More

    ಸಹಚರರ ಸಾಕಲು ಡ್ರಗ್ಸ್ ದಂಧೆಗಿಳಿದ ರೌಡಿ! ಮಲಯಾಳಿ ಮಧು ಗ್ಯಾಂಗ್​ನ್ನು ಸೆರೆ ಹಿಡಿದ ಪೊಲೀಸರು

    ಬೆಂಗಳೂರು: ಏರಿಯಾದಲ್ಲಿ ಹಿಡಿತ ಸಾಧಿಸಲು ಮತ್ತು ಸಹಚರರನ್ನು ಸಾಕಲು ಮಾದಕ ದ್ರವ್ಯ ದಂಧೆಗೆ ಇಳಿದಿದ್ದ ರೌಡಿ ಮಲಯಾಳಿ ಮಧು ಗ್ಯಾಂಗ್‌ನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಕುಮಾರಸ್ವಾಮಿ ಲೇಔಟ್‌ನ ಮಧುಸೂದನ್ ಅಲಿಯಾಸ್ ಮಲಯಾಳಿ ಮಧು, ಕೆ.ಬಿ. ಲಿಖಿನ್, ಅಯ್ಯಪ್ಪ, ಕಾರಿಯಪ್ಪ, ಸಾಗರ್, ಸುಮಂತ್, ಕಿರಣ್‌ಕುಮಾರ್, ಮುನಿಕೃಷ್ಣ, ಶಿವರಾಜ್, ಜಬಿವುಲ್ಲಾ, ಪ್ರಮೋದ, ಮಂಜುನಾಥ ಮತ್ತು ಸ್ಟಾಲಿನ್ ಬಂಧಿತರು. ಆರೋಪಿಗಳಿಂದ 21 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಗರದಲ್ಲಿ ರೌಡಿಗಳು ಮತ್ತು ರೌಡಿ ಗ್ಯಾಂಗ್ ಮೇಲೆ ಪೊಲೀಸರು ನಿಗಾ ವಹಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. ಇದರಿಂದಾಗಿ ಹೆದರಿದ ರೌಡಿ ಮಲಯಾಳಿ ಮಧು, ಸುಲಿಗೆ, ದರೋಡೆ, ಬೆದರಿಕೆವೊಡ್ಡಿ ಹಣ ವಸೂಲಿ ಅಂತಹ ಕೃತ್ಯಗಳಿಂದ ದೂರನಾಗಿದ್ದ. ಬದಲಿಗೆ ಏರಿಯಾದಲ್ಲಿ ಹಿಡಿತ ಸಾಧಿಸಲು ಮತ್ತು ಸಹಚರರನ್ನು ಸಾಕಲು ಹಣ ಸಂಪಾದನೆಗೆ ಡ್ರಗ್ಸ್ ದಂಧೆ ಶುರು ಮಾಡಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡಬಹುದು, ಜತೆಗೆ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಿ ಎದುರಾಳಿ ಗ್ಯಾಂಗ್ ಮೇಲೆ ದಾಳಿ ಮಾಡಬಹುದು ಎಂದು ಪ್ಲ್ಯಾನ್ ಮಾಡಿದ್ದರು. ಒಂದು ವೇಳೆ ಪೊಲೀಸರಿಗೆ ಸೆರೆಸಿಕ್ಕರೆ ಎನ್‌ಡಿಪಿಎಸ್ ಕೇಸಿನಲ್ಲಿ ಸುಲಭವಾಗಿ ಜೈಲಿನಿಂದ ಹೊರಬರಬಹುದು ಎಂದು ಡ್ರಗ್ಸ್ ದಂಧೆ ನಡೆಸುತ್ತಿದ್ದ. ಬಂದ ಹಣದಲ್ಲಿ ಮಲಯಾಳಿ ಮಧು ಗ್ಯಾಂಗ್ ವಿಲಾಸಿ ಜೀವನ ನಡೆಸುತ್ತಿತ್ತು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಯಲಚೇನಹಳ್ಳಿ ವೈ.ವಿ. ಅಣ್ಣಯ್ಯ ರಸ್ತೆಯ ಎಚ್‌ಎನ್‌ಎಸ್ ಪ್ಲೈವುಡ್ ಡಿಸೈನ್ ಕಾರ್ಖಾನೆ ಮೇಲೆ ದಾಳಿ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಈ ವೇಳೆ ಸಿಕ್ಕ ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಚಿನ್ನಾಭರಣ ಪ್ರಿಯರಿಗೆ ಶುಭಸುದ್ದಿ: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ

    ತಿರುಪತಿ ತಿಮ್ಮಪ್ಪನಿಗೆ ಆರೂವರೆ ಕೆಜಿ ತೂಕದ ಚಿನ್ನದ ಖಡ್ಗ ಅರ್ಪಿಸಿದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts