More

    ತಿರುಪತಿ ತಿಮ್ಮಪ್ಪನಿಗೆ ಆರೂವರೆ ಕೆಜಿ ತೂಕದ ಚಿನ್ನದ ಖಡ್ಗ ಅರ್ಪಿಸಿದ ದಂಪತಿ

    ತಿರುಪತಿ: ಧಾರ್ಮಿಕ ದೇಣಿಗೆ ವಿಷಯಕ್ಕೆ ಬಂದರೆ, ಭಾರತೀಯರ ಹೃದಯ ಅದೆಷ್ಟು ವಿಶಾಲವಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಭಾರತೀಯ ದೇವಾಲಯಗಳಲ್ಲಿ ಪ್ರತಿದಿನ ಬೃಹತ್ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗುತ್ತಿದ್ದು, ಆಂಧ್ರಪ್ರದೇಶದ ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನವೂ ಅವುಗಳಲ್ಲಿ ಒಂದು. ವೆಂಕಟೇಶ್ವರ ಸ್ವಾಮಿಯ ಭಕ್ತ ದಂಪತಿಯೊಬ್ಬರು 4 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಖಡ್ಗವನ್ನು ದೇವರಿಗೆ ಅರ್ಪಿಸಿದ್ದಾರೆ.

    ಹೈದರಾಬಾದ್‌ನ ಭಕ್ತ ಎಂ.ಶ್ರೀನಿವಾಸ ಪ್ರಸಾದ್ ಮತ್ತು ಅವರ ಪತ್ನಿ 6.5 ಕೆ.ಜಿ ತೂಕದ ಸ್ವರ್ಣ ನಂದಕ (ಚಿನ್ನದ ಖಡ್ಗ)ವನ್ನು ದೇವಾಲಯದ ಮಂಡಳಿಗೆ ಅರ್ಪಿಸಿದ್ದಾರೆ. ಸೋಮವಾರ ಬೆಳಿಗ್ಗೆ ದಂಪತಿ ಚಿನ್ನದ ಖಡ್ಗವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಅದಕ್ಕೂ ಮೊದಲು ಖಡ್ಗವನ್ನು ತಿರುಮಲದ ಕಲೆಕ್ಟಿವ್ ಅತಿಥಿ ಗೃಹದಲ್ಲಿ ಭಾನುವಾರ ಮಾಧ್ಯಮಗಳ ಮುಂದೆ ಪ್ರದರ್ಶಿಸಲಾಗಿದೆ.

    ಈ ದಂಪತಿ ಕಳೆದ ವರ್ಷವೇ ದೇವಸ್ಥಾನಕ್ಕೆ ಖಡ್ಗ ಕಾಣಿಕೆಯಾಗಿ ಕೊಡಬೇಕೆಂದು ನಿರ್ಧರಿಸಿದ್ದರಂತೆ. ಆದರೆ ಕರೊನಾ ಕಾರಣದಿಂದಾಗಿ ಕೊಡಲಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

    ಈ ಖಡ್ಗವನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ವಿಶೇಷ ಆಭರಣಕಾರರು ತಯಾರಿಸಿದ್ದಾರೆ. ಆರು ತಿಂಗಳ ಕಾಲಾವಕಾಶದಲ್ಲಿ ಖಡ್ಗ ತಯಾರಿಸಲಾಗಿದೆ. ಸುಮಾರು ಆರೂವರೆ ಕೆಜಿ ತೂಕವಿರುವ ಖಡ್ಗ ತಯಾರಿಸುವ ವೇಳೆ ಅದರ ಬೆಲೆ 1.8 ಕೋಟಿ ರೂಪಾಯಿಯಷ್ಟಿತ್ತಂತೆ ಆದರೆ ಇದೀಗ ಅದರ ಬೆಲೆ 4 ಕೋಟಿ ರೂಪಾಯಿಯಾಗಿದೆ.

    ಇದಕ್ಕೂ ಮೊದಲು ತಮಿಳುನಾಡಿನ ತೆನಿ ಮೂಲದ ಜವಳಿ ವ್ಯಾಪಾರಿ ತಂಗಾ ದೋರೈ ಅವರು 2018ರಲ್ಲಿ 1.75 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕತ್ತಿಯನ್ನು ವೆಂಕಟೇಶ್ವರನಿಗೆ ಅರ್ಪಿಸಿದ್ದರು. (ಏಜೆನ್ಸೀಸ್)

    ಎರಡನೇ ಮಗುವಿನ ನಿರೀಕ್ಷೆಯಲ್ಲಿ ರೋಡಿಸ್ ಖ್ಯಾತಿಯ ನೇಹಾ ಧೂಪಿಯಾ

    ಪ್ರಿಯಾಂಕಾಗೆ ಅಶ್ಲೀಲ ಸನ್ನೆ ಮಾಡಿದ ಚಕ್ರವರ್ತಿ! ಬಿಗ್​ಬಾಸ್​ನಿಂದ ಕಾದಿದೆಯಾ ದೊಡ್ಡ ಶಿಕ್ಷೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts