More

    28 ಕ್ಕೆ ಪ್ರಧಾನಿ ಮೋದಿ ಆಗಮನ

    ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹಾಗೂ ವಿಜಯಪುರ ಎನ್‌ಡಿಎ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಏ.28 ರಂದು ಬಾಗಲಕೋಟೆಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಾಗೌಡ ಪಾಟೀಲ ಹೇಳಿದರು.

    ನವನಗರದಲ್ಲಿ ಬುಧವಾರ ಭೂಮಿ ಪೂಜೆ ನೆರವೇರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರ ಪ್ರಚಾರ ಸಭೆಗೆ 2 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದ್ದು, ವಿಜಯಪುರ – ಬಾಗಲಕೋಟೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಲಿದ್ದಾರೆ. ನವನಗರದ ತೋಟಗಾರಿಕೆ ವಿವಿ ಸಮೀಪದ ನೂರು ಎಕರೆ ಜಾಗದಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾವೇಶ ನಡೆಯಲಿದೆ ಎಂದರು.

    ಮಾಜಿ ಶಾಸಕ ವೀರಣ್ಣ ಚರಂತಿ ಮಠ ಮಾತನಾಡಿ, ವಿಜಯಪುರ-ಬಾಗಲಕೋಟೆ ಜನರು ಅಂದು ಮಧ್ಯಾಹ್ನ 2.30 ಗಂಟೆ ಒಳಗಾಗಿ ಸಮಾವೇಶದ ವೇದಿಕೆಯ ಮುಂಭಾಗ ಆಗಮಿಸಬೇಕು. ಭದ್ರತೆ ದೃಷ್ಟಿ ಯಿಂದ ಜನ ಬೇಗ ಬರಬೇಕು. ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

    ರಾಜ್ಯದ ಮುಖಂಡರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಅಂದಿನ ಕಾರ್ಯಕ್ರಮಕ್ಕೆ ಆಗಮಿಸ ಲಿದ್ದಾರೆ. ಈಗಾಗಲೇ ಕಾರ್ಯಕ್ರಮಕ್ಕಾಗಿ ನವನಗರದ ಯೂನಿಟ್-2 ರಲ್ಲಿನ 101, 102, 103 ಸೆಕ್ಟರ್‌ಗಳಲ್ಲಿ ಅಂದಾಜು 100 ಏಕರೆ ಜಾಗೆದಲ್ಲಿ ಸಮಾವೇಶ ಏರ್ಪಡಿಸುತ್ತಿದ್ದು, ಮೂರು ಹೆಲಿಪ್ಯಾಡ ನಿರ್ಮಾಣ ಮಾಡಲಾಗುವುದು. ಎಸ್ಪಿ ಅವರ ಮಾರ್ಗದರ್ಶನದಲ್ಲಿ ಭದ್ರತೆ ಇರಲಿದೆ ಎಂದು ತಿಳಿಸಿದರು.

    ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ, ಶಾಸಕ ಸಿದ್ದು ಸವದಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಾಗಲಕೋಟೆಗೆ ಆಗಮಿಸುತ್ತಿರುವುದು ಹೆಮ್ಮ ತಂದಿದೆ. ಯುಗದ ಯುಗ ಪುರುಷನನ್ನು ನೋಡಲು ಕಾರ್ಯಕರ್ತರು ಸಮಯಕ್ಕೆ ಸರಿಯಾಗಿ ಬರಬೇಕು. ಮೋದಿ ನೋಡುವುದೇ ಒಂದು ಸೌಭಾಗ್ಯ. ಕಾರ್ಯಕ್ರಮ ಯಶಸ್ಸು ಮಾಡಲು ಕಾರ್ಯಕರ್ತರು ಕೈ ಜೋಡಿಸಬೇಕು ಎಂದರು.

    ಬಿಜೆಪಿ ಹಿರಿಯ ಮುಖಂಡ ಜಗದೀಶ ಹಿರೇಮನಿ ಮಾತನಾಡಿ, ಚಿಕ್ಕಬಳ್ಳಾಪುರ, ದೇವನ ಹಳ್ಳಿಯಲ್ಲಿ, ಬೆಂಗಳೂರು ರ‌್ಯಾಲಿ ಆಗಿದೆ, ಏ.27 ರಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ ಮಾಡಲಿದ್ದಾರೆ. ಏ.28 ರಂದು ಮೊದಲನೇ ಕಾರ್ಯಕ್ರಮ ಬೆಳಗಾವಿ, ಎರಡನೇ ಕಾರ್ಯಕ್ರಮ ಶಿರಸಿ, ನಂತರ ದಾವಣಗೆರೆ ಬಳಿಕ, ಕೊನೆಯ ಕಾರ್ಯಕ್ರಮ ಬಾಗಲಕೋಟೆಯಲ್ಲಿ ನಡೆಯಲಿದ್ದು, ಜನರನ್ನು ಉದ್ದೇಶಿಸಿ ಮೋದಿ ಯವರು ಮಾತನಾಡಲಿದ್ದಾರೆ ಎಂದು ತಿಳಿಸಿದೆ.
    ಕಾರ್ಯಕ್ರಮ ಸಿದ್ದತೆಗೆಗಾಗಿ 28 ವಿಭಾಗ ಮಾಡಲಾಗಿದೆ. ಸಮಾವೇಶಕ್ಕೆ ಬರುವ ಜನರಿಗೆ ನೀರು ಪೂರೈಸುವುದು ಹಿಡಿದು ಎಲ್ಲ ವ್ಯವಸ್ಥೆ ಪ್ರಬಂಧಕರಿಂದ ನಡೆಯಲಿದೆ. ಸಮಾವೇಶದ ವೇದಿಕೆಯಲ್ಲಿ ಐವರು ಮಹಿಳಾ ಲಾನುಭವಿಗಳಿಂದ ಪ್ರಧಾನಿ ಅವರಿಗೆ ಸನ್ಮಾನ ಮಾಡಲಾಗುವುದು. ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿರುವ ಹಾಗೂ ಗಣ್ಯ ವ್ಯಕ್ತಿಗಳಿಂದ ಸ್ವಾಗತ ಮಾಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

    ಮೋದಿ ಅವರ ಭಾಷಣ ಕೇಳುವ ಉತ್ಸಾಹದಲ್ಲಿ ಜನ ಇದ್ದಾರೆ. ಕಪ್ಪು ಚುಕ್ಕೆ ಇಲ್ಲದೇ ನರೇಂದ್ರ ಮೋದಿ ಹಾಗೂ ನಮ್ಮ ನಾಯಕರ ಬಗ್ಗೆ ಮಾತನಾಡಿರುವ ತಿಮ್ಮಾಪುರ ಹೇಳಿಕೆಗೆ ತಿರುಗೇಟು ಕೊಟ್ಟು ನಮ್ಮ ನಾಯಕರ ಮಕ್ಕಳ ಬಗ್ಗೆ ಮತಾಂತರ ಆಗಿ ಮದುವೆ ಮಾಡಿಕೊಂಡಿದ್ದಾರೆ ಎಂಬ ಹೇಳಿಕೆ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ. ಪಕ್ಷದ ಮುಖಂಡರ ಹೆಸರು ಬಳಕೆ ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ರಾಜಶೇಖರ ಶೀಲವಂತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಸತ್ಯನಾರಾಯಣ ಹೇಮಾದ್ರಿ, ಅಶೋಕ ಲಿಂಬಾವಳಿ, ಬಸವರಾಜ ಯಂಕಂಚಿ, ಜಯಂತ ಕುರಂದವಾಡ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts