More

    ಪ್ರಧಾನಿ ಮೋದಿ ವಿಶೇಷ ಮನವಿ ಬಳಿಕ ಹೊಸ ಸಂಸತ್​ ಭವನದ ವಿಡಿಯೋಗೆ ಶಾರುಖ್​, ಅಕ್ಷಯ್​ ಧ್ವನಿ

    ನವದೆಹಲಿ: ಹೊಸ ಸಂಸತ್​ ಭವನವನ್ನು ಪರಿಚಯಿಸುವ ಬಾಲಿವುಡ್​ ಸೂಪರ್​ ಸ್ಟಾರ್ಸ್​ ಶಾರುಖ್​ ಖಾನ್​ ಮತ್ತು ಅಕ್ಷಯ್​ ಕುಮಾರ್​ ಹಂಚಿಕೊಂಡ ವಿಡಿಯೋವನ್ನು ಪ್ರಧಾನಿ ಮೋದಿ ಶನಿವಾರ ರಾತ್ರಿ ತಮ್ಮ ಟ್ವಿಟರ್​ ಖಾತೆಯಲ್ಲಿ ರಿಟ್ವೀಟ್​ ಮಾಡಿದ್ದಾರೆ. ಮೋದಿ ಅವರ ವಿಶೇಷ ಮನವಿ ಬಳಿಕ ಇಬ್ಬರು ಸ್ಟಾರ್​ಗಳು ವಿಡಿಯೋಗೆ ಧ್ವನಿ ನೀಡಿದ್ದಾರೆಂದು ತಿಳಿದುಬಂದಿದೆ.

    ಪ್ರಧಾನಿ ಮೋದಿ ಅವರು ಮೇ 26ರಂದು ಹೊಸ ಸಂಸತ್​ ಭವನದ ಸಣ್ಣ ವಿಡಿಯೋ ತುಣುಕನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಯಾವುದೇ ಹಿನ್ನೆಲೆ ಧ್ವನಿ ಇರಲಿಲ್ಲ. ನನ್ನಲ್ಲಿ ವಿಶೇಷ ವಿನಂತಿ ಇದೆ. ಈ ವೀಡಿಯೊವನ್ನು ನಿಮ್ಮ ಸ್ವಂತ ಧ್ವನಿಯೊಂದಿಗೆ ಹಂಚಿಕೊಳ್ಳಿ, ಅದು ನಿಮ್ಮ ಆಲೋಚನೆಗಳನ್ನು ತಿಳಿಸುತ್ತದೆ. ಅವುಗಳಲ್ಲಿ ಕೆಲವೊಂದನ್ನು ನಾನು ಮರು ಟ್ವೀಟ್ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

    ಶಾರುಖ್​ ಖಾನ್​ ಧ್ವನಿ ನೀಡಿರುವ ವೀಡಿಯೊದಲ್ಲಿ ಹೊಸ ಸಂಸತ್​ ಭವನವನ್ನು “ನಮ್ಮ ಸಂವಿಧಾನವನ್ನು ಎತ್ತಿಹಿಡಿಯುವ ಜನರ ಹೊಸ ಮನೆ” ಎಂದು ಕರೆದಿದ್ದಾರೆ. ಹೊಸ ಸಂಸತ್ ಕಟ್ಟಡ, ನಮ್ಮ ಭರವಸೆಯ ಹೊಸ ಮನೆ. 140 ಕೋಟಿ ಭಾರತೀಯರು ಒಂದೇ ಕುಟುಂಬವಾಗುವಂತಹ ನಮ್ಮ ಸಂವಿಧಾನವನ್ನು ಎತ್ತಿಹಿಡಿಯುವ ಜನರ ನೆಲೆಯಾಗಿದೆ. ಈ ಹೊಸ ಮನೆಯು ತುಂಬಾ ದೊಡ್ಡದಾಗಿರಲಿ, ಅದು ಪ್ರತಿ ಹಳ್ಳಿ, ನಗರ ಮತ್ತು ದೇಶದ ಮೂಲೆ ಮೂಲೆಯಿಂದ ಎಲ್ಲರಿಗೂ ಸ್ಥಳವನ್ನು ಹೊಂದಿರಲಿ. ಹೊಸ ಮನೆಯ ತೋಳುಗಳು ಎಲ್ಲ ಜಾತಿ, ಧರ್ಮದ ಜನರನ್ನು ಅಪ್ಪಿಕೊಳ್ಳಲಿ ಎಂದು ಶಾರುಖ್​ ಬಣ್ಣಿಸಿದ್ದಾರೆ.

    ಇದನ್ನೂ ಓದಿ: ಜೂನ್​ನಿಂದ ಹಲವು ವಿತ್ತೀಯ ಮಾರ್ಪಾಡು: ಹಣಕಾಸು ನಿಯಮಗಳಲ್ಲಿ ಬದಲಾವಣೆ, ಮುಗಿಯಲಿವೆ ಕೆಲ ಗಡುವು


    ಶಾರುಖ್​ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿರುವ ಪ್ರಧಾನಿ ಮೋದಿ ಸುಂದರವಾಗಿ ವ್ಯಕ್ತಪಡಿಸಿದ್ದಾರೆ ಎಂದು ಬರೆದಿದ್ದಾರೆ. ಹೊಸ ಸಂಸತ್ ಕಟ್ಟಡವು ಪ್ರಜಾಪ್ರಭುತ್ವದ ಶಕ್ತಿ ಮತ್ತು ಪ್ರಗತಿಯ ಸಂಕೇತವಾಗಿದೆ. ಇದು ಸಂಪ್ರದಾಯವನ್ನು ಆಧುನಿಕತೆಯೊಂದಿಗೆ ಸಂಯೋಜಿಸುತ್ತದೆ ಎಂದು ಹೇಳಿದ್ದಾರೆ.

    ಅಕ್ಷಯ್​ ಕುಮಾರ್​ ತಮ್ಮ ಧ್ವನಿ ನೀಡಿ ಟ್ವೀಟ್​ ಮಾಡಿರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಕ್ಷಯ್ ಅವರು ಹೊಸ ಸಂಸತ್ ಕಟ್ಟಡವನ್ನು ಭಾರತದ ಬೆಳವಣಿಗೆ ಪಥದ ಅಪ್ರತಿಮ ಸಂಕೇತ ಎಂದು ಕರೆದಿದ್ದಾರೆ.

    ಇದನ್ನೂ ಓದಿ: ನೂತನ ಸಂಸತ್ ಭವನ ಇಂದು ಲೋಕಾರ್ಪಣೆ; ಮೋದಿಯಿಂದ ಉದ್ಘಾಟನೆ, ಧಾರ್ವಿುಕ ಆಚರಣೆ

    ಹೊಸ ಸಂಸತ್ ಭವನವನ್ನು ಭಾನುವಾರ ಭವ್ಯ ಸಮಾರಂಭದಲ್ಲಿ ಉದ್ಘಾಟಿಸುವ ಕೆಲವೇ ಗಂಟೆಗಳ ಮೊದಲು ಪ್ರಧಾನಿ ಮೋದಿಯವರ ಈ ರೀಟ್ವೀಟ್‌ಗಳು ಬಂದಿವೆ. ಸಮಾರಂಭವನ್ನು ಕಾಂಗ್ರೆಸ್, ಶಿವಸೇನೆ (ಯುಬಿಟಿ), ಎಎಪಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಮತ್ತು ಜನತಾ ದಳ (ಯುನೈಟೆಡ್) ಸೇರಿದಂತೆ 20 ಕ್ಕೂ ಹೆಚ್ಚು ವಿರೋಧ ಪಕ್ಷಗಳು ಬಹಿಷ್ಕರಿಸಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡದೆ ದೇಶದ ಪ್ರಥಮ ಪ್ರಜೆಗೆ ಅವಮಾನಿಸಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡಿವೆ. (ಏಜೆನ್ಸೀಸ್​)

    ಸೆಂಗೋಲ್ ಸುತ್ತ ನಂದಿಕೋಲು ಪರಂಪರೆ!

    ಹೊರಕ್ಕೆ ತಂದ ನಿಮ್ಮ ಸೇವಕ: ಸೆಂಗೋಲ್​ಗೆ ಅಗೌರವ, ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ಕಿಡಿ

    ಭಾರತೀಯರ ಚಾರಿತ್ರಿಕ ಹೆಗ್ಗುರುತು ಸಂಸತ್ ಭವನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts