More

  ಲಿಂಗಾಯತ ಸಮಾವೇಶ ಜೂನ್​ 16ರಂದು

  ಕೊಪ್ಪಳ: ನಗರದ ಮಧುಶ್ರೀ ಗಾರ್ಡನ್​ನಲ್ಲಿ ಜೂನ್​ 16ರಂದು ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಕಾರಿ ಸಮಿತಿ ಸಭೆ ನಡೆಸಲು ಭಾನುವಾರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

  ಜೂ.16ರಂದು ಬೆಳಗ್ಗೆ ಮಹಾಸಭಾ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಸಂಜೆ 5 ಗಂಟೆಗೆ ಕೊಪ್ಪಳ ಜಿಲ್ಲೆಯ ಲಿಂಗಾಯತ ಸಾರ್ವಜನಿಕ ಸಮಾವೇಶ ಇರಲಿದೆ. ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಎಸ್​.ಎಂ. ಜಾಮದಾರ, ಚಿಂತಕಿ ಮೀನಾಕ್ಷಿ ಬಾಳಿ, ಬಸವ ಸಮಿತಿ ರಾಜ್ಯಾಧ್ಯಕ್ಷ ಡಾ.ಅರವಿಂದ ಜತ್ತಿ, ನಿವೃತ್ತ ನ್ಯಾಯಾಧೀಶ ನಾಗರಾಜ ಅರಳಿ, ಸಂಡೂರಿನ ವಿರಕ್ತ ಮಠದ ಪ್ರಭು ಮಹಾಸ್ವಾಮಿ ಭಾಗವಹಿಸಲಿದ್ದಾರೆಂದು ಸಭೆಯಲ್ಲಿ ತಿಳಿಸಿದರು.

  ಮಹಾಸಭಾ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶದ ಅವಶ್ಯಕತೆ ಮತ್ತು ಭವಿಷ್ಯದ ಮೀಸಲಾತಿ ಸೌಲಭ್ಯಗಳ ಕುರಿತಾಗಿ ಚರ್ಚಿಸಲಾಯಿತು. ಪ್ರಮುಖರಾದ ಗವಿಸಿದ್ದಪ್ಪ ಕೊಪ್ಪಳ, ಬಸವರಾಜ ಬಳ್ಳೊಳ್ಳಿ, ಸೋಮನಗೌಡ ಪಾಟೀಲ್​, ಶರಣಪ್ಪ ಹ್ಯಾಟಿ, ವಿರೂಪಾಕ್ಷಪ್ಪ ಮುರಳಿ ಇತರರು ಅನಿಸಿಕೆ ಹಂಚಿಕೊಂಡರು.

  ಮಹಾಸಭಾದ ಶಿವುಕುಮಾರ ಕುಕನೂರು, ದ್ಯಾಮಣ್ಣ ಹಡಪದ, ಸಿದ್ಧಪ್ಪ ಹಂಚಿನಾಳ, ಗಾಳೆಪ್ಪ ಕಡೆಮನಿ, ಸಿದ್ಧಣ್ಣ ಜಕ್ಕಲಿ, ಕೃಷ್ಣಪ್ಪ ಕಟ್ಟಿಮನಿ, ಕಿಶೋರಿ ಬೂದನೂರ, ಅಪರ್ಣ ಬಳ್ಳೊಳ್ಳಿ, ನಿರ್ಮಲಾ ಬಳ್ಳೊಳ್ಳಿ, ಡಾ. ಸಂಗಮೇಶ ಕಲಹಾಳ, ಛತ್ರಪ್ಪ ಮಡಿವಾಳರ, ಅರ್ಚನಾ ಸಸಿಮಠ, ಯಲ್ಲಪ್ಪ ಮೇಟಿ, ಬಸವರಾಜ ಕಲ್ಮಂಗಿ, ಎ.ಕೆ. ಮಹೇಶ, ರಾಜಮ್ಮ ಕಾತರಕಿ ಸೇರಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts