More

    ಚೀನಾ ಕಂಪನಿಗಳನ್ನು ನಿಷೇಧಿಸಲು ಆರ್​ಎಸ್​ಎಸ್​ನ ಸ್ವದೇಶಿ ಜಾಗರಣ ಮಂಚ್ ಆಗ್ರಹ

    ನವದೆಹಲಿ: ನಮ್ಮ ದೇಶದ ಸರ್ಕಾರಿ ಟೆಂಟರ್​ನಲ್ಲಿ ಪಾಲ್ಗೊಂಡಿರುವ ಚೀನಾದ ಎಲ್ಲ ಕಂಪನಿಗಳನ್ನೂ ನಿಷೇಧಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್(ಎಸ್‍ಜೆಎಂ) ಮಂಗಳವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಜತೆಗೆ ಚೀನಾದ ಉತ್ಪನ್ನಗಳನ್ನು ಜನರು ಬಹಿಷ್ಕರಿಸುವ ಮೂಲಕ ಹುತಾತ್ಮರಾದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದೆ.

    ಲಡಾಖ್​ನ ಗಡಿ ಭಾಗದಲ್ಲಿ ಚೀನಾ ಅಪ್ರಚೋದಿತ ತಂಟೆ ಮುಂದುವರಿಸಿದ ಗಡಿ ಬಿಕ್ಕಟ್ಟು ಉಲ್ಬಣಗೊಂಡಿದೆ. ಪೂರ್ವ ಲಡಾಕ್​ನ ಗಾಲ್ವಾನ್​ ಕಣಿವೆಯ 14ನೇ ಪಾಯಿಂಟ್​ ಬಳಿ ಸಂಭವಿಸಿದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ನಾಲ್ಕು ದಶಕದ ನಂತರ ನಡೆದ ದೊಡ್ಡ ಘರ್ಷಣೆ ಇದಾಗಿದೆ. ಇಡೀ ದೇಶವೇ ಚೀನಾದ ಉತ್ಪನ್ನಗಳನ್ನು ತ್ಯಜಿಸಬೇಕಾದ ಸಮಯ ಇದು. ಸಿನಿಮಾ ನಟರು, ಕ್ರಿಕೆಟಿಗರು ಮತ್ತು ಇತರ ಗಣ್ಯರು ಚೀನಾದ ಉತ್ಪನ್ನಗಳನ್ನು ಉತ್ತೇಜಿಸಬಾರದು ಎಂದು ಎಸ್‌ಜೆಎಂ ಸಹ-ಸಂಚಾಲಕ ಅಶ್ವಿನಿ ಮಹಾಜನ್ ಹೇಳಿದ್ದಾರೆ. ಇದನ್ನೂ ಓದಿರಿ ‘ಪುತ್ರ ಮಡಿದ ಸುದ್ದಿಯನ್ನು ಸೊಸೆಯೇ ತಿಳಿಸಿದಳು…ನೋವಿದೆ..ಅಷ್ಟೇ ಹೆಮ್ಮೆಯಿದೆ’: ಕರ್ನಲ್​ ತಾಯಿಯ ಕಣ್ಣೀರು

    ಚೀನಾ ಕಂಪನಿಗಳನ್ನು ನಿಷೇಧಿಸಲು ಆರ್​ಎಸ್​ಎಸ್​ನ ಸ್ವದೇಶಿ ಜಾಗರಣ ಮಂಚ್ ಆಗ್ರಹನಮ್ಮ ದೇಶದ ಸರ್ಕಾರಿ ಟೆಂಟರ್​ಗಳಲ್ಲಿ ಭಾಗವಹಿಸಿರುವ ಚೀನಾ ದೇಶದ ಕಂಪನಿಗಳಿಗೆ ಕೂಡಲೇ ನಿಷೇಧ ಹೇರಬೇಕು. ಚೀನಾದ ಯಾವುದೇ ವಸ್ತುಗಳನ್ನ್ನೂನು ಖರೀದಿಸಲು ಅವಕಾಶ ಮಾಡಿಕೊಡಬಾರದು ಎಂದು ಅಶ್ವಿನಿ ಮಹಾಜನ್ ಒತ್ತಾಯಿಸಿದ್ದಾರೆ.

    ಭಾರತದ ಮೇಲೆ ಆಕ್ರಮಣ ಮಾಡುವ ಮೂಲಕ ಕುತಂತ್ರ ಬುದ್ಧಿ ತೋರಿಸಿರುವ ಚೀನಾಕ್ಕೆ ಬಿಸಿ ಮುಟ್ಟಿಸುವಂತೆ ಆಗ್ರಹಿಸಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ), ಚೀನಾದ ಸರಕುಗಳನ್ನು ಬಹಿಷ್ಕರಿಸಲು ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ 450 ವಸ್ತುಗಳನ್ನು ಪಟ್ಟಿ ಮಾಡಿದೆ.

    ಮೊದಲ ಹಂತವಾಗಿ 2021ರ ಡಿಸೆಂಬರ್​ ಅಂತ್ಯದ ವೇಳೆಗೆ ಒಂದು ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದ್ದು, ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಸಿಎಐಟಿ ಕರೆಕೊಟ್ಟಿದೆ.

    ಇದನ್ನೂ ಓದಿರಿ ‘ಪುತ್ರ ಮಡಿದ ಸುದ್ದಿಯನ್ನು ಸೊಸೆಯೇ ತಿಳಿಸಿದಳು…ನೋವಿದೆ..ಅಷ್ಟೇ ಹೆಮ್ಮೆಯಿದೆ’: ಕರ್ನಲ್​ ತಾಯಿಯ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts