More

    ವಿಪಕ್ಷಗಳ ಬಹಿಷ್ಕಾರದ ನಡುವೆ ಹೊಸ ಸಂಸತ್​ ಭವನ ಲೋಕಾರ್ಪಣೆ: ಪ್ರಮುಖ 10 ಅಂಶಗಳು ಇಲ್ಲಿವೆ…

    ನವದೆಹಲಿ: ಪ್ರತಿಪಕ್ಷಗಳ ಬಹಿಷ್ಕಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 28) ಹೊಸ ಸಂಸತ್​ ಭವನವನ್ನು ಉದ್ಘಾಟಿಸಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೆ ಅವರನ್ನು ಅವಮಾನಿಸಲಾಗಿದೆ ಎಂದು ಪ್ರತಿಪಕ್ಷಗಳು ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿವೆ. ಇದರ ನಡುವೆಯೂ ಐತಿಹಾಸಿಕ ನೂತನ ಸಂಸತ್​ ಭವನ ಲೋಕಾರ್ಪಣೆಗೊಂಡಿದ್ದು, ಕಾರ್ಯಕ್ರಮದ ಪ್ರಮುಖ ಹತ್ತು ಅಂಶಗಳು ಈ ಕೆಳಕಂಡಂತಿವೆ.

    1. ಪ್ರಧಾನಿ ಮೋದಿ ಬೆಳಗ್ಗೆ 10.30ಕ್ಕೆ ಹೊಸ ಸಂಸತ್​ ಭವನವನ್ನು ತಲುಪಿದರು. ಸ್ವಲ್ಪ ಸಮಯದ ನಂತರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪೂಜೆಗೆ ಕುಳಿತರು. ಪೂಜೆ ಮುಗಿದ ನಂತರ, ಪ್ರಧಾನಿ ಮೋದಿ ಐತಿಹಾಸಿಕ ರಾಜದಂಡ ‘ಸೆಂಗೋಲ್’ಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.

    ಇದನ್ನೂ ಓದಿ: ಹೊರಕ್ಕೆ ತಂದ ನಿಮ್ಮ ಸೇವಕ: ಸೆಂಗೋಲ್​ಗೆ ಅಗೌರವ, ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ಕಿಡಿ

    2. ಪೂಜಾ-ಕೈಂಕರ್ಯಗಳು ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧೀನಂ ಧರ್ಮದರ್ಶಿಗಳು ‘ಸೆಂಗೋಲ್’ ಹಸ್ತಾಂತರಿಸಿದರು. ನಂತರ ಪ್ರಧಾನಿಯವರು ಐತಿಹಾಸಿಕ ರಾಜದಂಡವನ್ನು ಲೋಕಸಭೆಯ ಸಭಾಂಗಣಕ್ಕೆ ಕೊಂಡೊಯ್ದು ಸಭಾಧ್ಯಕ್ಷರ ಪೀಠದ ಪಕ್ಕದಲ್ಲಿ ಪ್ರತಿಷ್ಠಾಪಿಸಿದರು.

    3. ಪ್ರಧಾನ ಮಂತ್ರಿಯವರು ಭವ್ಯವಾದ ಹೊಸ ಸಂಸತ್ತಿನ ನಿರ್ಮಾಣದಲ್ಲಿ ಹಗಲಿರುಳು ದುಡಿದ ಕಟ್ಟಡ ಕಾರ್ಮಿಕರ ತಂಡವನ್ನು ಸನ್ಮಾನಿಸಿದರು.

    4. ವಿವಿಧ ಧರ್ಮಗಳ ಪ್ರತಿನಿಧಿಗಳು ಸರ್ವಧರ್ಮ ಪ್ರಾರ್ಥನೆಯನ್ನು ಸಲ್ಲಿಸಿದರು.

    5. ಹಳೆಯ ಸಂಸತ್ ಕಟ್ಟಡವು 1927 ರಲ್ಲಿ ಪೂರ್ಣಗೊಂಡಿತು. ಈಗ ಆ ಕಟ್ಟಡಕ್ಕೆ 96 ವರ್ಷಗಳು. ಇಂದಿನ ಅವಶ್ಯಕತೆಗಳಿಗೆ ಈ ಕಟ್ಟಡ ಅಸಮರ್ಪಕವಾಗಿದೆ ಎಂದು ಕಂಡುಬಂದಿದೆ.

    6. ಹೊಸ ಸಂಸತ್ ಭವನದ ಲೋಕಸಭೆಯಲ್ಲಿ 888 ಸದಸ್ಯರು ಮತ್ತು ರಾಜ್ಯಸಭಾ ಚೇಂಬರ್‌ನಲ್ಲಿ 300 ಸದಸ್ಯರು ಆರಾಮವಾಗಿ ಕುಳಿತುಕೊಳ್ಳಬಹುದು. ಉಭಯ ಸದನಗಳ ಜಂಟಿ ಅಧಿವೇಶನಕ್ಕಾಗಿ, 1,280 ಸಂಸದರಿಗೆ ಲೋಕಸಭೆಯ ಕೊಠಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

    7. ಹೊಸ ಕಟ್ಟಡಕ್ಕೆ ಬಳಸಲಾದ ವಸ್ತುಗಳನ್ನು ದೇಶಾದ್ಯಂತ ಸಂಗ್ರಹಿಸಲಾಗಿದೆ. ತೇಗದ ಮರವನ್ನು ಮಹಾರಾಷ್ಟ್ರದ ನಾಗ್ಪುರದಿಂದ ಪಡೆಯಲಾಗಿದ್ದರೆ, ಕೆಂಪು ಮತ್ತು ಬಿಳಿ ಮರಳುಗಲ್ಲನ್ನು ರಾಜಸ್ಥಾನದ ಸರ್ಮಥುರಾದಿಂದ ತರಲಾಯಿತು.

    8. ಉತ್ತರ ಪ್ರದೇಶದ ಮಿರ್ಜಾಪುರದಿಂದ ರತ್ನಗಂಬಳಿಗಳು, ತ್ರಿಪುರಾದಿಂದ ಬಿದಿರು ನೆಲಹಾಸು ಮತ್ತು ರಾಜಸ್ಥಾನದ ಕಲ್ಲಿನ ಕೆತ್ತನೆಗಳೊಂದಿಗೆ ಹೊಸ ಸಂಸತ್ತಿನ ಕಟ್ಟಡವು ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಈ ಐತಿಹಾಸಿಕ ಕಾರ್ಯಕ್ರಮ ಸ್ಮರಣಾರ್ಥ ಭಾರತ ಸರ್ಕಾರ 75 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಪ್ರಧಾನಿ ಮೋದಿ ವಿಶೇಷ ಮನವಿ ಬಳಿಕ ಹೊಸ ಸಂಸತ್​ ಭವನದ ವಿಡಿಯೋಗೆ ಶಾರುಖ್​, ಅಕ್ಷಯ್​ ಧ್ವನಿ

    9. ಟಾಟಾ ಪ್ರಾಜೆಕ್ಟ್ಸ್​ ಲಿಮಿಟೆಡ್‌ನಿಂದ ನಿರ್ಮಿಸಲ್ಪಟ್ಟ ಹೊಸ ಸಂಸತ್ತಿನ ಕಟ್ಟಡವು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಭವನವನ್ನು ಹೊಂದಿದೆ. ಸಂಸದರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿದೆ.

    10. ತ್ರಿಕೋನ ಆಕಾರದಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಅವುಗಳು ಯಾವುವೆಂದರೆ, ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ. ವಿಐಪಿಗಳು, ಸಂಸದರು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರಗಳು ಇವೆ.

    ನೂತನ ಸಂಸತ್​ ಭವನ ಉದ್ಘಾಟನೆ: ರಾಜದಂಡ ಸೆಂಗೋಲ್​ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

    ನಾಮಫಲಕ ಅನಾವರಣದೊಂದಿಗೆ ಹೊಸ ಸಂಸತ್ ಭವನ ಉದ್ಘಾಟನೆ: ಗಮನ ಸೆಳೆದ ಸರ್ವಧರ್ಮ ಪ್ರಾರ್ಥನೆ ​

    ಹೊಸ ಸಂಸತ್​ ಭವನ ನಿರ್ಮಾಣಕ್ಕಾಗಿ ಹಗಲಿರುಳು ದುಡಿದ ಕಾರ್ಮಿಕರನ್ನು ಸನ್ಮಾನಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts