More

    ಬಿಜೆಪಿ ಅಭ್ಯರ್ಥಿ ಬಿವೈಆರ್ ಸಿಟಿ ರೌಂಡ್ಸ್

    ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಗುರುವಾರ ಜಿಲ್ಲಾ ನ್ಯಾಯಾಲಯ, ಸೋಮಿನಕೊಪ್ಪ ಶಾರದಮ್ಮ ಬಡಾವಣೆ, ಹಳೇ ಬೊಮ್ಮನಕಟ್ಟೆ, ಆಶ್ರಯ ಬಡಾವಣೆ, ನವುಲೆ ಆಂಜನೇಯ ದೇವಸ್ಥಾನದ ಸಮುದಾಯ ಭವನ, ಗಾಂಧಿಬಜಾರ್ ಕೆಳಭಾಗ, ಕುಂಬಾರ ಗುಂಡಿ, ಗೋಪಾಳ ವೃತ್ತದಲ್ಲಿ ಸಾರ್ವಜನಿಕರ ಸಭೆ ನಡೆಸಿ ಮತಯಾಚಿಸಿದರು.

    ನಗರದ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಿ ವಕೀಲರ ಬಳಿ ಮತಯಾಚಿಸಿದ ಅವರು, ವಕೀಲರ ಸ್ಪಂದನೆಯಿಂದ ನನ್ನ ಗೆಲುವಿನ ವಿಶ್ವಾಸ ಇನ್ನೂ ಹೆಚ್ಚಾಗಿದೆ. ರಾಷ್ಟ್ರೀಯ ಮಟ್ಟದ ವಿಚಾರಗಳು ಬಂದಾಗ ವಕೀಲರು ತಮ್ಮದೇ ಆದ ರೀತಿ ಶಕ್ತಿ ಮೀರಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
    ವಕೀಲರನ್ನು ಭೇಟಿ ಮಾಡಿದ ಸಂದರ್ಭ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಅದೆಲ್ಲವನ್ನೂ ಪರಿಗಣಿಸಲಾಗುವುದು. ಶಿವಮೊಗ್ಗ ನಗರವನ್ನು ಮಾದರಿಯಾಗಿಸಲು ಹಾಗೂ ಉತ್ತಮ ನ್ಯಾಯಾಲಯ ಕ್ಯಾಂಪಸ್ ನಿರ್ಮಾನ ಬಗ್ಗೆಯೂ ವಕೀಲರು ಮನವಿ ಮಾಡಿದ್ದಾರೆ ಎಂದರು. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಸಚಿವರಿಗೆ ನಿರ್ಮಾಣ ಮಾಡಿದಂತಹ 60 ವಸತಿ ಗೃಹಗಳನ್ನು ನ್ಯಾಯಾಧೀಶರ ಕೋರಿಕೆ ಮೇರೆಗೆ ನ್ಯಾಯಾಂಗ ಇಲಾಖೆಗೆ ಯಥಾವತ್ತಾಗಿ ಬಿಟ್ಟುಕೊಟ್ಟ ಘಟನೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
    ದೇಶದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನವಾಗಿದೆ. ಇದಕ್ಕೆ ಬಿಸಿಲಿನ ತಾಪಮಾನವೂ ಕಾರಣವಾಗಿರಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ವಾರದಲ್ಲಿ 7 ದಿನವೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕಾರ್ಯವೈಖರಿಗಾಗಿ ಮತದಾರರು ತಮ್ಮ ಒಂದು ಮತವನ್ನು ನೀಡುವ ಮೂಲಕ ಬೆಂಬಲ ಸೂಚಿಸಬೇಕು ಎಂದು ಕೋರಿದರು.
    ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್, ಹಿರಿಯ ವಕೀಲ ಬಸಪ್ಪ ಗೌಡ, ವಿದ್ಯಾರಾಣಿ, ಮುಖಂಡರಾದ ಎಸ್.ದತ್ತಾತ್ರಿ, ಬಳ್ಳೆಕೆರೆ ಸಂತೋಷ್, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts