More

    ನೂತನ ಸಂಸತ್​ ಭವನ ಉದ್ಘಾಟನೆ: ರಾಜದಂಡ ಸೆಂಗೋಲ್​ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

    ನವದೆಹಲಿ: ಹೊಸ ಸಂಸತ್​ ಭವನದ ಉದ್ಘಾಟನ ಕಾರ್ಯಕ್ರಮ ನಡೆಯುತ್ತಿದ್ದು, ಐತಿಹಾಸಿಕ ರಾಜದಂಡ ಸೆಂಗೋಲ್​ ಅನ್ನು ಲೋಕಸಭಾ ಸ್ಪೀಕರ್​ ಸ್ಥಾನದ ಹಿಂಭಾಗದಲ್ಲಿ ಪ್ರಧಾನಿ ಮೋದಿ ಪ್ರತಿಷ್ಠಾಪಿಸಿದರು.

    ಪೂಜಾ ವಿಧಿವಿಧಾನಗಳ ಬಳಿಕ ಅಧೀನಂ ಶ್ರೀಗಳಿಂದ ಸೆಂಗೋಲ್​ ಅನ್ನು ಸ್ವೀಕರಿಸಿದ ಪ್ರಧಾನಿ ಮೋದಿ ಲೋಕಸಭಾ ಸ್ಪೀಕರ್​ ಸ್ಥಾನದ ಹಿಂದೆ ಅಳವಡಿಸಿದ್ದಾರೆ. ಸೆಂಗೋಲ್, ಬ್ರಿಟಿಷರಿಂದ ಸ್ವತಂತ್ರ ಭಾರತಕ್ಕೆ ಅಧಿಕಾರದ ಹಸ್ತಾಂತರವನ್ನು ಸಂಕೇತಿಸುತ್ತದೆ. ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್ ಅಥವಾ ರಾಜದಂಡವನ್ನು ಸಿದ್ಧಪಡಿಸುವ ಜವಬ್ದಾರಿಯನ್ನು ತಿರುವವಾಡುತುರೈ ಅಧೀನಮ್​ ಅಥವಾ ಮಠಕ್ಕೆ ನೀಡಲಾಗಿತ್ತು. ಈ ಅಧೀನಮ್​ 400 ವರ್ಷಗಳಷ್ಟು ಹಳೆಯದು.


    ಕಾರ್ಯಕ್ರಮಕ್ಕೆ ಸುಮಾರು 60 ಧಾರ್ಮಿಕ ಮುಖ್ಯಸ್ಥರನ್ನು ಕರೆಸಲಾಗಿದ್ದು, ಅವರಲ್ಲಿ ಹಲವರು ತಮಿಳುನಾಡಿನವರಾಗಿದ್ದಾರೆ. ಧಾರ್ವಿುಕ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಋತ್ವಿಜರಾದ ಟಿ.ವಿ. ಸೀತಾರಾಮ ಶರ್ಮ, ಶ್ರೀರಾಮ ಶರ್ಮ, ಲಕ್ಷ್ಮೀಶ ತಂತ್ರಿ ಹಾಗೂ ದೆಹಲಿ ಶಾಖಾ ಮಠದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ ಭಾಗಿಯಾಗಿದ್ದಾರೆ.

    ಸೆಂಗೋಲ್​ ಇತಿಹಾಸ

    ಬ್ರಿಟಿಷ್ ಇಂಡಿಯಾದ ಕೊನೆಯ ವೈಸ್​ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಪ್ರಧಾನಿ ನೆಹರೂ ಅವರಿಗೆ ಕೇಳಿದ ಸರಳ ಪ್ರಶ್ನೆಯೊಂದಿಗೆ ಪ್ರಾರಂಭವಾದ ಘಟನೆಗಳ ಸರಣಿಯ ನಂತರ ಈ ಸೆಂಗೋಲ್ ಅಸ್ತಿತ್ವಕ್ಕೆ ಬಂದಿತು. ಇತಿಹಾಸ ತಜ್ಞರು ಮತ್ತು ಹಳೆಯ ವರದಿಗಳ ಪ್ರಕಾರ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಧಿಕಾರವನ್ನು ಹಸ್ತಾಂತರ ಮಾಡುವಾಗ ಅದರ ನೆನಪಿಗೆ ಏನನ್ನು ಗುರುತಿಸಬಹುದು ಎಂದು ಪ್ರಧಾನಿಯಾಗಲಿದ್ದ ನೆಹರು ಅವರಿಗೆ ಮೌಂಟ್ ಬ್ಯಾಟನ್ ಕೇಳಿದ್ದರು.

    ಇದನ್ನೂ ಓದಿ: ಪ್ರಧಾನಿ ಮೋದಿ ವಿಶೇಷ ಮನವಿ ಬಳಿಕ ಹೊಸ ಸಂಸತ್​ ಭವನದ ವಿಡಿಯೋಗೆ ಶಾರುಖ್​, ಅಕ್ಷಯ್​ ಧ್ವನಿ

    ಬಳಿಕ ನೆಹರು ಅವರು ದೇಶದ ಕೊನೆಯ ಗವರ್ನರ್​ ಜನರಲ್​ ಆಗಿದ್ದ ಸಿ. ರಾಜಗೋಪಾಲಚಾರಿ ಅವರ ಕಡೆ ನೋಡಿ ಸಲಹೆ ನೀಡುವಂತೆ ಕೋರಿದರು. ನಂತರ ರಾಜಾಜಿ ಎಂದೇ ಖ್ಯಾತರಾಗಿದ್ದ ರಾಜಗೊಪಾಲಚಾರಿ ಅವರು ನೆಹರು ಅವರಿಗೆ ತಮಿಳು ಸಂಪ್ರದಾಯದ ಬಗ್ಗೆ ತಿಳಿಸಿದರು. ಅಧಿಕಾರಕ್ಕೆ ಬಂದಾಗ ಹೊಸ ರಾಜನಿಗೆ ಪ್ರಧಾನ ಅರ್ಚಕರು ರಾಜದಂಡವನ್ನು ಹಸ್ತಾಂತರಿಸುವ ತಮಿಳು ಸಂಪ್ರದಾಯದ ಬಗ್ಗೆ ವಿವರಿಸಿದರು.

    ಭಾರತದ ಸ್ವಾತಂತ್ರ್ಯವನ್ನು ಗುರುತಿಸಲು ಇದೇ ಸಂಪ್ರದಾಯವನ್ನು ಅನುಸರಿಸಬಹುದು ಎಂದು ರಾಜಗೋಪಾಲಚಾರಿ ಅವರು ನೆಹರು ಅವರಿಗೆ ಹೇಳಿದರು. ನಂತರ ಆ ಐತಿಹಾಸಿಕ ಕ್ಷಣಕ್ಕಾಗಿ ರಾಜದಂಡವನ್ನು ವ್ಯವಸ್ಥೆ ಮಾಡುವ ಜವಬ್ದಾರಿಯು ರಾಜಾಜಿ ಅವರ ಮೇಲೆ ಬಿದ್ದಿತು. ಬ್ರಿಟಿಷರಿಂದ ಅಧಿಕಾರ ಹಸ್ತಾಂತರ ಮಾಡುವಾಗ ಅದರ ಗುರುತಿಗೆ ರಾಜದಂಡವನ್ನು ಮೌಂಟ್​ ಬ್ಯಾಟನ್​ ಅವರು ನೆಹರು ಅವರಿಗೆ ಹಸ್ತಾಂತರ ಮಾಡಿದರು. (ಏಜೆನ್ಸೀಸ್​)

    ಹೊಸ ಸಂಸತ್​ ಭವನದಲ್ಲಿ ಪ್ರಧಾನಿಯಿಂದ ರಾಜದಂಡ ಸೆಂಗೋಲ್​ ಸ್ಥಾಪನೆ: ತಮಿಳಿನ ಸೆಂಗೋಲ್ ಹಿನ್ನೆಲೆ ಇಲ್ಲಿದೆ…

    ಸೆಂಗೋಲ್ ಸುತ್ತ ನಂದಿಕೋಲು ಪರಂಪರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts