More

    ಆದಾಯ ತೆರಿಗೆ ಉಳಿಸೋದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಏನು ಮಾಡ್ತಾರೆ?

    ನವದೆಹಲಿ: ಸಾರ್ವಜನಿಕ ಬದುಕಿನಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ತಮ್ಮ ವೈಯಕ್ತಿಕ ಸಂಪತ್ತಿನ ವಿವರವನ್ನು ಬಹಿರಂಗ ಪಡಿಸಿದ್ದಾರೆ. ಇದರಂತೆ ಪ್ರಧಾನಿ ಮೋದಿಯವರು 2.85 ಕೋಟಿ ರೂಪಾಯಿ ಸಂಪತ್ತಿನ ಒಡೆಯ. ಯಾವುದೇ ಸಾಲ ಇಲ್ಲ. ಸ್ವಂತ ಕಾರೂ ಇಲ್ಲ. ಇಷ್ಟಾಗ್ಯೂ, ಅವರು ಆದಾಯ ತೆರಿಗೆ ಉಳಿಸೋದಕ್ಕೆ ಏನು ಮಾಡ್ತಾರೆ? ಎಂಬ ಸಂದೇಹ ಸಹಜ.

    ಎಲ್ಲರಂತೆ ಪ್ರಧಾನಿ ನರೇಂದ್ರ ಮೋದಿಯವರೂ ಆದಾಯ ತೆರಿಗೆ ವಿನಾಯಿತಿ ಪಡೆಯುವುದಕ್ಕೆ ತೆರಿಗೆ ನಿಯಮಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಜೀವ ವಿಮೆ, ನ್ಯಾಷನಲ್​ ಸೇವಿಂಗ್ಸ್ ಸರ್ಟಿಫಿಕೇಟ್ಸ್ (ಎನ್​ಎಸ್​​ಸಿ) ಮತ್ತು ಇನ್​​ಫ್ರಾಸ್ಟ್ರಕ್ಚರ್​ ಬಾಂಡ್ಸ್ ಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅವರು ಘೋಷಿಸಿರುವ ಪ್ರಕಾರ, ಎನ್​ಎಸ್​ಸಿಯಲ್ಲಿ 8,43,124 ರೂಪಾಯಿ ಹೂಡಿಕೆ ಮಾಡಿದ್ದು, 1,50,957 ರೂಪಾಯಿ ಜೀವ ವಿಮೆಯ ಪ್ರೀಮಿಯಂ ಪಾವತಿಸಿದ್ದಾರೆ.

    ಇದನ್ನೂ ಓದಿ: ಹದಿನೇಳರ ಹುಡುಗಿ ನಾಲ್ಕರ ಬಾಲಕನ ಹತ್ಯೆ ಮಾಡಿ, ಗೋಣಿ ಚೀಲಕ್ಕೆ ತುಂಬಿ ಕಿಟಕಿಯಿಂದ ಕೆಳಕ್ಕೆಸೆದ್ಳು!

    ಅವರು 2019-20ನೇ ಹಣಕಾಸು ವರ್ಷದಲ್ಲಿ 7,61,646 ರೂಪಾಯಿಯನ್ನು ಎನ್​ಎಸ್​ಸಿಯಲ್ಲೂ, 1,90,347 ರೂಪಾಯಿ ಜೀವ ವಿಮಾ ಪ್ರೀಮಿಯಂ ಪಾವತಿಸಿದ್ದಾರೆ. 2012ರ ಜನವರಿಯಲ್ಲಿ 20,000 ರೂಪಾಯಿಯ ಇನ್​ಫ್ರಾಸ್ಟ್ರಕ್ಚರ್ ಬಾಂಡ್ ಅನ್ನು ಅವರು ಖರೀದಿಸಿದ್ದು, ಅದಿನ್ನೂ ಮೆಚೂರ್ ಆಗಿಲ್ಲ. (ಏಜೆನ್ಸೀಸ್)

    ವೈಯಕ್ತಿಕ ಸಂಪತ್ತು ಎಷ್ಟೆಂದು ಘೋಷಿಸಿದ್ರು ಪ್ರಧಾನಿ ನರೇಂದ್ರ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts