More

    ನಾವ್ಯಾರೂ ಆರಾಮಾಗಿಲ್ಲ.. ಪ್ಲೀಸ್ ಒಬ್ರಿಗೊಬ್ರು ಹೆಲ್ಪ್​ ಮಾಡಿ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ

    ಮುಂಬೈ: ಕರೊನಾ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ದೇಶದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲೂ ಭಾರಿ ಪ್ರಮಾಣದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಪ್ರಯತ್ನವಾಗಿ ಕರ್ನಾಟಕ ಸರ್ಕಾರ ಅನಿವಾರ್ಯವಾಗಿ ಮುಂದಿನ 14 ದಿನಗಳ ಕಾಲ ಕ್ಲೋಸ್​ ಡೌನ್​ ಜಾರಿಯಲ್ಲಿ ಇಡುವುದಾಗಿ ಘೋಷಿಸಿದೆ. ಈ ಮಧ್ಯೆ ಕರೊನಾ ಪರಿಸ್ಥಿತಿಯಿಂದ ಭಾವುಕರಾಗಿರುವ ನಟಿ ಶಿಲ್ಪಾ ಶೆಟ್ಟಿ, ‘ನಾವ್ಯಾರೂ ಆರಾಮಾಗಿಲ್ಲ.. ಒಬ್ರಿಗೊಬ್ರು ಹೆಲ್ಪ್​ ಮಾಡಿ..’ ಎಂಬ ಸಂದೇಶದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

    ‘ನಾನು ಆರಾಮಾಗಿಲ್ಲ, ಇರೋಕೂ ಸಾಧ್ಯವಿಲ್ಲ.. ನಾವ್ಯಾರೂ ಆರಾಮಾಗಿಲ್ಲ. ಜಗತ್ತಿನಲ್ಲೆಡೆ ಹಾಗೂ ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನ ನಮ್ಮನ್ನು ತುಂಬಾ ನೋಯಿಸುತ್ತಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರು, ಪೋಷಕರನ್ನು ಕಳೆದುಕೊಂಡ ಮಕ್ಕಳು, ಕೊನೆಯ ಕ್ಷಣದಲ್ಲೂ ತಮ್ಮ ಪ್ರೀತಿಪಾತ್ರರ ಮುಖ ನೋಡಲಾಗದ ಪರಿಸ್ಥಿತಿ, ಕಡೆಗೆ ಅವರ ಅಂತಿಮ ಕಾರ್ಯವನ್ನೂ ಮಾಡಲಾಗದ ಅಸಹಾಯಕತೆ ಮುಂತಾದವೆಲ್ಲ ಮನಸ್ಸಿಗೆ ತುಂಬಾ ನೋವನ್ನು ನೀಡುತ್ತಿವೆ’ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಉಸಿರುಗಟ್ಟಿ ನರಳಾಡಿದ ಕೋವಿಡ್​ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ

    ‘ಕೋವಿಡ್​ಗೆ ನಾವು ಬರೀ ಜನರು. ಆದರೆ ನಾವು ಹಸಿವಿನಿಂದ, ಆಕ್ಸಿಜನ್​ ಕೊರತೆಯಿಂದ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ್ದರಿಂದ ಜನರನ್ನು ಕಳೆದುಕೊಳ್ಳುತ್ತಿದ್ದೇವೆ. ಇಂಥ ಸಮಯದಲ್ಲಿ ನಾವು ಒಬ್ಬರಿಗೊಬ್ಬರು ಸಹಾಯ ಮಾಡುವ ಅಗತ್ಯವಿದೆ. ದಯವಿಟ್ಟು ಕಷ್ಟದಲ್ಲಿ ಇರುವವರಿಗೆ, ಹಸಿವಿನಲ್ಲಿ ಇರುವವರಿಗೆ ಸಹಾಯ ಮಾಡಿ. ನಾನೂ ನನ್ನದೇ ಆದ ರೀತಿಯಲ್ಲಿ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದೇನೆ. ನೀವೂ ನಿಮ್ಮಿಂದಾದ ಸಹಾಯ ನಿಮ್ಮ ಸುತ್ತಮುತ್ತ ಇರುವವರಿಗೆ ಮಾಡಿ’ ಎಂಬುದಾಗಿ ಅವರು ಕೋರಿಕೊಂಡಿದ್ದಾರೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿರುವ ಶಿಲ್ಪಾ, ಅವರಿಗೂ ತಮ್ಮ ಧನ್ಯವಾದಗಳನ್ನು ತಿಳಿಸಿದ್ದಾರೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Shilpa Shetty Kundra (@theshilpashetty)

    ಲಿಂಬೆರಸ, ಕೊಬ್ಬರಿ ಎಣ್ಣೆ, ಸ್ಟೀಮ್, ಬಿಸಿ ನೀರು: ಕರೊನಾಗೆ ಮನೆಮದ್ದು- ಡಾ. ವಿಜಯ ಸಂಕೇಶ್ವರ ಸಲಹೆ

     

    ಉಸಿರಾಟದ ಸಮಸ್ಯೆಯೇ..? ತುರ್ತು ಪರಿಹಾರಕ್ಕೆ ಇಲ್ಲಿದೆ ಸುಲಭದ ಮನೆಮದ್ದು..

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts