆದ ವರ್ಷ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದ್ದು ಗ್ಯಾರಂಟಿಯಿಂದಲ್ಲ. ರಾಜ್ಯದಲ್ಲಿದ್ದ ಆಡಳಿತ ವಿರೋಧ ಅಲೆಯಿಂದ. ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವುದು ಇಲ್ಲಿನ ಪರಿಪಾಠ. ಕಾಗೆ ಕೂತು, ಕೊಂಬೆ ಮುರಿಯುವುದು ಏಕಕಾಲದಲ್ಲಿ ನಡೆದಂತೆ ಗ್ಯಾರಂಟಿ ಪಾತ್ರವಹಿಸಿದೆ ಅಷ್ಟೇ ಎಂದು ಅಣ್ಣಾಮಲೈ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts