More

    ಇತಿಹಾಸ ಸೃಷ್ಟಿಸಿದ ಮೋದಿ ರೋಡ್ ಶೋ; 10.7 ಕಿ.ಮೀ. ಉದ್ದಕ್ಕೂ ಸಂಚಲನ

    ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕುಂದಾನಗರಿ ಬೆಳಗಾವಿಯಲ್ಲಿ ಸೋಮವಾರ 10.7 ಕಿ.ಮೀ. ಉದ್ದದ ರೋಡ್ ಶೋ ನಡೆಸಿ, ಸಂಚಲನ ಮೂಡಿಸಿದರು. ಪೂರ್ಣಕುಂಭ ಹೊತ್ತ 10 ಸಾವಿರ ಮಹಿಳೆಯರು ಹಾಗೂ ಲಕ್ಷಾಂತರ ಜನರು ಮೋದಿ ಅವರನ್ನು ಸ್ವಾಗತಿಸಿದರು. ದಾರಿಯುದ್ದಕ್ಕೂ ಜನರು, ಮೋದಿ ಮೋದಿ.. ಎಂಬ ಘೋಷಣೆಗಳನ್ನು ಮೊಳಗಿಸಿದರು. ದೇಶದಲ್ಲೇ ಇದು ವಿಶೇಷ ರೋಡ್ ಶೋ ಎಂಬ ಇತಿಹಾಸ ಸೃಷ್ಟಿಸಿತು.

    ಸಾಂಬ್ರಾ ವಿಮಾನ ನಿಲ್ದಾಣದಿಂದ ಎಪಿಎಂಸಿ ಬಳಿಯ ಕಂಗ್ರಾಳಿಯ ಹೆಲಿಪ್ಯಾಡ್‌ಗೆ ಆಗಮಿಸಿದ ಬಳಿಕ ಪ್ರಧಾನಿ ಅವರು, ಎಪಿಎಂಸಿ ವೃತ್ತದಿಂದ ರೋಡ್ ಶೋ ಆರಂಭಿಸಿ, ಬಸವೇಶ್ವರ ವೃತ್ತ, ವೈ ಜಂಕ್ಷನ್, ಅಂಬೇಡ್ಕರ್ ರಸ್ತೆ, ಚನ್ನಮ್ಮ ವೃತ್ತ, ಸಂಭಾಜಿ ವೃತ್ತ, ರಾಮಲಿಂಗಖಿಂಡ್ ಗಲ್ಲಿ ಬೀದಿ, ಎಸ್‌ಬಿಎಂ ರಸ್ತೆ, ಶಿವಚರಿತ್ರೆ ಡಬಲ್ ರಸ್ತೆ, ಶಹಾಪುರ ಬಸವಣ್ಣ ಗಲ್ಲಿ, ಬೆಳಗಾವಿ ಹಳೇ ಪಿ.ಬಿ. ರಸ್ತೆ, ಯಡಿಯೂರಪ್ಪ ಮಾರ್ಗದ ಮೂಲಕ ಮಾಲಿನಿ ಸಿಟಿಯಲ್ಲಿ ಸಿದ್ಧಪಡಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ತಲುಪಿದರು.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ನಗರದಲ್ಲಿ ಸೇರಿದ್ದ ಲಕ್ಷಾಂತರ ಜನರು ಮೋದಿ ಅವರನ್ನು ಕಂಡು ಪುಳಕಿತರಾದರು. ರಸ್ತೆಯುದ್ದಕ್ಕೂ ಪುಷ್ಪ ಮಳೆಗೈಯ್ಯುವ ಮೂಲಕ ಸ್ವಾಗತಿಸಿದರು. 30ಕ್ಕೂ ಹೆಚ್ಚು ರಾಜ್ಯಗಳ 400ಕ್ಕೂ ಅಧಿಕ ಕಲಾವಿದರು, ಸುಮಾರು 90 ವೇದಿಕೆಗಳಲ್ಲಿ ಕಲಾ ಪ್ರದರ್ಶನ ಮಾಡಿದರು. ಕೇಂದ್ರ ಸರ್ಕಾರದ ಯೋಜನೆಗಳ ಅಣಕು ಪ್ರದರ್ಶನವೂ ನಡೆಯಿತು. 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಕೇಸರಿ ಪೇಟಾ ತೊಟ್ಟು ಪೂರ್ಣಕುಂಭದೊಂದಿಗೆ ಸ್ವಾಗತಿಸಿದ್ದು ವಿಶೇಷವಾಗಿತ್ತು. ಎಪಿಎಂಸಿ ವೃತ್ತದಿಂದ ಮಾಲಿನಿಸಿಟಿ ವರೆಗೆ ಸುಮಾರು 10.7 ಕಿ.ಮೀ. ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರು ಭದ್ರತೆ ಕಲ್ಪಿಸಿದ್ದರು. 10 ಸಾವಿರಕ್ಕೂ ಅಧಿಕ ಕೇಸರಿ ಧ್ವಜಗಳು ರಾರಾಜಿಸಿದವು.

    ಇದನ್ನೂ ಓದಿ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಗೆ ಸದ್ಯಕ್ಕಿಲ್ಲ ಟೋಲ್​!

    ಕೈ ಬೀಸಿ ರಂಜಿಸಿದ ಮೋದಿ

    10.7 ಕಿ.ಮೀ. ಉದ್ದಕ್ಕೂ ಕಿಕ್ಕಿರಿದು ಸೇರಿದ್ದ ಜನರನ್ನು ಕಂಡ ಮೋದಿ ಅತ್ಯುತ್ಸಾಹದಿಂದ ಕೈ ಬೀಸುತ್ತ ರಂಜಿಸಿದರು. ರೋಡ್ ಶೋ ಹಿನ್ನೆಲೆಯಲ್ಲಿ ಕಾರ್ಯಕರ್ತರು 10 ಕ್ವಿಂಟಾಲ್ ಪುಷ್ಪಗಳನ್ನು ಸಿದ್ಧಗೊಳಿಸಿಕೊಂಡಿದ್ದರು. ಅರ್ಧಗಂಟೆಗೂ ಹೆಚ್ಚು ಕಾಲ ರೋಡ್ ಷೋ ನಡೆಯಿತು. ಕಟ್ಟಡಗಳು, ಮನೆಗಳ ಮೇಲೆ ನಿಂತ ಕುಂದಾನಗರಿ ಜನರು ಮೋದಿ ರೋಡ್ ಶೋ ಕಣ್ತುಂಬಿಕೊಂಡರು. ರಸ್ತೆಗಳೆಲ್ಲ ಕೇಸರಿಮಯವಾಗಿದ್ದವು.

    ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು

    ಮೋದಿ ನೋಡುವ ಕಾತರ

    ಮೋದಿ ಅವರ ರೋಡ್ ಶೋ ಮಧ್ಯಾಹ್ನ 2.45ಕ್ಕೆ ಆರಂಭಗೊಳ್ಳುವ ಎರಡು ಗಂಟೆ ಮೊದಲೇ ರಸ್ತೆಯುದ್ದಕ್ಕೂ ಲಕ್ಷಾಂತರ ಜನರು ಮೋದಿ ರೋಡ್ ಷೋ ನೋಡುವುದಕ್ಕೆ ನಿಂತಿದ್ದರು. ‘ಮೋದಿ ಬಂದರು ನೋಡಿ…!, ಇಲ್ಲ ಇನ್ನೂ 5 ನಿಮಿಷ ತಡ ಮಾಡಿ ಬರುತ್ತಾರೆ, ಅದು ನೋಡಿ ಬಂದೇ ಬಿಟ್ಟರು…’ ಎನ್ನುತ್ತ ಒಂದು ಗಂಟೆ ಕನವರಿಕೆ ಮಾಡಿದರು. ಮೋದಿ ಬಂದ ಬಳಿಕ ಕೇಕೆ ಹಾಕಿದರು. ಪೂರ್ಣಕುಂಭ ಹೊತ್ತ ಮಹಿಳೆಯರು ಬಿಸಿಲಿನಲ್ಲೇ ಕಾಯ್ದು ಕುಳಿತಿದ್ದರು. ರೋಡ್ ಶೋ ಹಿನ್ನೆಲೆಯಲ್ಲಿ ಸುಮಾರು 2 ಗಂಟೆಗೂ ಅಧಿಕ ಕಾಲ ಸಂಚಾರ ವ್ಯವಸ್ಥೆ ಸ್ತಬ್ಧಗೊಂಡಿತ್ತು. ವಾಹನ ಸವಾರರು ಪರದಾಡುವಂತಾಯಿತು.

    ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಕೊಲೆಯಾದ ರೂಪದರ್ಶಿಯ ಕಾಲು ಫ್ರಿಡ್ಜ್​ನಲ್ಲಿತ್ತು!; ರುಂಡಕ್ಕಾಗಿ ಪೊಲೀಸರ ಹುಡುಕಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts