More

    PHOTOS|ಹಂದಿಯನ್ನು ಬೆತ್ತಲೆಯಾಗಿ ಬೆನ್ನಟ್ಟಿದ ವ್ಯಕ್ತಿ: ಹಳದಿ ಬಣ್ಣದ ಬ್ಯಾಗ್​ನಲ್ಲಿ ಅಂಥದ್ದೇನಿದೆ?

    ಬರ್ಲಿನ್​(ಜರ್ಮನಿ): ಹಂದಿಯೊಂದನ್ನು ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಬೆನ್ನಟ್ಟುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬರ್ಲಿನ್​ನ ಗ್ರನ್​ವೆಲ್​ ಫಾರೆಸ್ಟ್​ನ ಬಾತಿಂಗ್ ಸ್ಪಾಟ್ ಆಗಿರುವ ಟ್ಯೂಫೆಲ್ಸೀ ಲೇಕ್​ನಲ್ಲಿ ಈ ಘಟನೆ ನಡೆದಿರುವುದು. ಬೆತ್ತಲೆ ವ್ಯಕ್ತಿ ಹಂದಿಯನ್ನು ಅಟ್ಟಿಸಿಕೊಂಡು ಹೋಗ್ತಾ ಇರೋದನ್ನು ನೋಡಿ ಜನ ದಂಗಾಗಿ ನಿಂತಿರುವ ದೃಶ್ಯ ಮತ್ತು ಹಂದಿಯ ಹಿಂದೆಯೇ ಎರಡು ಹಂದಿಮರಿಗಳೂ ಓಡ್ತಿರೋ ದೃಶ್ಯ ಫೋಟೋದಲ್ಲಿವೆ.

    ಅಡೆಲೆ ಲಾಂಡೌರ್​ ಎಂಬ ಮಹಿಳೆ ಈ ಫೋಟೋಗಳನ್ನು ತೆಗೆದು ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ​ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ ಅವರು ಕೊಟ್ಟ ವಿವರಣೆ ಹೀಗಿದೆ- ನೇಚರ್ ಸ್ಟ್ರೈಕ್ಸ್ ಬ್ಯಾಕ್​! ಬಿಡಾಡಿ ಹಂದಿ ಟ್ಯೂಫೆಲ್ಸೀಯಲ್ಲಿ ಬೇಟೆಗಿಳಿದುದು ಹೀಗೆ.. ಲೇಕ್​ನಲ್ಲಿ ಈಜಾಡುತ್ತಿದ್ದ ವ್ಯಕ್ತಿಯ ಬ್ಯಾಗ್​ನಿಂದ ಪಿಜ್ಜಾ ತಿಂದು ತೇಗಿದ ಬಿಡಾಡಿ ಹಂದಿ ಮತ್ತು ಅದರ ಮರಿಗಳು ಇನ್ನೂ ಹೆಚ್ಚಿನ ತಿನಿಸಿಗಾಗಿ ಹುಡುಕಾಡುತ್ತಿದ್ದವು. ಆಗ ಅವುಗಳ ಕಣ್ಣಿಗೆ ಹಳದಿ ಬಣ್ಣದ ಬ್ಯಾಗ್ ಬಿದ್ದಿದೆ. ಸೀದಾ ಮುನ್ನುಗ್ಗಿ ಹಳದಿ ಬಣ್ಣದ ಬ್ಯಾಗ್ ಕಚ್ಚಿಕೊಂಡು ಓಡತೊಡಗಿತು. ಲೇಕ್​ನಲ್ಲಿ ಈಜಾಡುತ್ತಿದ್ದ ಈ ವ್ಯಕ್ತಿ ಸೀದಾ ಹುಟ್ಟುಡುಗೆಯಲ್ಲೇ ಓಡತೊಡಗಿದ.

    ಇದನ್ನೂ ಓದಿ: ರಫೆಲ್​ ಸ್ಕ್ವಾಡ್ರನ್​ ​ನಲ್ಲಿದ್ದವರು ಏರ್​ಇಂಡಿಯಾ ಪೈಲಟ್​ ಕ್ಯಾಪ್ಟನ್​ ದೀಪಕ್ ಸಾಠೆ

    ಜನ ದಂಗಾಗಿ ಹೋದ್ರು.. ಹಂದಿ ಕಚ್ಚಿಕೊಂಡು ಓಡ್ತಾ ಇರುವ ಆ ಹಳದಿ ಬಣ್ಣದ ಬ್ಯಾಗ್​ನಲ್ಲಿ ಅಂಥಾದ್ದೇನಿಯಪ್ಪಾ ಎಂಬ ಕಮೆಂಟ್​ಗಳು ಕೇಳಿದ್ವು. ನಾನು ಈ ಕ್ಷಣಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದೆ. ಬಳಿಕ ನಾನು ಈ ಫೋಟೋಗಳನ್ನು ಆ ಮನುಷ್ಯನಿಗೆ ಆಮೇಲೆ ತೋರಿಸಿದೆ. ಆತ ಜೋರಾಗಿ ನಕ್ಕು… ಅದನ್ನು ಸಾರ್ವಜನಿಕವಾಗಿ ಅಪ್ಲೋಡ್ ಮಾಡುವುದಕ್ಕೆ ಅನುಮತಿ ನೀಡಿದ. ಅಂದ ಹಾಗೆ, ಹಂದಿ ಕಚ್ಚಿಕೊಂಡು ಹೋದ ಹಳದಿ ಬಣ್ಣದ ಬ್ಯಾಗ್​ನಲ್ಲಿ ಆ ಮನುಷ್ಯನ ಲ್ಯಾಪ್​ಟಾಪ್​ ಇದೆ. ಅದು ಆತನ ಪಾಲಿಗೆ ಸರ್ವಸ್ವ. ಹೀಗಾಗಿ ಬೆತ್ತಲೆಯಾಗಿ ಓಡಿದ್ದ..

    ಇದನ್ನೂ ಓದಿ: ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಪಾಕಿಸ್ತಾನದ ಮೇಲೆ ‘ಡಿ-ಕಂಪನಿ’ ಪ್ರಹಾರ ನಡೆಸಿದ ಭಾರತ

    ಜರ್ಮನಿಯಲ್ಲಿ ಅನೇಕ ಬೀಚ್​ ಮತ್ತು ಸರೋವರಗಳಲ್ಲಿ ಜನ ಹುಟ್ಟುಡುಗೆಯಲ್ಲಿ ಈಜಾಡೋದಕ್ಕೆ ಅಥವಾ ಅದರ ತಟದಲ್ಲಿ ಸೂರ್ಯಸ್ನಾನ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ. ಇದು ಅಲ್ಲಿನ ಫ್ರೀ ಬಾಡಿ ಕಲ್ಚರ್​ನ ಒಂದು ಭಾಗವಷ್ಟೆ. (ಏಜೆನ್ಸೀಸ್)

    ಪಳನಿಯಲ್ಲಿ ಮನೆ ಬಾಗಿಲ ಬಳಿ ನೇತಾಡುತ್ತಿತ್ತು ಮನುಷ್ಯ ತಲೆಬುರಡೆ, ಎಲುಬುಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts