ನೂತನ ಸಂಸತ್​ ಭವನ ಉದ್ಘಾಟನೆ: ರಾಜದಂಡ ಸೆಂಗೋಲ್​ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

ನವದೆಹಲಿ: ಹೊಸ ಸಂಸತ್​ ಭವನದ ಉದ್ಘಾಟನ ಕಾರ್ಯಕ್ರಮ ನಡೆಯುತ್ತಿದ್ದು, ಐತಿಹಾಸಿಕ ರಾಜದಂಡ ಸೆಂಗೋಲ್​ ಅನ್ನು ಲೋಕಸಭಾ ಸ್ಪೀಕರ್​ ಸ್ಥಾನದ ಹಿಂಭಾಗದಲ್ಲಿ ಪ್ರಧಾನಿ ಮೋದಿ ಪ್ರತಿಷ್ಠಾಪಿಸಿದರು. ಪೂಜಾ ವಿಧಿವಿಧಾನಗಳ ಬಳಿಕ ಅಧೀನಂ ಶ್ರೀಗಳಿಂದ ಸೆಂಗೋಲ್​ ಅನ್ನು ಸ್ವೀಕರಿಸಿದ ಪ್ರಧಾನಿ ಮೋದಿ ಲೋಕಸಭಾ ಸ್ಪೀಕರ್​ ಸ್ಥಾನದ ಹಿಂದೆ ಅಳವಡಿಸಿದ್ದಾರೆ. ಸೆಂಗೋಲ್, ಬ್ರಿಟಿಷರಿಂದ ಸ್ವತಂತ್ರ ಭಾರತಕ್ಕೆ ಅಧಿಕಾರದ ಹಸ್ತಾಂತರವನ್ನು ಸಂಕೇತಿಸುತ್ತದೆ. ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್ ಅಥವಾ ರಾಜದಂಡವನ್ನು ಸಿದ್ಧಪಡಿಸುವ ಜವಬ್ದಾರಿಯನ್ನು ತಿರುವವಾಡುತುರೈ ಅಧೀನಮ್​ ಅಥವಾ ಮಠಕ್ಕೆ ನೀಡಲಾಗಿತ್ತು. ಈ ಅಧೀನಮ್​ 400 … Continue reading ನೂತನ ಸಂಸತ್​ ಭವನ ಉದ್ಘಾಟನೆ: ರಾಜದಂಡ ಸೆಂಗೋಲ್​ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ