More

    ಹೊರಕ್ಕೆ ತಂದ ನಿಮ್ಮ ಸೇವಕ: ಸೆಂಗೋಲ್​ಗೆ ಅಗೌರವ, ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ಕಿಡಿ

    ನವದೆಹಲಿ: ಇಂದು (ಮೇ 28) ಹೊಸ ಸಂಸತ್​ ಭವನದ ಒಳಗೆ ಪ್ರತಿಷ್ಠಾಪನೆ ಆಗಲಿರುವ ರಾಜದಂಡ ಸೆಂಗೋಲ್​ಗೆ ಅಗೌರವ ತೋರಿರುವ ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.

    ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ಪವಿತ್ರ ಸೆಂಗೋಲ್​​ಗೆ ತಕ್ಕ ಗೌರವ ನೀಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಈ ಸೆಂಗೋಲ್ ಅನ್ನು ಪ್ರಯಾಗ್‌ರಾಜ್‌ನ ಆನಂದ ಭವನದಲ್ಲಿ ವಾಕಿಂಗ್ ಸ್ಟಿಕ್ ಆಗಿ ಪ್ರದರ್ಶನಕ್ಕೆ ಇಡಲಾಗಿತ್ತು. ನಿಮ್ಮ ಸೇವಕ (ಮೋದಿ) ಮತ್ತು ನಮ್ಮ ಸರ್ಕಾರ ಆನಂದ ಭವನದಲ್ಲಿ ಇದ್ದ ಸೆಂಗೋಲ್​​ ಅನ್ನು ಹೊರಗಡೆ ತಂದಿದೆ ಎಂದು ಕಾಂಗ್ರೆಸ್​ ಅನ್ನು ಟೀಕಿಸಿದರು. ದೆಹಲಿಯ ತಮ್ಮ ನಿವಾಸದಲ್ಲಿ ಅಧೀನಂ ಶ್ರೀಗಳ ಜತೆ ಸಭೆ ನಡೆಸಿ, ಆಶೀರ್ವಾದ ಪಡೆದ ಬಳಿಕ ಮಾತನಾಡಿದರು.

    ಅಂದಹಾಗೆ ಈ ಕಾರ್ಯಕ್ರಮಕ್ಕೆ ಸುಮಾರು 60 ಧಾರ್ಮಿಕ ಮುಖ್ಯಸ್ಥರನ್ನು ಕರೆಸಲಾಗಿದ್ದು, ಅವರಲ್ಲಿ ಹಲವರು ತಮಿಳುನಾಡಿನವರಾಗಿದ್ದಾರೆ. ತಮಿಳುನಾಡಿನ ಅಧೀನರು ಅಥವಾ ಮಠಗಳು ಮೇಲ್ಜಾತಿ ಪ್ರಾಬಲ್ಯವನ್ನು ವಿರೋಧಿಸುವ ಇತಿಹಾಸವನ್ನು ಹೊಂದಿವೆ ಮತ್ತು ಧರ್ಮವನ್ನು ಜನಸಾಮಾನ್ಯರ ಬಳಿಗೂ ಕೊಂಡೊಯ್ಯುವಲ್ಲಿ ಹೆಸರುವಾಸಿಯಾಗಿದೆ. ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್ ಅಥವಾ ರಾಜದಂಡವನ್ನು ಸಿದ್ಧಪಡಿಸುವ ಜವಬ್ದಾರಿಯನ್ನು ತಿರುವವಾಡುತುರೈ ಅಧೀನಮ್​ ಅಥವಾ ಮಠಕ್ಕೆ ನೀಡಲಾಗಿತ್ತು. ಈ ಅಧೀಮನ್​ 400 ವರ್ಷಗಳಷ್ಟು ಹಳೆಯದು.

    ಇದನ್ನೂ ಓದಿ: ಜೂನ್​ನಿಂದ ಹಲವು ವಿತ್ತೀಯ ಮಾರ್ಪಾಡು: ಹಣಕಾಸು ನಿಯಮಗಳಲ್ಲಿ ಬದಲಾವಣೆ, ಮುಗಿಯಲಿವೆ ಕೆಲ ಗಡುವು

    ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ಅಧಿಕಾರ ಹಸ್ತಾಂತರದ ಗುರುತಾಗಿ ಸೆಂಗೋಲ್​ ಅನ್ನು ಅಂದಿನ ಪ್ರಧಾನಿ ಜವಾಹರ್​ಲಾಲ್​ ನೆಹರೂ ಅವರು ಬ್ರಿಟಿಷರಿಂದ ಸ್ವೀಕರಿಸಿದ್ದರು. ಬಳಿಕ ಸೆಂಗೋಲ್​ ಅನ್ನು ಅಲಹಬಾದ್​ನಲ್ಲಿ ಇಡಲಾಗಿತ್ತು. ಇದೀಗ ಆ ಸೆಂಗೋಲ್​ ಅನ್ನು ಹೊಸ ಸಂಸತ್​ ಭವನದಲ್ಲಿ ಲೋಕಸಭಾ ಸ್ಪೀಕರ್​ ಸ್ಥಾನದ ಹಿಂಭಾಗದಲ್ಲಿ ಪ್ರಧಾನಿ ಮೋದಿ ಪ್ರತಿಷ್ಠಾಪಿಸಲಿದ್ದಾರೆ.

    ಸೆಂಗೋಲ್ ಬ್ರಿಟಿಷರಿಂದ ಸ್ವತಂತ್ರ ಭಾರತಕ್ಕೆ ಅಧಿಕಾರದ ಹಸ್ತಾಂತರವನ್ನು ಸಂಕೇತಿಸುತ್ತದೆ ಎಂಬ ಬಿಜೆಪಿಯ ಹೇಳಿಕೆಯನ್ನು ಕಾಂಗ್ರೆಸ್ ಪ್ರಬಲವಾಗಿ ತಿರಸ್ಕರಿಸಿದೆ. ಅಧಿಕಾರ ಹಸ್ತಾಂತರಕ್ಕೆ ಸೆಂಗೋಲ್​ ಬಳಸಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದಿದೆ. ಇದರ ಬೆನಲ್ಲೇ ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್​ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ತನ್ನ ನಡವಳಿಕೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಗೃಹ ಸಚಿವ ಅಮಿತ್​ ಷಾ ಕಿಡಿಕಾರಿದ್ದಾರೆ. (ಏಜೆನ್ಸೀಸ್​)

    ಸೆಂಗೋಲ್ ಸುತ್ತ ನಂದಿಕೋಲು ಪರಂಪರೆ!

    ನೂತನ ಸಂಸತ್ ಭವನ ಇಂದು ಲೋಕಾರ್ಪಣೆ; ಮೋದಿಯಿಂದ ಉದ್ಘಾಟನೆ, ಧಾರ್ವಿುಕ ಆಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts