More

    ಭಾರತ-ಚೀನಾ ಗಡಿ ಕುರಿತು ಜೂ.19ಕ್ಕೆ ಸರ್ವ ಪಕ್ಷಗಳ ಸಭೆ ಕರೆದ ಮೋದಿ

    ನವದೆಹಲಿ: ಲಡಾಖ್​ನಲ್ಲಿ ಚೀನಾದೊಂದಿಗೆ ಸಂಭವಿಸಿದ ಘರ್ಷಣೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ(ಜೂ.19) ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

    ಶುಕ್ರವಾರ ಸಂಜೆ 5ಕ್ಕೆ ನಡೆಯುವ ವಿಡಿಯೋ ಕಾನ್ಫರೆನ್ಸ್​ನಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲಾಗುತ್ತದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಇದನ್ನೂ ಓದಿರಿ ಚೀನಾ ಕಂಪನಿಗಳನ್ನು ನಿಷೇಧಿಸಲು ಆರ್​ಎಸ್​ಎಸ್​ನ ಸ್ವದೇಶಿ ಜಾಗರಣ ಮಂಚ್ ಆಗ್ರಹ

    ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರಶ್ನೆ ಮಾಡುತ್ತಿರುವ ಪ್ರತಿ ಪಕ್ಷಗಳಿಗೂ ಆ ದಿನ ಪ್ರಧಾನಿ ಮೋದಿ ಅವರಿಂದ ಉತ್ತರ ಸಿಗಬಹುದು. ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ 45 ಸೈನಿಕರಿಗೆ ಸಾವು-ನೋವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಆದರೆ ಚೀನಾ ಯೋಧರ ಸಾವಿನ ಬಗ್ಗೆ ಅಲ್ಲಿನ ಮಾಧ್ಯಮಗಳಲ್ಲಿ ವರದಿ ಆಗಿಲ್ಲ.

    ಪದೇಪದೆ ಕ್ಯಾತೆ ತೆಗೆದು ಸಂಘರ್ಷಕ್ಕೆ ಬರುವ ಚೀನಾ, ಇದೀಗ ಭಾರತದ ಜತೆ ಮತ್ತಷ್ಟು ಸಂಘರ್ಷ ಬಯಸುವುದಿಲ್ಲ ಎನ್ನುವ ಮೂಲಕ ನಾಟಕ ಶುರು ಮಾಡಿದೆ.

    ಚೀನಾದ ಸಂಘರ್ಷ ಜತೆಗೆ ಕೋವಿಡ್‌19 ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜೂ.19ರಂದು ಪ್ರಧಾನಿ ಮೋದಿ ನಡೆಸುತ್ತಿರುವ ಸಭೆ ಭಾರೀ ಮಹತ್ವ ಪಡೆದಿದೆ.

    ಇದನ್ನೂ ಓದಿರಿ ಭಾರತ-ಚೀನಾ ಬಿಕ್ಕಟ್ಟು: ಕುತೂಹಲ ಮೂಡಿಸಿದ ಪ್ರಧಾನಿ ಮೋದಿಯವರ ನಡೆ…ಜೂ.19ರವರೆಗೆ ಕಾಯಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts