More

    ಪಿಎಂ ಕಿಸಾನ್​ 11ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ: ಈ ದಿನಾಂಕದಂದು ಹಣ ಜಮೆಯಾಗಲಿದೆ

    ನವದೆಹಲಿ: ಪಿಎಂ ಕಿಸಾನ್​ ಯೋಜನೆಯಲ್ಲಿ ಅರ್ಹ ರೈತರಿಗೆ ನೀಡಲಾಗುವ 2ಸಾವಿರ ರೂ. ನಗದು ಹಣದ 11ನೇ ಕಂತು ಶೀಘ್ರವೇ ರೈತರ ಖಾತೆಗೆ ತಲುಪಲಿದೆ.

    ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ 2 ಸಾವಿರ ರೂ. ಸಹಾಯಧನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಅಂತೆಯೇ ಈಗಾಗಲೇ 10 ಕಂತುಗಳಲ್ಲಿ ರೈತರು ಹಣವನ್ನು ಪಡೆದಿದ್ದಾರೆ.
    11ನೇ ಕಂತು ಈ ದಿನಾಂಕದಂದು ರೈತರ ಖಾತೆಗೆ ಜಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಯೋಜನೆಯಂತೆ ವಾರ್ಷಿಕ 6000 ರೂ.ಗಳನ್ನು ರೈತ ಖಾತೆಗೆ ಕೇಂದ್ರ ನೇರವಾಗಿ ಜಮೆ ಮಾಡುತ್ತದೆ. ಇದರಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರು ಇದರ ನೆರವನ್ನು ಪಡೆಯುತ್ತಿದ್ದಾರೆ.

    ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ.ಗಳಂತೆ ವಾರ್ಷಿಕ ನಗದನ್ನು ನೀಡಲಾಗುತ್ತದೆ. ಈ ಬಾರಿ ಮೇ 14 ರಂದು ರೈತರ ಖಾತೆಗೆ ನೇರವಾಗಿ 2000 ರೂ.ಹಣ ಬರಲಿದೆ ಎಂದು ಕೇಂದ್ರ ತಿಳಿಸಿದೆ.

    ಸಂಪೂರ್ಣ ತನಿಖೆ ಬಳಿಕವೇ ಪಿಎಸ್​ಐ ಮರುಪರೀಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ

    ಲಂಚ ಪಡೆಯುವ ವೇಳೆ ಎಸಿಬಿಗೆ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts